Chaithra Achar: 'ಕನ್ಯತ್ವ ಹೇಗೆ ಕಳೆದುಕೊಂಡ್ರಿ': ನೆಟ್ಟಿಗನ ಪ್ರಶ್ನೆಗೆ ಚೈತ್ರಾ ಆಚಾರ್ ಕೊಟ್ಟ ಉತ್ತರವೇನು?

ಚೈತ್ರಾ ಆಚಾರ್ ಕನ್ನಡ ಮಾತ್ರವಲ್ಲದೇ ಇತರ ಭಾಷೆಗಳಲ್ಲೂ ಬಹು ಬೇಡಿಕೆಯ ನಟಿಯಾಗಿದ್ದಾರೆ. ತಮ್ಮ ನಟನೆ ಮಾತ್ರವಲ್ಲದೇ ಆಗಾಗ ಬೋಲ್ಡ್‌ ಫೋಟೋಶೂಟ್‌ಗಳಿಂದಲೂ ಗಮನ ಸೆಳೆಯುವ ಚೈತ್ರಾ ಆಚಾರ್ ಮಾತು ಕೂಡ ಅಷ್ಟೇ ಬೋಲ್ಡ್‌. ತಮ್ಮ ಬಟ್ಟೆ ಹಾಗೂ ಖಾಸಗಿ ವಿಚಾರಗಳ ಬಗ್ಗೆ ಮಾತನಾಡುವವರಿಗೆ ಬೆವರಿಳಿಸಿ ಮೈಚಳಿ ಬಿಡಿಸುವಂತಹ ಉತ್ತರವನ್ನು ಚೈತ್ರಾ ಆಚಾರ್ ಕೊಡುತ್ತಾರೆ. ಈ ಹಿಂದೆ ಕೂಡ ಇಂತವರ ವಿರುದ್ಧ ಗುಡುಗಿದ್ದ ಚೈತ್ರಾ ಮತ್ತೆ ಈಗ ನೆಟ್ಟಿಗನೊಬ್ಬನಿಗೆ ಬೆವರಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆ್ಯಕ್ಟವ್‌ ಆಗಿರುವ ಚೈತ್ರಾ ಆಚಾರ್ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಶೇರ್‌ ಮಾಡುವುದಷ್ಟೇ ಅಲ್ಲದೇ ಆಗಾಗ ತಮ್ಮ ಅಭಿಮಾಗಳ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಇದರಿಂದ ಅಭಿಮಾನಿಗಳೊಂದಿಗೆ ನಟಿಯ ಬಾಂಧವ್ಯ ಇನ್ನಷ್ಟು ಹೆಚ್ಚಾಗುತ್ತದೆ. ಒಂದು ವೇಳೆ ಚೈತ್ರಾ ಆಚಾರ್ ಅವರ ಪ್ರಶ್ನೆಗೆ ಉತ್ತರಿಸಿದಾಗ ಅಭಿಮಾನಿಗಳು ಕೂಡ ಫುಲ್ ಖುಷಿಯಾಗುತ್ತಾರೆ.

Actress Chaithra J Achar Responds Boldly To An Social Media User

ಹೀಗಾಗಿ ಚೈತ್ರಾ ಆಚಾರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪ್ರಶ್ನೋತ್ತರ ನಡೆಸಿದ್ದು, ನನ್ನ ಬಗ್ಗೆ ನಿಮ್ಮ ಬಳಿ ಏನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದು ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದು, ಇಲ್ಲಿ ಕೇಳಲಾದ ಎರಡು ಪ್ರಶ್ನೆಗೆ ಚೈತ್ರಾ ಆಚಾರ್ ಖಡಕ್‌ ಉತ್ತರ ಕೊಟ್ಟಿದ್ದು, ವ್ಯಕ್ತಿಯೊಬ್ಬನ ಬಾಯಿಗೆ ಬೀಗ ಹಾಕುವಂತೆ ಗುಡುಗಿದ್ದಾರೆ.

ನಿಮ್ಮ ಕನ್ಯತ್ವ ಹೇಗೆ ಕಳೆದುಕೊಂಡ್ರಿ? ಆ ಅನುಭವ ಹೇಗಿತ್ತು ಎನ್ನುವ ಪ್ರಶ್ನೆಯನ್ನು ಓರ್ವ ವ್ಯಕ್ತಿ ಕೇಳಿದ್ದು, ಈ ಪ್ರಶ್ನೆಗೆ ಚೈತ್ರಾ ಆಚಾರ್ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ. 'ಈ ಪ್ರಶ್ನೆಯನ್ನು ನಿಮ್ಮ ಮನೆಯಲ್ಲಿರುವ ತಾಯಿ ತಂಗಿ ಬಳಿ ಕೇಳಿ ಎಂದಿರುವ ಚೈತ್ರಾ, ನಿಮ್ಮ ಮನೆಯಲ್ಲಿ ನಿಮ್ಮ ತಾಯಿ-ತಂಗಿ ಇದ್ದರೆ ಅವರನ್ನೇ ಆ ಪ್ರೊಸೆಸ್ ಹೇಗಿತ್ತು ಎಂದು ಕೇಳಿ. ಸಾಧ್ಯವಾದರೆ ಅವರಿಗೆ ಡೆಮೋ ಕೂಡ ತೋರಿಸಲು ಹೇಳಿ ಆಗ ನೀವು ಹತ್ತಿರದಿಂದ ನೋಡಬಹುದು' ಎನ್ನುವ ಮೂಲಕ ಪ್ರಶ್ನೆ ಕೇಳಿದ ವ್ಯಕ್ತಿಯ ಬೆವರಿಳಿಸಿದ್ದಾರೆ.

ಇನ್ನು ಮತ್ತೋರ್ವ ವ್ಯಕ್ತಿ ಸಿನಿಮಾ ಚಾನ್ಸ್‌ಗಾಗಿ ಸೆ* ಮಾಡಿದ್ದೀರಾ? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಚೈತ್ರಾ ಆಚಾರ್, ಪಾತ್ರಕ್ಕಾಗಿ ಪಲ್ಲಂಗವನ್ನು ನಾನು ಯಾವತ್ತು ಏರಿಲ್ಲ. ಆ ಅವಶ್ಯಕತೆ ಮತ್ತು ಅಗತ್ಯತೆ ನನಗೆ ಇಲ್ಲ. ಯಾಕೆಂದರೆ ನಾನು ಪ್ರತಿಭಾವಂತೆ ಎಂದು ಹೇಳಿದ್ದಾರೆ. ಚೈತ್ರಾ ಆಚಾರ್ ಅವರ ಈ ಬೋಲ್ಡ್ ಉತ್ತರಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+