Pavithra Gowda: ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ : ಲಾಯರ್ ಅಚ್ಚರಿಯ ಹೇಳಿಕೆ
ಬೆಂಗಳೂರು, ಆಗಸ್ಟ್ 23: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 7 ಆರೋಪಿಗಳ ಜಾಮೀನು ಕ್ಯಾನ್ಸಲ್ ಆಗಿದೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದಾಗಿದ್ದು ಎಲ್ಲರನ್ನೂ ಪೊಲೀಸರು ಅರೆಸ್ಟ್ ಮಾಡಲಿದ್ದಾರೆ. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ದರ್ಶನ್ ಆಂಡ್ಯ ಗ್ಯಾಂಗ್ ಗೆ ಇದೀಗ ಮತ್ತೆ ಅರೆಸ್ಟ್ ಆಗಿದ್ದು, ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.
ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ಕನ್ನಡ ಚಿತ್ರರಂಗದ ನಟಿ, ಮಾಡೆಲ್, ಉದ್ಯಮಿ ಹಾಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರು ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ A1 ಆರೋಪಿಯಾಗಿದ್ದರೇ, ನಟ ದರ್ಶನ್ A2 ಆರೋಪಿಯಾಗಿದ್ದಾರೆ. ನಟಿ ಪವಿತ್ರಾ ಗೌಡ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಾಮೆಂಡ್ ಗಳು ಬರುತ್ತಿರುತ್ತಿದ್ದು, ಈ ನಡುವೆ ಪವಿತ್ರಾ ಗೌಡ ಅವರಿಗೆ ತುಂಬಾ ಕಷ್ಟ ಇದೆ ಎಂದು ಲಾಯರ್ ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ನಟಿ ಪವಿತ್ರಾ ಗೌಡ ಅವರು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರ ಪರವಾಗಿ ವಾದ ಮಾಡಲು ಹಿರಿಯ ವಕೀಲ ಬಾಲನ್ ಅವರು ತಯಾರಾಗಿದ್ದಾರೆ. ಪವಿತ್ರಾ ಗೌಡಗೆ ಜಾಮೀನು ಕೊಡಿಸಲು ಅವರ ಪರ ಲಾಯರ್ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಒಬ್ಬ ಮಗಳು ಹಾಗೂ ವಯಸ್ಸಾದ ತಂದೆ ತಾಯಿ ಇದ್ದಾರೆ ಎಂಬ ಕಾರಣವನ್ನ ನೀಡಲಾಗಿತ್ತು. ಇದೀಗ ಬೇರೊಂದು ಕಾರಣವನ್ನು ನೀಡಿ ಜಾಮೀನಿಗೆ ಅರ್ಜಿ ಹಾಕಲು ಅವರು ನಿರ್ಧರಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ಬಗ್ಗೆ ಮಾತನಾಡುವಾಗ ಪವಿತ್ರಾ ಗೌಡ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಲಾಯರ್ ಬಾಲನ್ ಅವರು ವಿವರಿಸಿದ್ದಾರೆ. ಜೈಲಿನಲ್ಲಿ ಇರುವ ಯಾರೂ ಕೂಡ ದೊಡ್ಡ ಶ್ರೀಮಂತರಲ್ಲ. ಸುಮಾರು ಜನ ಬಡವರೇ ಇರುತ್ತಾರೆ. ಪವಿತ್ರಾ ಗೌಡ ಕೂಡ ದೊಡ್ಡ ಶ್ರೀಮಂತೆ ಅಲ್ಲ. ಪವಿತ್ರಾ ಗೌಡ ಅವರು ಸಿನಿಮಾದಲ್ಲಿ ನಟಿಸಿ ಹತ್ತಾರು ವರ್ಷ ಆಗಿದೆ. ಅವರವರ ಕಷ್ಟಗಳು ಅವರಿಗೆ ಇರುತ್ತದೆ. ಅವರಿಗೂ ಮಗಳು ಇದ್ದಾಳೆ. ತಂದೆ-ತಾಯಿ ಇದ್ದಾರೆ. ಸಂಪಾದನೆ ಇಲ್ಲ. ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ ಎಂದು ಲಾಯರ್ ಅಚ್ಚರಿ ಹೇಳಿಕೆಯನ್ನ ನೀಡಿದ್ದಾರೆ.
ಇನ್ನೂ ಪವಿತ್ರಾ ಗೌಡ ಅವರು ಎರಡನೇ ಬಾರಿ ಅರೆಸ್ಟ್ ಆಗುವುದಕ್ಕೂ ಮೊದಲು ಪವಿತ್ರಾ ಗೌಡ ಅವರ ವಕೀಲರಾದ ನಾರಾಯಣ್ ಸ್ವಾಮಿ ಅವರು ಖಾಸಗಿ ಚಾನೆಲ್ ನಲ್ಲಿ ಮಾತನಾಡಿದ್ದರು. ಪವಿತ್ರಾ ಗೌಡ ಅವರ ಬಳಿ ರೇಂಜ್ ರೋವರ್ ಕಾರ್ ಬರಲು ನಟ ದರ್ಶನ್ ಕಾರಣ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. ಇದಕ್ಕೆ ಪವಿತ್ರಾ ಗೌಡ ಪರ ವಕೀಲ ನಾರಾಯಣ್ ಸ್ವಾಮಿ ಅವರು, ಪವಿತ್ರಾ ಗೌಡ ತುಂಬ ಸ್ವಾವಲಂಬಿ, ತಾನು ಬೆಳೆದು, ತನ್ನ ಮಗಳನ್ನು ಬೆಳೆಸಬೇಕು ಎಂದು ಬಯಸುವ ವ್ಯಕ್ತಿತ್ವ ಅವರದ್ದು. ಕೋರ್ಟ್‌ಗೆ ಅವರು ರೆಡಿಯಾಗಿ ಬಂದ್ರೆ ಏನು ತಪ್ಪು? ಏನು ಗತಿ ಇಲ್ಲದೆ ಬರಬೇಕಾ? ಹಣದ ವಿಚಾರದಲ್ಲಿ ಜೋರಿದ್ದಾರೆ. ಪವಿತ್ರಾ ಗೌಡ ಅವರ ತಂದೆ ಸಹ ಶ್ರೀಮಂತರು, ಅವರ ತಾತ ಆಗಿನ ಕಾಲದಲ್ಲಿ ಹಣಕಾಸು ವಿಚಾರದಲ್ಲಿ ಮುಂದಿದ್ದಾರೆ. ಇವರ ಅಪ್ಪ ಪುಟ್ಟಣ್ಣ ಕೂಡ ರಿಚ್. ಈಗಲೂ ಅವರ ಅಪಾರ್ಟ್‌ಮೆಂಟ್‌ಗಳು, ಮನೆಗಳು, ಲ್ಯಾಂಡ್ ಇದೆ. ಅಪ್ಪ ಕೊಡಿಸಿರುವ ರೇಂಜ್ ರೋವರ್ ಕಾರ್‌ಗೆ ನಟಿ ಪವಿತ್ರಾ ಗೌಡ ಅವರು ಈಗಲೂ ಬಡ್ಡಿ ಕಟ್ಟುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications