Deepika Padukone: ಫೈಟರ್ ಸಿನಿಮಾ ಬಿಡುಗಡೆಗೂ ಮುನ್ನ ನಟಿ ದೀಪಿಕಾ ತಿರುಪತಿ ಭೇಟಿ, ಏನಿದರ ಗುಟ್ಟು?
ತಿರುಪತಿ, ಡಿಸೆಂಬರ್ 15: ನಟ ಹೃತಿಕ್ ರೋಷನ್‌ಗೆ ನಾಯಕಿಗಾಗಿ ವೈಮಾನಿಕ ಆಕ್ಷನ್ ಥ್ರಿಲ್ಲರ್ 'ಫೈಟರ್' (Fighter Movie) ನಟಿಸಿರುವ ನಟಿ ದೀಪಿಕಾ ಪಡುಕೋಣೆ (Deepika Padukone) ಸಿನಿಮಾ ಬಿಡುಗಡೆಗೂ ಮೊದಲು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಗುರುವಾರ ನಟಿ ದೀಪಿಕಾ ಪಡುಕೋಣೆ ಅವರು ಸಹೋದರಿ ಅನಿಶಾ ಜೊತೆ ವೆಂಕಟೇಶ್ವರನ ದರ್ಶನಕ್ಕೆ ತಿರುಪತಿಗೆ ಆಗಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೈಟರ್ ಸಿನಿಮಾದ ಟ್ರೈಲರ್ ಮತ್ತು ಬಿಡುಗಡೆಯಾದ ಹಾಡುಗಳಿಗೆ ಸಖತ್ ರೆಸ್ಮಾನ್ಸ್ ಸಿಗುತ್ತಿದೆ.

2023ರ ಜನವರಿ 25ಕ್ಕೆ ಫೈಟರ್ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಈ ಮಧ್ಯೆ ನಟಿ ದೀಪಿಕಾ ಪಡುಕೋಣೆ ಟಿಟಿಡಿಗೆ (ಡಿ.14) ಭೇಟಿ ನೀಡಿದ್ದಾರೆ. ಇದ್ದು ಅವರ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ದೀಪಿಕಾ ಅವರ ಟಿಟಿಡಿ ಭೇಟಿಯ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.
ವಿಡಿಯೋದಲ್ಲಿ 'ನಟಿ ದೀಪಿಕಾ ಕಪ್ಪು ಬಣ್ಣದ ಕೋ-ಆರ್ಡ್ ಸೆಟ್ ಅನ್ನು ಧರಿಸಿದ್ದು, ಸಹೋದರಿ ಜೊತೆಗೆ ದೇವಸ್ಥಾನ ಪ್ರವೇಶಿಸುವುದನ್ನು ಕಾಣಬಹುದಾಗಿದೆ. ಇಂದು ಶುಕ್ರವಾರ ಬೆಳಗ್ಗೆ ದೀಪಿಕಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬಾಲಾಜಿಗೆ ಸಿನಿಮಾ ಕುರಿತು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
Actress #DeepikaPadukone arrived at #Tirupati on Thursday evening, with her sister #Anisha Padukone and chose to reach #Tirumala hill shrine along the Alipiri trekking route.
— Surya Reddy (@jsuryareddy) December 14, 2023
On Friday morning she will offer prayers and seek the blessings of Lord Venkateswara.#AndhraPradesh pic.twitter.com/XOTUcrRUt4
ಸೆಲೆಬ್ರೆಟಿಗಳ ಆರಾಧ್ಯ ಟಿಟಿಡಿ
ತಿರುಮಲವು ವೆಂಕಟೇಶ್ವರನಿಗೆ ಅರ್ಪಿತವಾಗಿದ್ದು, ಇದು ವಿಷ್ಣುವಿನ ಅಭಿವ್ಯಕ್ತಿಯಾಗಿದೆ. ಈ ಸ್ಥಳಕ್ಕೆ ಕಲಿಯುಗ ವೈಕುಂಠ ಎಂಬ ಹೆಸರನ್ನು ನೀಡಲಾಗಿದೆ ಮತ್ತು ಸ್ಥಳೀಯ ದೇವರನ್ನು ಕಲಿಯುಗ ಪ್ರತ್ಯಕ್ಷ ದೈವಂ ಎಂದು ಕರೆಯಲಾಗುತ್ತದೆ. ತಿರುಮಲಕ್ಕೆ ತನ್ನದೇ ಐತಿಹ್ಯ ಇದೆ. ಹೀಗಾಗಿ ವೆಂಕಟೇಶ್ವರನಲ್ಲಿ ರಾಜಕಾರಣಿಗಳು, ಸೆಲೆಬ್ರೆಟಿಗಳು ಹೆಚ್ಚು ನಂಬಿಕೆ ಇಡುತ್ತಾರೆ. ಆಗಾಗ ಭೇಟಿ ನೀಡಿ ದರ್ಶನ ಪಡೆದು ಪುನೀತರಾಗುತ್ತಾರೆ.

ಇಂದು ಫೈಟರ್ ಸಿನಿಮಾ ಹಾಡು ಬಿಡುಗಡೆ
ನಟಿ ದೀಪಿಕಾ ಪಡುಕೋಣೆಯವರ ಹೊಸ ಸಿನಿಮಾ 'ಫೈಟರ್' (Fighter) ಟ್ರೈಲರ್ ನೋಡಿದ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಹುಟ್ಟು ಹಾಕಿದೆ. ಅಲ್ಲದೇ ಇತ್ತೀಚೆಗೆ ಬಂದ ಶೇರ್ ಖುಲ್ ಗಯೆ ಚಿತ್ರದ ಮೊದಲ ಹಾಡು ಇಂದು ಶುಕ್ರವಾರ ಅನಾರವರಣಗೊಳಿಸಲಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ಈ ಕುರಿತು ನಟ ಹೃತಿಕ್ ರೋಷನ್ ಹಾಡಿನ ಟೀಸರ್ ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳನ್ನು ಬೂಸ್ಟ್ ಮಾಡಿದ್ದಾರೆ. ಡಿಸೆಂಬರ್ 15ರಂದು ಹಾಡು ಬಿಡುಗಡೆಯಾಗುವುದಾಗಿ ತಿಳಿಸಿರುವ ರೋಷನ್ ಪೋಸ್ಟ್ ನೋಡಿ ಅಭಿಮಾನಿಗಳಲ್ಲಿ ಕಾತರತೆ ಹೆಚ್ಚಾಗಿದೆ.
ಫೈಟರ್ ಸಿನಿಮಾದ ಮೊದಲ ಹಾಡು 'ಶೇರ್ ಖುಲ್ ಗಯೆ' ಹಾಡಿನಲ್ಲಿ ಹೃತಿಕ್ ಮತ್ತು ದೀಪಿಕಾ ಅವರ ಪಾರ್ಟಿ ಮೋಜಿನ ನೃತ್ಯಗಳು ಕಾಣಿಸುತ್ತವೆ. ಪಾರ್ಟಿ ಮೂಡ್‌ನ ಈ ಹಾಡು ಹೆಚ್ಚು ವೀಕ್ಷಣೆ ಕಾಣುವ ನಿರೀಕ್ಷೆ ಇದೆ. ಪಾರ್ಟಿ ಸಾಂಗ್‌ನಲ್ಲಿ ಹೃತಿಕ್ ರೋಷನ್ ಅವರ ಡಾನ್ಸ್ ನೋಡಲು ಸಜ್ಜಾಗಿದ್ದಾರೆ. 'ನಾನು ಸಹ ಬ್ಯಾಂಗ್ ಬ್ಯಾಂಗ್ ವೈಬ್ಸ್ ಅನ್ನು ಅನುಭವಿಸುತ್ತಿದ್ದೇನೆ ಎಂದು ಪೋಸ್ಟ್‌ನಲ್ಲಿ ನಟ ಬರೆದುಕೊಂಡಿದ್ದಾರೆ.
ಸ್ಕ್ವಾಡ್ರನ್ ಲೀಡರ್ ಆಗಿ ರೋಷನ್-ದೀಪಿಕಾ
ಫೈಟರ್ ಟೀಮ್‌ನಿಂದ ಸಿನಿಮಾದ ಅಧಿಕೃತ ಟೀಸರ್ ಅನ್ನು ಅನಾವರಣಗೊಳಿಸಿದರು. 1 ನಿಮಿಷ 14 ಸೆಕೆಂಡುಗಳ ಟೀಸರ್‌ನಲ್ಲಿ ಹೃತಿಕ್ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಅಕಾ ಪ್ಯಾಟಿಯಾಗಿ, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ ಅಕಾ ಮಿನ್ನಿಯಾಗಿ ಮತ್ತು ಅನಿಲ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಅಕಾ ರಾಕಿಯಾಗಿ ದೇಶಕ್ಕಾಗಿ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ವೈಮಾನಿಕ ಸಾಹಸ ದೃಶ್ಯಗಳು ಇರುವುದು ಖಚಿತವಾಗಿದೆ. ಅಲ್ಲದೇ ಹಾಡುಗಳಲ್ಲಿ ಹೃತಿಕ್ ಮತ್ತು ನಟಿ ದೀಪಿಕಾ ಜೋಡಿ ಮೋಡಿ ಮಾಡುತ್ತಿದೆ. ಬೀಚ್‌ನಲ್ಲಿ ಇವರಿಬ್ಬರ ಚುಂಬನದ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಸಾಹಸ ದೃಶ್ಯಗಳು ಚಿತ್ರದ ಮೇಲಿನ ವಿಶ್ವಾಸ ಹೆಚ್ಚಾಗುವಂತೆ ಮಾಡಿವೆ. ಸದ್ಯ ಫೈಟರ್ ಚಿತ್ರತಂಡ ಅಭಿಮಾನಿಗಳನ್ನು ಇನ್ನೂ ಕೆಲವು ದಿನ ಹಾಡುಗಳ ಮೂಡ್‌ನಲ್ಲಿ ತೇಲಿಸಲಿದೆ. ಚಿತ್ರ ಮುಂದಿನ ವರ್ಷ ಜನವರಿ 25 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications