'ಬಾಣಂತಿಯಲ್ಲೇ ನಿರೀಕ್ಷೆ ಸುಳ್ಳಾಯ್ತು': ನೋವು ಹೊರಹಾಕಿದ ನಟಿ ಜಾನ್ವಿ

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಪ್ರವೇಶಿಸಿದ ಜನಪ್ರಿಯ ನಿರೂಪಕಿ ಜಾನ್ವಿ ಈಗ ಕನ್ನಡ ಚಿತ್ರರಂಗದ ನಟಿ. ಬಿಗ್ ಬಾಸ್ ವಿನ್ನರ್‌ ರೂಪೇಶ್ ಶೆಟ್ಟಿ ಜೊತೆ ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿರುವ ಜಾನ್ವಿ ಇತ್ತೀಚಿಗೆ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದು, ಜೀವನದಲ್ಲಿ ನಿರೀಕ್ಷೆಗಳು ಸುಳ್ಳಾಗಿ ತಾವು ಸ್ಟ್ರಾಂಗ್‌ ಆದ ಬಗ್ಗೆ ಮಾತನಾಡಿದ್ದಾರೆ.

ಅರಗಿಣಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, 'ಡಿವೋರ್ಸ್ ಆದ ಮೇಲೆ ಅಲ್ಲ..ಮದುವೆಯಾದ ಮೇಲೆ ತುಂಬಾ ಸ್ಟ್ರಾಂಗ್‌ ಆದೆ. ಕಷ್ಟಗಳನ್ನು ಸಹಿಸಿ ಸಹಿಸಿ ಸ್ಟ್ರಾಂಗ್‌ ಆಗಿದ್ದೇನೆ. ಹೀಗಾಗಿ ನೆಗೆಟಿವ್‌ ಕಮೆಂಟ್‌ಗಳ ಬಗ್ಗೆ ಏನೂ ಅನಿಸುವುದಿಲ್ಲ. ನಾನು ಜೀವನದಲ್ಲಿ ಅಷ್ಟು ಅನುಭವಿಸಿದ್ದೇನೆ. ಒಂದೊಂದು ವಿಚಾರಗಳನ್ನು ಎಲ್ಲರ ಮುಂದೆ ಹೇಳಿಕೊಂಡು ಈ ವಿಚಾರವನ್ನು ಎಳೆದಾಡಲು ನನಗೂ ಇಷ್ಟ ಇಲ್ಲ. ಆದರೆ ತುಂಬಾ ಕಷ್ಟಪಟ್ಟು ಜೀವನ ಇಷ್ಟೇನಾ ಅನಿಸಿಬಿಟ್ಟಿದೆ'.

Actress and Anchor Jhanvi Opens Up About Painful Life Experiences and Growth

'ನನಗೆ ಈ ನೋವು ಯಾವಾಗ ಶರುವಾಯ್ತು ಅಂತಾ ಹೇಳಿಕೊಂಡರೆ ಕೆಲವರಿಗೆ ಅದು ಚಿಕ್ಕದು ಅನಿಸಬಹುದು ಆದರೆ ನಾವು ತುಂಬಾ ಸೂಕ್ಷ್ಮವಾಗಿ ಇರುತ್ತೇವೆ. ಚಿಕ್ಕ ವಯಸ್ಸಿಗೆ ಮದುವೆಯಾಗುತ್ತದೆ. ಚಿಕ್ಕ ವಯಸ್ಸಿಗೆ ಮಗು ಆಗುತ್ತದೆ. ಮಗುವಾಗಿ ನಾನು ಆಸ್ಪತ್ರೆಯಲ್ಲಿದ್ದಾಗ ನಡೆದ ಘಟನೆಯನ್ನು ನಾನು ಹೇಳಿಕೊಳ್ಳಲೇ ಬೇಕು' ಎಂದು ಜಾನ್ವಿ ಅಂದು ತಮಗಾದ ನೋವನ್ನು ಹೇಳಿಕೊಂಡರು.

'ಮಗುವಾಗಿ ನಾನು ಆಸ್ಪತ್ರೆಯಲ್ಲಿದ್ದಾಗ ನನ್ನ ಅಮ್ಮ ನನ್ನ ಜೊತೆಯಲ್ಲಿ ಇದ್ದರು. ಮಗು ಹುಟ್ಟಿದ ಮೇಲೆ ಬಾಣಂತಿಯರಿಗೆ ಕಾಫಿ ಬಿಟ್ಟರೆ ಬೇರೆ ಏನೂ ಕೊಡುವುದಿಲ್ಲ. ಪಕ್ಕದ ಬೆಡ್‌ನಲ್ಲಿರುವವಿಗೆಲ್ಲಾ ಬೆಳಗ್ಗೆ ಬೇಗನೇ ಕಾಫಿ ಬರುತ್ತಿತ್ತು. ಅವರ ಮನೆಯವರೆಲ್ಲಾ ತಂದುಕೊಡುತ್ತಿದ್ದರು. ನನಗೆ ಕಾಫಿ ಬರುತ್ತಲೇ ಇರಲಿಲ್ಲ. ಒಂಬತ್ತು ಗಂಟೆಯಾದರೂ ಯಾರೂ ತಂದುಕೊಡುತ್ತಿರಲಿಲ್ಲ. ಈ ವಿಚಾರಕ್ಕೆ ನಾನು ತುಂಬಾ ಅಳುತ್ತಿದ್ದೆ'.

Actress and Anchor Jhanvi Opens Up About Painful Life Experiences and Growth

'ಅದು ಕೇಳುವವರಿಗೆ ನೋಡುವವರಿಗೆ ಚಿಕ್ಕದು ಅನಿಸಬಹುದು. ಆದರೆ ಒಂದು ಹೆಣ್ಣು ಮಗಳಿಗೆ ಮಗುವಾದಾಗ ಅವಳ ನಿರೀಕ್ಷೆ ಅದೇ ಅಲ್ವಾ? ಕಾಫಿ ಬೇಗ ಬರುತ್ತದೆ ಅಂದರೆ ನನ್ನನ್ನು ಕೇರ್‌ ಮಾಡುತ್ತಿದ್ದಾರೆ ಅಂದುಕೊಳ್ಳುತ್ತಾಳೆ. ಒಂಬತ್ತು ಗಂಟೆಯಾದರೂ ಕಾಫಿ ಬರದೇ ಇದ್ದಾಗ ತುಂಬಾ ಅಳುತ್ತಿದೆ. ನಮ್ಮ ಅಮ್ಮ ಬೈಯುತ್ತಿದ್ದರು. ಬಾಣಂತಿ ಸನ್ನಿ ಆಗುತ್ತದೆ ಅಳಬೇಡ ಅಂತಾ. ಈ ರೀತಿ ಆಗಿ ಆಗಿ ನಾನು ಜೀವನದಲ್ಲಿ ಏನೂ ನಿರೀಕ್ಷೆ ಮಾಡಲೇಬಾರದು ಎನ್ನುವ ಹಂತಕ್ಕೆ ಬಂದೆ. ಅದು ಬರಲ್ಲ ಅಂದ ಮೇಲೆ ನಾನ್ಯಾಕೆ ನಿರೀಕ್ಷೆ ಮಾಡಬೇಕು ಅಂತಾ ಅವರೇ ಗಟ್ಟಿ ಮಾಡಿದ್ದರು' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+