Ashika Ranganath: ನಟಿ ಆಶಿಕಾ ರಂಗನಾಥ್ ಮದುವೆ ಯಾವಾಗ? ಹುಡುಗ ಯಾರು? ಸಹೋದರಿ ಮಾಹಿತಿ
ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಸದ್ಯ ಟಾಲಿವುಡ್‌ನಲ್ಲೂ ಆಶಿಕಾ ಹವಾ ಸೃಷ್ಟಿಸಿದ್ದಾರೆ. 'ಕ್ರೇಜಿ ಬಾಯ್' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಜೀವನವ ಪ್ರಾರಂಭಿಸಿದ ಆಶಿಕಾ ರಂಗನಾಥ್, 'ಮುಗುಳು ನಗೆ', 'ರಾಜು ಕನ್ನಡ ಮೀಡಿಯಂ', 'ತಾಯಿಗೆ ತಕ್ಕ ಮಗ', 'ರಾಂಬೊ-2', 'ಮದಗಜ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುದೀಪ್ ಅವರ 'ಕೋಟಿಗೊಬ್ಬ-3' ರಲ್ಲಿ "ಪಟಾಕಿ ಪೋರಿಯೋ" ಹಾಡಿಗೆ ಮೈಬಳುಕಿಸಿ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಇದೀಗ ಆಶಿಕಾ ಅವರ ಮದುವೆ ವಿಚಾರ ಮುನ್ನೆಗೆಗೆ ಬಂದಿದೆ. ಹುಡುಗ ಯಾರು? ಮದುವೆ ಯಾವಾಗ ಎಂದು ಆಶಿಕಾ ಸಹೋದರಿ ಅನುಷಾ ರಂಗನಾಥ್ ರಿವೀಲ್ ಮಾಡಿದ್ದಾರೆ.
ಅನುಷಾ ಅವರು ಕೂಡ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ತನ್ನ ಸಹೋದರಿ ಆಶಿಕಾ ಬಗ್ಗೆ ಮಾತನಾಡಿರುವ ಅವರು, 'ಆಶಿಕಾ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಜನ ಈಗ ಆಶಿಕಾ ಬೇರೆ ಭಾಷೆಗೆ ಹೋಗ್ತಾರೆ ಅಂತೆಲ್ಲ ನೋಡ್ತಾರೆ. ಕಲಾವಿದರು ಎಲ್ಲಿಗೆ ಹೋದರೂ ಅದು ಕೆಲಸಾನೇ, ಅದಕ್ಕೆ ಅವರು ಎಷ್ಟು ಪರಿಶ್ರಮ ಹಾಕಿರುತ್ತಾರೆ ಎನ್ನುವುದು ನಮಗೆ ಮಾತ್ರ ಗೊತ್ತಿರುತ್ತೆ. ನೀವು ಕೆಲಸ ಚೆನ್ನಾಗಿ ಮಾಡಿದ್ರೆ ಖಂಡಿತವಾಗಿಯೂ ಅಲ್ಲಿ ದೀರ್ಘಕಾಲದವರೆಗೆ ಭವಿಷ್ಯ ಇದ್ದೇ ಇರುತ್ತೆ. ಆಶಿಕಾ ವಿಚಾರದಲ್ಲೂ ಅದೇ ಆಗಿದೆ. ಅವಳ ಶ್ರದ್ಧೆ ಅವಳನ್ನು ಕೈಹಿಡಿದಿದೆ. ಇದರ ಬಗ್ಗೆ ನಮಗೂ ಹೆಮ್ಮೆ ಇದೆ' ಎಂದಿದ್ದಾರೆ.

ಇತ್ತೀಚೆಗಷ್ಟೇ ಮದುವೆಯಾಗಿರುವ ಅನುಷಾ ಅವರು 'ಲೈಫ್ ಪಾರ್ಟ್‌ನರ್ ಆಗಬೇಕಾದವರ ಬಗ್ಗೆ ಸ್ವಲ್ಪವಾದರೂ ಗೊತ್ತಿರಬೇಕು. ಕೆಲವೇ ತಿಂಗಳಲ್ಲಿ ಸ್ವಭಾವ ತಿಳಿಯುವುದು ಬೇರೆ, ಪ್ರತಿದಿನವೂ ಅವರು ಕಾಣುವುದು ಬೇರೆ, ದಿನಕ್ಕೊಂದು ಅವತಾರ ನೋಡುತ್ತಿರುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನೆಲ್ಲ ನೀವು ಅರ್ಥಮಾಡಿಕೊಳ್ಳಬೇಕು. ಹಾಗಾಗಿ ಹೊಂದಾಣಿಕೆ ಅನ್ನುವುದು ಬಹಳ ಮುಖ್ಯವಾಗಿರುತ್ತೆ. ಇಬ್ಬರ ನಡುವೆ ಪ್ರೀತಿ ಕೂಡ ಇರೋದು ಮುಖ್ಯ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇಬ್ಬರ ನಡುವೆ ಒಳ್ಳೆತನ, ಗಟ್ಟಿತನವೂ ಇರಬೇಕು. ಯಾವ ಕಾರಣಕ್ಕೂ ಬಿಟ್ಟುಕೊಡಬಾರದು' ಎಂದಿದ್ದಾರೆ.
'ಆಶಿಕಾ ಮದುವೆ ಖಂಡಿತ ಆಗುತ್ತೆ'
ಇನ್ನು ಆಶಿಕಾ ಅವರ ಮದುವೆ ವಿಚಾರವಾಗಿ ಮಾತನಾಡಿರುವ ಅನುಷಾ, 'ಅವಳು ತನ್ನ ಕೆಲಸವನ್ನ ಚೆನ್ನಾಗಿ ಮಾಡ್ತಿದ್ದಾಳೆ. ಅದನ್ನ ಅವಳು ಮುಂದುವರಿಸಲಿ. ಸದ್ಯಕ್ಕಂತೂ ಮದುವೆ ಪ್ರಸ್ತಾಪವಿಲ್ಲ. ಮನೆಯಲ್ಲಿ ಆಶಿಕಾ ಮದುವೆ ಬಗ್ಗೆ ಸದ್ಯಕ್ಕೆ ಯಾವುದೇ ಯೋಚನೆ ಇಲ್ಲ, ಅದರ ಬಗ್ಗೆ ನನಗೂ ಗೊತ್ತಿಲ್ಲ. ಯಾವಾಗ ಮದುವೆ ಆಗಬೇಕೋ ಆಗ ಖಂಡಿತವಾಗಿಯೂ ಮದುವೆ ಆಗ್ತಾಳೆ' ಎಂದು ಸ್ಪಷ್ಟಪಡಿಸಿದ್ದಾರೆ.
"ಶೋಧ" ವೆಬ್‌ಸಿರೀಸ್‌ನಲ್ಲಿ ಅನುಷಾ ರಂಗನಾಥ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಶೋಧ ಟ್ರೈಲರ್ ನೋಡಿ ಜನ ಒಳ್ಳೆಯ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ನಾನು ಒಳ್ಳೆಯ ಕಥೆ ಹಾಗೂ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈಗ ಅದು ಈಡೇರಿದೆ. ಕೆಲವು ಸಿನಿಮಾ ಅವಕಾಶಗಳು ಬಂದವು. ಅವು ನಾನು ನಟಿಸುವಂತೆ ಇರಲಿಲ್ಲ. ಇನ್ನೂ ಕೆಲವು ಸುಮ್ಮನೆ ಹೋಗಿಬರುವಂತಹ ರೀತಿ ಇತ್ತು. ಅದಕ್ಕೆ ಒಳ್ಳೆಯ ಟೀಂಗಾಗಿ ಕಾಯುತ್ತಿದ್ದೆ. ನಾನು ನನ್ನ ಸಹೋದರಿ ಜೊತೆ ಹೋಲಿಕೆ ಮಾಡಿಕೊಳ್ಳಲ್ಲ. ನಮಗೆ ಬರುವ ಅವಕಾಶವನ್ನ ಚೆನ್ನಾಗಿ ಬಳಸಿಕೊಳ್ಳಬೇಕು' ಎಂದಿದ್ದಾರೆ.












Click it and Unblock the Notifications