Payal Rajput: ನ್ಯಾಯ ಬೇಕು ಎಂದು ಪಟ್ಟು ಹಿಡಿದ ಹೆಡ್ ಬುಷ್ ನಟಿ ಪಾಯಲ್ ರಜಪೂತ್
ಮುಂಬೈ, ಮೇ. 20: ಇತ್ತೀಚೆಗೆ ಡೈರೆಕ್ಟರ್ಸ್ ಡೇ ಕಾರ್ಯಕ್ರಮದಲ್ಲಿ ಪಾಯಲ್ ರಜಪೂತ್ ಅವರ ಇತ್ತೀಚಿನ ಚಿತ್ರ 'ರಕ್ಷಣಾ' ಟ್ರೇಲರ್ ಅನ್ನು ಅನಾವರಣಗೊಳಿಸಲಾಗಿದೆ. ಕಾರ್ಯಕ್ರಮ ನಡೆದ ಬೆನ್ನಲ್ಲೇ ನಟಿ ಈ ಚಿತ್ರದ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನಗೆ ನ್ಯಾಯ ಬೇಕು ಎಂದು ಮನವಿ ಮಾಡಿದ್ದಾರೆ.
ಕನ್ನಡದ ಹೆಡ್ ಬುಷ್ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಜೊತೆಗೆ ನಟಿಸಿದ್ದ ಮಂಗಳಾವರಂ ಸಿನಿಮಾ ಮೂಲಕ ಸಕತ್ ಸದ್ದು ಮಾಡಿದ್ದ ನಟಿ ಪಾಯಲ್ ರಜಪೂತ್. ಈಗ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಚಲನಚಿತ್ರದ ನಿರ್ಮಾಪಕರ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಬಾಕಿಯನ್ನು ಪಾವತಿಸಲು ವಿಫಲರಾದ ಕಾರಣ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ರಕ್ಷಣಾ ಸಿನಿಮಾ ಮೇಲೆ ಪಾಯಲ್ ಗರಂ
ನಟಿ ಪಾಯಲ್ ರಜಪೂತ್ ತನ್ನ ಅಧಿಕೃತ ಹೇಳಿಕೆಯಲ್ಲಿ, ರಕ್ಷಣಾ ಚಲನಚಿತ್ರವನ್ನು ಪ್ರಚಾರ ಮಾಡದಿದ್ದರೆ ನಿರ್ಮಾಪಕರು ತೆಲುಗು ಚಿತ್ರಗಳಿಂದ ನಿಷೇಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚಿನ ಸಭೆಗಳಲ್ಲಿ ನಿರ್ಮಾಪಕರು 'ಅನುಚಿತ' ಭಾಷೆ ಬಳಸಿದ್ದಾರೆ ಎಂದು ಪಾಯಲ್ ಆರೋಪಿಸಿದ್ದಾರೆ.
ಪಾಯಲ್ ಅವರ ತಂಡವು ಪ್ರಚಾರಕ್ಕಾಗಿ ಅವರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದೆ. ಆದರೆ ಅವರು ತಮ್ಮ ಬಾಕಿಯನ್ನು ಪಾವತಿಸಲು ನಿರಾಕರಿಸಿದ್ದಾರೆ. "ನಾನು 2019 ಮತ್ತು 2020 ರಲ್ಲಿ ನಟಿಸಿದ್ದ ರಕ್ಷಣ ಎಂಬ ಚಲನಚಿತ್ರವಿದೆ. ಇದನ್ನು ಮೂಲತಃ 5Ws ಎಂದು ಹೆಸರಿಸಲಾಗಿತ್ತು. ಚಿತ್ರದ ಬಿಡುಗಡೆಯು ವಿಳಂಬವಾಯಿತು. ಆದರೆ, ನಿರ್ಮಾಪಕಕರು ಈಗ ನನ್ನ ಇತ್ತೀಚಿನ ಯಶಸ್ಸಿನ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನನ್ನ ಬಾಕಿ ಕೂಡ ಪಾವತಿಸದೆ ಪ್ರಚಾರಕ್ಕೆ ಬರಬೇಕು ಎಂದು ಹೇಳುದ್ದಾರೆ. ನಾನು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಈಗ ಸಮಯವಿಲ್ಲ ಎಂದು ನನ್ನ ತಂಡ ತಿಳಿಸಿದೆ. ಆದರೆ , ಅವರು ನನ್ನನ್ನು ತೆಲುಗು ಚಿತ್ರರಂಗದಿಂದ ನಿಷೇಧಿಸುವ ಬೆದರಿಕೆ ಹಾಕಿದ್ದಾರೆ" ಎಂದು ತಿಳಿಸಿದ್ದಾರೆ.
An important message to my fans and the film fraternity. #needjustice pic.twitter.com/u96QVbWEdT
— paayal rajput (@starlingpayal) May 19, 2024
"ನಮ್ಮ ತಂಡವು "ರಕ್ಷಣಾ" ಡಿಜಿಟಲ್ ಪ್ರಚಾರಕ್ಕಾಗಿ ಮಾತುಕತೆ ನಡೆಸಲು ಪ್ರಯತ್ನಿಸಿದೆ. ಬಾಕಿಯನ್ನು ನೀಡುವಂತೆ ಕೂಡ ತಿಳಿಸಿದೆ. ಆದರೆ, ಅವರು ರಾಜಿ ಮಾಡಿಕೊಳ್ಳಲು ನಿರಾಕರಿಸಿದರು. ನನ್ನ ಹೆಸರನ್ನು ಹಾಳುಮಾಡುವ ರೀತಿಯಲ್ಲಿ ಬಳಸಿದರು, ಇದು ಸ್ವೀಕಾರಾರ್ಹವಲ್ಲ. ತನ್ನ ಒಪ್ಪಿಗೆಯಿಲ್ಲದೆ ಚಿತ್ರವನ್ನು ಬಿಡುಗಡೆ ಮಾಡಲು ಬಯಸುತ್ತಿರುವ ಕಾರಣ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಯೋಜಿಸುತ್ತಿದ್ದೇವೆ" ಎಂದು ಪಾಯಲ್ ಬರೆದಿದ್ದಾರೆ. ಪಾಯಲ್ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಅವರ ಅಭಿಮಾನಿಗಳು ನಟಿಗೆ ಬೆಂಬಲವನ್ನು ನೀಡಿ, ಬಾಕಿ ಪಾವತಿಸುವಂತೆ ನಿರ್ಮಾಪಕರನ್ನು ಒತ್ತಾಯಿಸಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications