ಸಿನಿಮಾಗೆ ಪ್ರಚಾರದ ಅಗತ್ಯವಿಲ್ಲ, ಅದಿದ್ರೆ ಸಾಕು: ನಟಿ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ಅವರ ಅಂದೊಂದಿತ್ತು ಕಾಲ ಸಿನಿಮಾ ರಿಲೀಸ್‌ ಆಗಿದೆ. ಸಾಮಾನ್ಯವಾಗಿ ತಮ್ಮ ಸಿನಿಮಾ ಎಂದಾಗ ಪ್ರಚಾರಕ್ಕೆ ಹೆಚ್ಚಿನ ಒತ್ತು ಕೊಡುತ್ತಾರೆ. ಇತ್ತೀಚೆಗೆ ನಟಿಯರು ತಮ್ಮದೇ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ಫಿಲ್ಮ್‌ ಚೇಂಬರ್‌ ಬಾಗಿಲು ತಟ್ಟಿದ್ದರು. ಪ್ರಚಾರಕ್ಕಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಈ ಕಾಲದಲ್ಲಿ ಅದಿತಿ ಅವರ ಹೇಳಿಕೆ ಶಾಕ್‌ ನೀಡುವಂತಿದೆ. ಸಿನಿಮಾ ಪ್ರಚಾರದ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಕಾರಣವೇನು ಎಂಬುದನ್ನೂ ಅದಿತಿ ವಿವರಿಸಿದ್ದಾರೆ.

'ಅಂದೊಂದಿತ್ತು ಕಾಲ' ಚಿತ್ರದ ಕುರಿತು ಯಾಕೆ ಹೆಚ್ಚಿನ ಪ್ರಚಾರ ಮಾಡಲಿಲ್ಲ ಎಂದು ನನ್ನ ಕೇಳುತ್ತಾರೆ. ನಿಜ ಹೇಳಬೇಕಂದ್ರೆ ಪ್ರತಿಯೊಂದು ಚಿತ್ರಕ್ಕೂ ದೊಡ್ಡ ಪ್ರಚಾರದ ಅವಶ್ಯಕತೆ ಇಲ್ಲ. ಕೆಲವೊಮ್ಮೆ ಬಜೆಟ್‌ ಅಡಚಣೆಗಳಿರುತ್ತೆ. ಕೆಲವೊಮ್ಮೆ ಪ್ರೇಕ್ಷಕರ ನಂಬಿಕೆ ಹಾಗೂ ಪ್ರೀತಿ ಸಾಕಾಗುತ್ತದೆ. ಓಟಿಟಿ ಮೂಲಕ ಬಂದಾಗ ಆ ಪ್ಲಾಟ್‌ಫಾರ್ಮ್‌ ಕೂಡ ಪ್ರಚಾರದ ದೊಡ್ಡ ಭಾಗ ಆಗಿರುತ್ತೆ. ದಿನಾಂತ್ಯದಲ್ಲಿ ಪ್ರಚಾರಕ್ಕಿಂತ ಕಥೆಯೇ ಮುಖ್ಯ, ಅದರಲ್ಲಿ ಇರುವ ಭಾವನಗಳೇ ಹೆಚ್ಚು ಮಾತನಾಡುತ್ತವೆ ಎನ್ನುವುದು ನನ್ನ ನಂಬಿಕೆ ಎಂದಿದ್ದಾರೆ ಅದಿತಿ.

actress-aditi-prabhudeva-says-why-her-film-no-need-promotion

ಚೆನ್ನಾಗಿದ್ರೆ ಸಿನಿಮಾ ನೋಡ್ತಾರೆ

ಇತ್ತೀಚೆಗೆ ಮತ್ತೊಂದು ಸಂದರ್ಶನದಲ್ಲಿ ಇದೇ ವಿಚಾರ ಪ್ರಸ್ತಾಪಿಸಿದ್ದ ಅದಿತಿ, ಮೊದಲೆಲ್ಲ ನಾನು ಕನ್ನಡ ಸಿನಿಮಾ ನೋಡಿ, ನೋಡಿ ಅಂತ ಬೇಡಿಕೊಳ್ಳುತ್ತಿದ್ದೆ. ಸಿನಿಮಾ ಚೆನ್ನಾಗಿದ್ರೆ ಜನ ಖಂಡಿತವಾಗಿ ನೋಡೇ ನೋಡ್ತಾರೆ. ಇಲ್ಲದಿದ್ದರೆ ನಮ್ಮನ್ನ ನಾವೇ ತಿದ್ದುಕೊಳ್ಳಬೇಕಷ್ಟೇ. ಇದನ್ನ ನಾವು ಸರಿಪಡಿಸಿಕೊಳ್ಳಬೇಕು ಎಂದಿದ್ದರು. ನಮ್ಮ ಸಿನಿಮಾ ಚೆನ್ನಾಗಿದ್ರೆ ಯಾವುದೇ ಭರ್ಜರಿ ಪ್ರಮೋಷನ್‌ಗಳು, ಗಿಮಿಕ್‌ಗಳು ಬೇಕಾಗಿಲ್ಲ. ಇದು ಹಲವು ಬಾರಿ ಸಾಬೀತು ಕೂಡ ಆಗಿದೆ. ಈ ಸಿನಿಮಾ ಬರುತ್ತಿದೆ ನೋಡಿ ಎಂದು ಮಾಹಿತಿ ಕೊಡಬೇಕು ಅಷ್ಟೇ. ಆದರೆ ನೀವು ಬರಲೇಬೇಕು ಅಂತ ಪ್ರೇಕ್ಷಕರಿಗೆ ಹೇಳಬಾರದು. ಅವರಿಗೆ ಸಿನಿಮಾ ಇಷ್ಟವಿದ್ದರೆ ನಾವು ಕರೆಯುವುದೇ ಬೇಡ ಎಂದಿದ್ದರು.

ವಿನಯ್ ರಾಜ್‌ಕುಮಾರ್‌ ಹಾಗೂ ಅದಿತಿ ಪ್ರಭುದೇವ ಅಭಿನಯದ ಚಿತ್ರ ಅಂದೊಂದಿತ್ತು ಕಾಲ ರಿಲೀಸ್‌ ಆಗಿದ್ದು, ಇವರ ಚಿತ್ರಕ್ಕೆ ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌ ಸೇರಿದಂತೆ ಹಲವರು ಶುಭಕೋರಿದ್ದಾರೆ. ನಟ ವಿನಯ್ ರಾಜ್​ಕುಮಾರ್ ನನ್ನ ಎಲ್ಲ ಸಿನಿಮಾಗಳಿಗಿಂತ ಈ ಚಿತ್ರ ಬಹಳ ವಿಶೇಷ ಎಂದಿದ್ದಾರೆ. ಪ್ರತಿ ಹಾಡು ಕೂಡ ಬಹಳ ವಿಭಿನ್ನವಾಗಿದ್ದು, ಅಮ್ಮ ಮಗನ ಸೆಂಟಿಮೆಂಟ್ ಹಾಡು ಮನಮುಟ್ಟುವಂತಿದೆ. ಇದು ನಿರ್ದೇಶಕನ ಲೈಫ್ ಜರ್ನಿ ಕುರಿತ ಸಿನಿಮಾ. ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ನಾನು ಮೂರು ಶೇಡ್​ಗಳಲ್ಲಿ ಈ ಸಿನಿಮಾ ಕಾಣಿಸಿಕೊಳ್ಳುತ್ತೇನೆ. ಇದು ನಮ್ಮ ಮೂರು ವರ್ಷದ ಶ್ರಮದ ಫಲ. ಇದು ಎಲ್ಲ ವರ್ಗದವರಿಗೂ ಇಷ್ಟವಾಗುವಂತಹ ಕಥೆಯನ್ನ ಈ ಸಿನಿಮಾ ಒಳಗೊಂಡಿದೆ. ನಿಮ್ಮೆಲ್ಲರ ಬೆಂಬಲ ಬೇಕು ಎಂದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+