ಈ ಮುದ್ದಾದ ಗೊಂಬೆ ಯಾವ ನಟಿಯ ಮಗುವೆಂದು ಗೆಸ್ ಮಾಡಿ
ನಟಿ ಹರ್ಷಿಕಾ ಪೂಣಚ್ಚ, ಮಿಲನಾ ನಾಗರಾಜ್, ಕವಿತಾ ಗೌಡ ಸೇರಿದಂತೆ ಕನ್ನಡ ಕಿರುತೆರೆ ಹಾಗೂ ಚಿತ್ರರಂಗದ ಕೆಲವು ತಾರೆಯರು ತಮ್ಮ ಚೊಚ್ಚಲ ಮಗುವಿನ ಆರೈಕೆಯಲ್ಲಿ ಬ್ಯೂಸಿಯಾಗಿದ್ದಾರೆ. ಈಗಾಗಲೇ ಈ ನಟಿಯರು ತಮ್ಮ ಮಕ್ಕಳ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ತಮ್ಮ ಮಗುವನ್ನು ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಇದೀಗ ಮತ್ತೊಬ್ಬ ನಟಿ ತಮ್ಮ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.
ಕನ್ನಡದ ಕಿರುತೆರೆಯ ಜನಪ್ರಿಯ ದಂಪತಿ ನೇಹಾ ಗೌಡ ಹಾಗೂ ಚಂದನ್ ಗೌಡ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಇತ್ತೀಚಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನೇಹಾ ಗೌಡ, ಇಂದು ( ನವೆಂಬರ್ 14) ಮಕ್ಕಳ ದಿನಾಚರಣೆಗೆ ಶುಭಾಶಯ ಕೋರಿ ಮಗಳ ಮೊದಲ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ನಟಿ ನೇಹಾ ಗೌಡ ಮಗಳ ಫೋಟೋ ಸಖತ್ ವೈರಲ್ ಆಗುತ್ತಿದೆ.

'ನವೆಂಬರ್ 14 ಇಂದು ನಮ್ಮ ಪುಟ್ಟ ಮಗುವಿನ ಮೊದಲ ಫೋಟೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಅವಳು ನಮ್ಮ ಜೀವನದಲ್ಲಿರುವುದು ನಿಜಕ್ಕೂ ತುಂಬಾ ವಿಶೇಷವಾದ ಭಾವನೆ. ನಾವು ಎಂದೂ ನಿರೀಕ್ಷಿಸದ ರೀತಿಯಲ್ಲಿ ಅವಳು ನಮ್ಮ ಜೀವನವನ್ನು ಪೂರ್ಣಗೊಳಿಸಿದ್ದಾಳೆ. ಆಕೆಯ ತಂದೆ ತಾಯಿ ಆಗಿರುವುದಕ್ಕೆ ನಾವೆಷ್ಟು ಅದೃಷ್ಟವಂತರು' ಎಂದು ನೇಹಾ ಗೌಡ ಮಗಳ ಫೋಟೋ ಜೊತೆಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ನೇಹಾ-ಚಂದನ್ ಮಗಳ ಅಂದಕ್ಕೆ ಫ್ಯಾನ್ಸ್ ಮನಸೋತಿದ್ದು, ಆಕೆಯನ್ನು ವರ್ಣಿಸಿ ಕಮೆಂಟ್ ಮಾಡುತ್ತಿದ್ದಾರೆ.

ನಟಿ ನೇಹಾ ಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಗೌಡ ಅವರನ್ನು ಹಲವು ವರ್ಷ ಪ್ರೀತಿಸಿ ಬಳಿಕ ಪೋಷಕರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆಯಾದರು. ನೇಹಾ ಗೌಡ ಪತಿ ಚಂದನ್ ಗೌಡ ಕೂಡ ಅಂತರಪಟ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದರು. ಇನ್ನು ನೇಹಾ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದರು. ಸದ್ಯ ಈ ಸ್ಟಾರ್ ಜೋಡಿ ತಮ್ಮ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications