ಗಂಡನನ್ನ ನಿಮಗೆ ಒಪ್ಪಿಸಿದ್ದೀನಿ, ಏನೂ ಪ್ರಾಬ್ಲಂ ಇಲ್ಲ: ನಟಿ ಹರ್ಷಿಕಾ ಪೂಣಚ್ಚ ಹೀಗಂದಿದ್ದೇಕೆ?
ಬಿಗ್‌ಬಾಸ್ ಕನ್ನಡ ಸೀಸನ್ 4ರ ಮೂಲಕ ಮನೆಮಾತಾಗಿದ್ದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಮೊದಲ ಮಗುವನ್ನು ಬರಮಾಡಿಕೊಂಡು ಅದ್ಧೂರಿ ನಾಮಕರಣ ಮಾಡಿದ್ದರು. ಮದುವೆ ಬಳಿಕ ಇಬ್ಬರೂ ಸಿನಿಮಾದಿಂದ ತುಸು ಅಂತರ ಕಾಯ್ದುಕೊಂಡಿದ್ದರು. ಭುವನ್ ಕೂಡ ಸಿನಿಮಾಗಳಿಂದ ಬ್ರೇಕ್ ಪಡೆದು, ಕುಟುಂಬದ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಭುವನ್ ಅವರನ್ನ ಬಿಟ್ಟುಕೊಡುವ ಬಗ್ಗೆ ಹರ್ಷಿಕಾ ಅಚ್ಚರಿ ಹೇಳಿಕೆ ನೀಡಿದ್ದಾರೆ. ನನ್ನ ಗಂಡನನ್ನ ಒಪ್ಪಿಸುತ್ತಿದ್ದೇನೆ, ನನಗೆ ಏನೂ ಪ್ರಾಬ್ಲಂ ಇಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
'ಭುವನ್ ಮದುವೆ ಆದ ಮೇಲೆ ಬ್ರೇಕ್ ತಗೋತೀನಿ ಅಂತಿದ್ರು. ಆದ್ರೆ ನಿಜವಾಗಿ ಈ ತರ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ನನ್ನ ಹೆಂಡತಿ, ಮಗುವಿಗೆ ಟೈಮ್ ಕೊಟ್ಟೇ ಕೊಡ್ತೀನಿ ಅಂದಿದ್ರು. ನಾನೇನೋ ಲವ್ ಮಾಡಬೇಕಾದ್ರೆ, ಸುಮ್ನೆ ಹೇಳ್ತಿದ್ದಾರೆ ಅನ್ಕೊಂಡಿದ್ದೆ. ಆದರೆ ಭುವನ್ ನಿಜವಾಗಿ ಅದನ್ನು ಸಾಬೀತುಪಡಿಸಿದ್ದಾರೆ' ಎಂದು ಹರ್ಷಿಕಾ ಹೇಳಿದ್ದಾರೆ.

'ಪ್ರೆಗ್ನೆನ್ಸಿ ವೇಳೆ ಜೊತೇಲೇ ಇದ್ರು'
'ಮದುವೆಯಾದ ನಂತರ ಸುಮಾರು ಒಂದೂವರೆ ವರ್ಷ ಅವರ ನನ್ನ ಜೊತೆ ಇದ್ದರು. ನನ್ನ ಪ್ರೆಗ್ನೆನ್ಸಿ ಸಮಯದಲ್ಲೂ ಒಂಬತ್ತು ತಿಂಗಳು ಅವರೇ ನನಗೆ ಅಡುಗೆ ಮಾಡಿ ಬಡಿಸಿದ್ರು. ಮಗುವಿಗೆ ಈಗ ಹನ್ನೊಂದು ತಿಂಗಳು. ಈ ಜರ್ನಿಯಲ್ಲೂ ನಾನು ತಂದೆಯಾಗಿ ಮಗುವಿಗೆ ಟೈಮ್ ಕೊಡಬೇಕು ಅಂದ್ರು. ಆದರೆ ಕೊನೆಗೆ ನಾನೇ ಬೇಡ ಸಾಕು ಅಂದೆ. ನೀವು ಈಗಾಗಲೇ ತುಂಬಾ ಬೆಸ್ಟ್ ಕೆಲಸ ಮಾಡಿದ್ದೀರ, ಈಗ ಮತ್ತೆ ಸಿನಿಮಾಗಳಿಗೆ ಹಿಂತಿರುಗಿ ಅಂತ ನಾನೇ ಹೇಳಿದೆ. ಆದರೆ ಈ ತರ ಲೆಜೆಂಡ್‌ಗಳ ಜೊತೆ ವಾಪಸ್ ಆಗ್ತಾರೆ ಅಂತ ಕನಸಲ್ಲೂ ಗೊತ್ತಿರಲಿಲ್ಲ. ತುಂಬಾ ಖುಷಿಯಾಗುತ್ತಿದೆ' ಎಂದು ಹರ್ಷಿಕಾ ಹೇಳಿದ್ದಾರೆ.
'ಭುವನ್ ಸದ್ಯ ಸಿನಿಮಾಗಳಿಗೆ ಕಂಬ್ಯಾಕ್ ಆಗಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ "ಹಲೋ 123" ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಹರ್ಷಿಕಾ, ಯೋಗರಾಜ್ ಭಟ್, ವಿ.ಹರಿಕೃಷ್ಣ ಅವರು ನಮ್ಮ ಕನ್ನಡ ಇಂಡಸ್ಟ್ರಿಯ ಲೆಜೆಂಡ್‌ಗಳು. ಇವರು ನಮ್ಮ ಚಿತ್ರರಂಗವನ್ನ ಬೇರೆ ಲೆವೆಲ್‌ಗೆ ತಗೊಂಡು ಹೋದವರು. ಸರ್, ನನ್ನ ಗಂಡನನ್ನ ನಿಮಗೆ ಒಪ್ಪಿಸಿದ್ದೀನಿ, ಅವರನ್ನ ನೀವು ಸಿನಿಮಾಗಾಗಿ ಮೂರು, ನಾಲ್ಕು ತಿಂಗಳು ಲಾಕ್ ಮಾಡಿಕೊಳ್ಳಿ, ನನಗೆ ಏನೂ ಪ್ರಾಬ್ಲಂ ಇಲ್ಲ. ಅವರನ್ನ ಒಂದು ದೊಡ್ಡ ನಟರನ್ನಾಗಿ ಮಾಡಿ' ಎಂದು ಹರ್ಷಿಕಾ ಕೇಳಿಕೊಂಡಿದ್ದಾರೆ.
ನಟ ಭುವನ್ ಪೊನ್ನಣ್ಣ ಅವರು 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಲ್ಲಿ ಅಭಿನಯಿಸಿದ್ದರು. ನಂತರ 'ಕೂಲ್', ಮಂಜುನಾಥ ಎಲ್‌ಎಲ್‌ಬಿ, ಕುಚಿಕು ಕುಚಿಕು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಸ್ಪರ್ಧಿಯಾಗಿ ಭುವನ್ ಜನಪ್ರಿಯರಾಗಿದ್ದರು. ಅವರು ರಾಂಧವ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇನ್ನು ಹರ್ಷಿಕಾ ಅವರು 2008ರಲ್ಲಿ ರಿಲೀಸ್ ಆದ 'ಪಿಯುಸಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಮತರ ಕೊಂಕಣಿ, ಕೊಡವ, ತೆಲುಗು, ಭೋಜ್‌ಪುರಿ, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಪುನೀತ್ ಅಭಿನಯದ "ಜಾಕಿ" ಚಿತ್ರದಲ್ಲೂ ಹರ್ಷಿಕಾ ನಟಿಸಿದ್ದರು.












Click it and Unblock the Notifications