Deepika Das: ದೊಡ್ಡವರ ಸಣ್ಣತನ ಬೇಡ: ಯಶ್‌ ತಾಯಿಗೆ ದೀಪಿಕಾ ದಾಸ್‌ ಮತ್ತೆ ಕೌಂಟರ್‌

ನಟ ಯಶ್‌ ತಾಯಿ ಪುಷ್ಪಾ ಅರುಣ್‌ ಕುಮಾರ್‌ ಹಾಗೂ ನಟಿ ದೀಪಿಕಾ ದಾಸ್‌ ನಡುವಿನ ಟಾಕ್‌ ವಾರ್‌ ಜೋರಾಗಿದೆ. ಯಶ್‌ ತಾಯಿ ದೀಪಿಕಾ ಅವರಿಗೆ ಸಂಬಂಧದಲ್ಲಿ ದೊಡ್ಡಮ್ಮ ಆಗಬೇಕು. ಆದರೆ ಬೇರೆ ಕಾರಣಗಳಿಂದ ವೈಮನಸ್ಸು ಮೂಡಿರುವುದು ಇತ್ತೀಚಿನ ಸಂದರ್ಶನದ ವೇಳೆ ಬೆಳಕಿಗೆ ಬಂದಿದೆ. ಪುಷ್ಪ ಅವರು ದೀಪಿಕಾ ವಿರುದ್ಧ ಮಾತನಾಡಿರುವ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ನಟಿ ದೀಪಿಕಾ ಕೂಡ ಮತ್ತೊಂದು ಪೋಸ್ಟ್‌ ಹಂಚಿಕೊಂಡು ತಿರುಗೇಟು ನೀಡಿದ್ದಾರೆ.

'ದೀಪಿಕಾ ದಾಸ್ ಅವರನ್ನು ದೂರವೇ ಇಟ್ಟಿದ್ದೇವೆ, ದೀಪಿಕಾಗೆ ನನ್ನ ಕಂಡರೆ ಭಯ, ದೀಪಿಕಾ ಏನನ್ನೂ ಸಾಧಿಸಿಲ್ಲ' ಎಂದು ಪುಷ್ಪಾ ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದರು. ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ್ದ ದೀಪಿಕಾ ದಾಸ್‌, 'ಹೊಸಬರನ್ನು ಬೆಳೆಸುವವರು ಬೇರೆ ಕಲಾವಿದರಿಗೆ ಗೌರವ ಕೊಡೋದನ್ನ ಕಲಿತಿರಬೇಕು. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಭಯ ಇದೆ ಅಂತಲ್ಲ, ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ, ಪುಷ್ಪಮ್ಮ ಆದರೂ ಸರಿ' ಎಂದು ಪೋಸ್ಟ್‌ ಹಾಕಿದ್ದರು. ಇದೀಗ ಮತ್ತೆ ಎರಡನೇ ಪೋಸ್ಟ್‌ ಹಾಕಿ ದೀಪಿಕಾ ಗರಂ ಆಗಿದ್ದಾರೆ.

actress-deepika-das-counters-yash-mother-pushpa-with-new-post

ಹೊಸ ಪೋಸ್ಟ್‌ನಲ್ಲೇನಿದೆ?

'ಸತ್ಯನ ತಲೆಮೇಲೆ ಹೊಡೆದ ಹಾಗೆ ಹೇಳುವಂತ ಬುದ್ಧಿ. ಯಾರು ಎಲ್ಲೂ ಹೋಗಿಲ್ಲ. ಯಾರೂ ನಮ್ಮ ಹತ್ರ ಬರುವ ಅವಶ್ಯಕತೆ ಇಲ್ಲ. ಅನಾವಶ್ಯಕವಾಗಿ ಇಲ್ಲದನ್ನ ಮಾತನಾಡಿ, ನನ್ನ ಹಾಗೂ ನಮ್ಮ ಕುಟುಂಬವನ್ನು ಮಧ್ಯೆ ತರಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ. ಇನ್ನು ಇದರ ಮೇಲೆ ನಂಗೆ ಮಾತನಾಡೋಕೆ ಇಷ್ಟ ಎಲ್ಲ' ಎಂದು ದೀಪಿಕಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅವಳು ಯಾವ ದೊಡ್ಡ ಹೀರೋಯಿನ್‌?

ನಿರ್ಮಾಪಕಿಯಾಗಿರುವ ಪುಷ್ಪ ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ದಾಸ್ ಫಿಕ್ಸ್ ಆಗಿದ್ದಾರಂತೆ ಎಂದು ಪ್ರಶ್ನೆ ಕೇಳಿದ್ದಕ್ಕೆ ಪುಷ್ಪ ಅವರು ಗರಂ ಆಗಿದ್ದರು. 'ನಮಗೂ ಅವರಿಗೂ ಆಗೋದಿಲ್ಲ, ಅದನ್ನ ನೀವು ಕೇಳಬಾರದು. ಅವಳು ಯಾವ ದೊಡ್ಡ ಹೀರೋಯಿನ್‌? ಯಾವ ಸಿನಿಮಾ ಮೂಲಕ ಸಾಧನೆ ಮಾಡಿದ್ದಾಳೆ ಅಂತ ಅವಳನ್ನು ನಮ್ಮ ಸಿನಿಮಾಗೆ ಹಾಕಿಕೊಳ್ತಾರೆ? ಇಂತಹ ಪ್ರಶ್ನೆಗಳನ್ನ ನೀವು ನನ್ನ ಕೇಳಬಾರದು' ಎಂದು ಕೋಪಗೊಂಡಿದ್ದರು.

'ನಾವು ಸಂಬಂಧಿಕರಾಗಿದ್ರೂ ಅವರನ್ನ ದೂರವೇ ಇಟ್ಟಿದ್ದೀವಿ. ಅವರ ವಿಚಾರವನ್ನ ಇಲ್ಲಿ ತಂದು ಕೇಳಿದ್ರೆ ನನ್ನ ಮಗ ನೋಡಿದ್ರೆ ನನಗೆ ಬೈಯೋದಿಲ್ವಾ? ತುಂಬಾ ಜನ ನಟಿಯರಿದ್ದಾರೆ. ಅವರ ಬಗ್ಗೆ ನೀವು ಕೇಳಬಹುದಿತ್ತು. ದೀಪಿಕಾ ದಾಸ್ ಏನು ದೊಡ್ಡ ಹೀರೋಯಿನ್ ಅಲ್ಲ. ಎಲ್ಲೂ ಅಂತಾ ಸಾಧನೆ ಮಾಡಿಲ್ಲ. ನೀವು ಅವಳ ಹೆಸರನ್ನ ಹೇಳಲೇಬಾರದು' ಎಂದು ಪುಷ್ಪ ಹೇಳಿದ್ದರು. ಈ ವಿಡಿಯೋ ವೈರಲ್‌ ಆಗಿತ್ತು. ಬಳಿಕ ದೀಪಿಕಾ ದಾಸ್‌ ಅವರ ಗಮನಕ್ಕೂ ಬಂದಿದ್ದರಿಂದ ಪೋಸ್ಟ್‌ ಮೂಲಕ ಉತ್ತರ ನೀಡಿದ್ದರು.

'ಇಲ್ಲಿವರೆಗೂ ನಾನು ಯಾರ ಹೆಸರನ್ನೂ ಹೇಳಿಕೊಂಡು ಬಂದಿಲ್ಲ. ಮುಂದೆಯೂ ಬರುವುದಿಲ್ಲ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನೂ ಸಾಧನೆ ಮಾಡದಿದ್ದರೂ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ' ಎಂದು ದೀಪಿಕಾ ಖಾರವಾಗಿ ಉತ್ತರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+