Poonam Pandey: ಸತ್ತು ಬದುಕಿದ ನಟಿ ಪೂನಂ ಪಾಂಡೆ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ!
ಮುಂಬೈ, ಫೆಬ್ರವರಿ.12: ಸಿನಿಮಾಗಳಿಂದ ಸದ್ದು ಮಾಡದಿದ್ದರೂ ನಟಿ ಪೂನಂ ಪಾಂಡೆ ವಿವಾದಗಳಿಂದ, ಬೋಲ್ಡ್ ಹೇಳಿಕೆಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಇತ್ತೀಚೆಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತನ್ನ ಸಾವಿನ ನಕಲಿ ಸುದ್ದಿ ಹರಿಬಿಟ್ಟು ಸಕತ್ ಟ್ರೋಲ್‌ಗೆ ಒಳಗಾಗಿದ್ದರು.
ಪೂನಂ ಪಾಂಡೆ ಮೃತಪಟ್ಟಿದ್ದಾರೆ ಎಂದು ಇಡೀ ದೇಶವೇ ತಿಳಿದುಕೊಂಡಿತ್ತು. ಆದರೆ, ಒಂದು ದಿನದ ನಂತರ ತಾನು ಬದುಕಿದ್ದೇನೆ ಎಂದು ಸಾಮಾಜಿಕ ಜಾಲತನಾಣಗಳಲ್ಲಿ ಕಾಣಿಸಿಕೊಂಡರು. ತಾನು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಸಾಹಸಕ್ಕೆ ಕೈ ಹಾಕಿದೆ ಎಂದೂ ಹೇಳಿದ್ದರು. ಇದು ಸಕತ್ ಟ್ರೋಲ್‌ಗೆ ಒಳಗಾಗಿತ್ತು. ಈಗ ಇದೇ ವಿಚಾರದಲ್ಲಿ ನಟಿ ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಈ ಹಿಂದೆಯೂ ನಟಿ ಪೂನಂ ಪಾಂಡೆ ವಿರುದ್ಧ ಹಲವು ಮಂದಿ ದೂರು ದಾಖಲಿಸಿದ್ದಾರೆ. ಇದಾದ ಬೆನ್ನಲ್ಲೇ ಇಂತಹ ಅಗ್ಗದ ಪ್ರಚಾರ ಮಾಡಿದ್ದಕ್ಕಾಗಿ ನಟಿ ಪೂನಂ ಪಾಂಡೆ ಮತ್ತು ಆಕೆಯ ಪತಿ ಸ್ಯಾಮ್ ಬಾಂಬೆ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಪೂನಂ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ
ನಟಿ ಪೂನಂ ಪಾಂಡೆ ವಿರುದ್ಧ ಕಾನ್ಪುರ ಪೊಲೀಸ್ ಆಯುಕ್ತರ ಬಳಿ ಎಫ್‌ಐಆರ್ ದಾಖಲಿಸಲಾಗಿದೆ. ಫೈಜಾನ್ ಅನ್ಸಾರಿ ಎಂಬುವವರು ದೂರು ದಾಖಲಿಸಿದ್ದಾರೆ. ಪೂನಂ ಪಾಂಡೆ ಮತ್ತು ಆಕೆಯ ಪತಿ ಸ್ಯಾಮ್ ಬಾಂಬೆ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ದಂಪತಿ ವಿರುದ್ಧ ಬಂಧನ ವಾರಂಟ್ ಹೊರಡಿಸಿ ಅವರನ್ನು ಕಾನ್ಪುರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ತಮ್ಮ ದೂರಿನಲ್ಲಿ ಫೈಜಾನ್ ಅನ್ಸಾರಿ ಮನವಿ ಮಾಡಿದ್ದಾರೆ. ''ಪೂನಂ ಪಾಂಡೆ ಮತ್ತು ಆಕೆಯ ಪತಿ ಸ್ಯಾಮ್ ಬಾಂಬೆ ಇಬ್ಬರೂ ಸೇರಿ ಆಕೆಯ ನಕಲಿ ಸಾವಿನ ಸಂಚು ರೂಪಿಸಿದ್ದರು. ಅದೇ ಸಮಯದಲ್ಲಿ ಕ್ಯಾನ್ಸರ್‌ನಂತಹ ಕಾಯಿಲೆಯ ಬಗ್ಗೆ ದೊಡ್ಡ ಜೋಕ್ ಮಾಡಲಾಗಿದೆ. ಪೂನಂ ಪಾಂಡೆ ತನ್ನ ಸ್ವಂತ ಪ್ರಚಾರಕ್ಕಾಗಿ ಈ ಪ್ಲ್ಯಾನ್ ಮಾಡಿದ್ದಾರೆ. ಇದರಿಂದ ಕೋಟಿಗಟ್ಟಲೆ ಭಾರತೀಯರು ಮತ್ತು ಇಡೀ ಬಾಲಿವುಡ್ ಉದ್ಯಮದ ನಂಬಿಕೆಯೊಂದಿಗೆ ಆಟ ಆಡಿದ್ದಾರೆ" ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಫೆಬ್ರವರಿ 2 ರಂದು, ಪೂನಂ ಪಾಂಡೆ ತಂಡವು ಗುರುವಾರ ರಾತ್ರಿ ಅವರು 32 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಹೇಳಿಕೊಂಡಿತ್ತು. "ಈ ಬೆಳಗ್ಗೆ ನಮಗೆ ತುಂಬಾ ನೋವಿನ ವಿಷಯ ತಿಳಿದಿದೆ. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ತಿಳಿಸಲು ತುಂಬಾ ದುಃಖವಾಗುತ್ತಿದೆ" ಎಂದಿದ್ದರು. ನಂತರ, ಶನಿವಾರ, ಪೂನಂ ಪಾಂಡೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡು ತಾನು ಬದುಕಿರುವುದಾಗಿಯೂ, ಇದು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮಾಡಿದ ಪ್ರಯತ್ನ ಎಂದು ಹೇಳಿದ್ದರು.












Click it and Unblock the Notifications