Get Updates
Get notified of breaking news, exclusive insights, and must-see stories!

""ಅಪ್ಪುಗಿಂತ ಯುವ, ವಿನಯ್ & ಧೀರನ್ ಚಂದ: ಚಿಕ್ಕಪ್ಪನಂತೆ ಇಂಡಸ್ಟ್ರಿಯಲ್ಲಿ ಉಳಿಯುವುದು ನಿಮ್ಮ ಕೈಲಿದೆ''

ಬೆಂಗಳೂರು, ಸೆಪ್ಟಂಬರ್ 29: ಕರ್ನಾಟಕ ರತ್ನ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂದರೆ ಸಾಕು, ಆ ನಗು ಮುಖದ ಜೊತೆಗೆ ಸರಳೆ, ಡಾನ್ಸ್, ಫೈಟ್ಸ್ ಕಣ್ತುಂದೆ ಬಂದು ಬಿಡುತ್ತದೆ. ಅಪ್ಪು ನಮ್ಮನ್ನಗಲಿ ನಾಲ್ಕು ವರ್ಷ ಕಳೆಯುತ್ತಾ ಬಂದರೂ ಅವರ ನೆನಪು ಹಚ್ಚ ಹಸಿರಾಗಿದೆ. ಅವರ ನಂತರ ಯಾರು? ರಾಜ್ ಕುಟುಂಬದಲ್ಲಿ ಯಾರು ಎಂಬ ಪ್ರಶ್ನೆಯು ಆಗಾಗ ಕೇಳಿ ಬರುತ್ತಲೇ ಇದೆ. ಇದೀಗ ಅಭಿಮಾನಿಗಳು ರಾಜ್ ಫ್ಯಾಮಿಲಿಯಲ್ಲಿನ ಮೂವರು ಯುವಕರಿಗೆ ಅಪ್ಪು ನಡೆದು ಬಂದ ದಾರಿಯನ್ನು ನೆನಪಿಸಿದ್ದಾರೆ. ಇಂಡ್ರಸ್ಟಿಯಲ್ಲಿ ಉಳಿಯುವುದು, ಅಳಿಯುವುದು ನಿಮ್ಮ ಕೈಲಿದೆ ಎಂದು ಕಿವಿ ಮಾತು ಹೇಳಿದ್ದಾರೆ.

ಈಗಾಗಲೇ ರಾಜ್ ಕುಟುಂಬದಿಂದ ಮೂರನೇ ತಲೆಮಾರಿನ ನಟರಾದ ವಿನಯ್ ರಾಜ್‌ಕುಮಾರ್ (Vinay Rajkumar), ಯುವ ರಾಜ್‌ಕುಮಾರ್ (Yuva Rajkumar) ಹಾಗೂ ಧೀರನ್ ಆರ್. ರಾಜ್‌ಕುಮಾರ್ (Dheeran R Rajkumar) ಅವರು ಇಂಡಸ್ಟ್ರಿಗೆ ಬಂದು ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಈವರೆಗೆ ಈ ಮೂವರಿಗೆ ಬ್ಲಾಕ್ ಬಸ್ಟರ್ ಎನ್ನುವಂತಹ ದೊಡ್ಡಮಟ್ಟದ ಸಕ್ಸಸ್ ಸಿಕ್ಕಿಲ್ಲ. ದೊಡ್ಮನೆ ಅಭಿಮಾನಿಗಳು ಇವರಿಂದ ದಿ ಬೆಸ್ಟ್ ಸಿನಿಮಾಗಾಗಿ ಕಾಯುತ್ತಿದ್ದಾರೆ ಎಂಬುದು ಇಲ್ಲೊಂದು ವೈರಲ್ ಆಗುತ್ತಿರುವ ಪೋಸ್ಟ್‌ನಿಂದ ಗೊತ್ತಾಗುತ್ತದೆ.

Actors Vinay Yuva Dheeran Rajkumar Should Carry Appu s Legacy in Industry Fans Reacts

ನಟ ಪುನೀತ್ ರಾಜ್ ಕುಮಾರ್ ಅವರು "Appu' ಸಿನಿಮಾ ಮೂಲಕ ಇಂಡಸ್ಟ್ರೀಗೆ ಬಂದಾಗ ಅವರು ಸಹ ಬಣ್ಣ, ಮುಖ, ಎತ್ತರ ವಿಚಾರವಾಗಿ ಟೀಕೆ ಎದುರಿಸಿದ್ದರಂತೆ. ಇಂಗ್ಲಿಷ್ ಭಾಷೆ ವಿಚಾರದಲ್ಲಿ ಒಂದಷ್ಟು ಮಂದಿ ಅವರ ಬಗ್ಗೆ ಆಡಿಕೊಂಡಿದ್ದರು. ಆದರೆ ಅದ್ಯಾವುದನ್ನು ಲೆಕ್ಕಿಸದೇ ರಾಜ್ ಮಗನ ಸ್ಥಾನದಿಂದ ಪವರ್ ಸ್ಟಾರ್ ಹೊರ ಹೊಮ್ಮುವಲ್ಲಿ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದು ಜಗಜ್ಜಾಹೀರು. ಇದೀಗ ಇದನ್ನು ಯುವ, ಧೀರನ್ ಮತ್ತು ವಿನಯ್ ಅಳವಡಿಸಿಕೊಂಡು ಇಂಡಸ್ಟ್ರಿಯಲ್ಲಿ ಎತ್ತರದ ಸ್ಥಾನಕ್ಕೆ ಏರಬೇಕು ಎಂಬುದು ಫ್ಯಾನ್ಸ್ ಮಹದಾಶಯ ಹೊಂದಿದ್ದಾರೆ. ಈ ಕುರಿತು "ಅಪ್ಪು ಫ್ಯಾನ್ಸ್ ಪಿರಿಯಾಪಟ್ಟಣ' ಫೇಸ್‌ಬುಕ್ ಪೇಜ್ ಪೋಸ್ಟ್ ಹರಿದಾಡುತ್ತಿದೆ. ಈ ಮೂಲಕ ಮೂವರು ದೊಡ್ಮನೆಯ ಯುವ ನಟರಿಗೆ ಫ್ಯಾನ್ಸ್ ಕಿವಿಮಾತು ಹೇಳಿದ್ದಾರೆ.

ಟೀಕೆಗಳಿಗೆ "ಅಪ್ಪು' ಉತ್ತರ ಕೊಡಲಿಲ್ಲ: ನೀವು ಅಪ್ಪುಗಿಂತ ಚೆಂದ..!

"ವಿನಯ್ ಆಗಲಿ, ಯುವ ಆಗಲಿ ಅಥವಾ ಧಿರೇನ್ ಆಗಲಿ, ನೀವು ಮೂವರೂ ಫಿಟ್ & ಫೈನ್ ಆಗಿದ್ದಾರೆ. ಒಳ್ಳೆಯ ನೋಟ ಕೂಡ. ಡ್ಯಾನ್ಸ್ & ಫೈಟ್ ಕೂಡ ಒಂದು ಮಟ್ಟಕ್ಕೆ ಹಿಡಿತ ಸಾಧಿಸಿದ್ಧೀರಿ. ಆದರೆ ನಿಮ್ಮ ಚಿಕ್ಕಪ್ಪ (ಪುನೀತ್ ರಾಜ್‌ಕುಮಾರ್) ಇಂಡಸ್ಟ್ರಿಗೆ Hero ಆಗಿ ಎಂಟ್ರಿ ಕೊಟ್ಟಾಗ, ಅವರನ್ನು ಬಣ್ಣದ ವಿಷಯವಾಗಿ, ಮುಖರೂಪದ ವಿಷಯವಾಗಿ, ಅವರ ಎತ್ತರ ವಿಷಯವಾಗಿ ಟ್ರೋಲ್ ಮಾಡಿದ್ದರು.

ಆದರೆ ಅದಕ್ಕೆಲ್ಲ ನಿಮ್ಮ ಚಿಕ್ಕಪ್ಪ ಮಾತನಾಡಿ, ಮಾತುಗಳಿಂದ ಉತ್ತರ ಕೊಡಲಿಲ್ಲ. ಬೆವರು ಹರಿಸಿದರು. ಮೈ ದಂಡಿಸಿದರು. ಆ ಮೂಲಕ ನೆಲದ ಮೇಲೆಯೇ ಕಾಲು ನಿಲ್ಲುವಂತೆ ನೋಡಿಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಏನೂ ಮಾತಾಡದೇ ಮೌನವಾಗಿಬಿಟ್ಟರು. ಆದರೆ ಶ್ರಮ ಮಾತ್ರ ಅಪ್ಪು ಎಂದಿಗೂ ಬಿಡಲಿಲ್ಲ. ಸ್ಟಾರ್ ಆಗುತ್ತಿದ್ದಂತೆ ಉದ್ದ ಮೂಗು ಎಂದು ಜರಿದವರೇ, ಅಣ್ಣಾವ್ರ ಪ್ರತಿರೂಪ ಎಂದು ವರಸೆ ಬದಲಿಸಿದರು. ಕಪ್ಪು ಎಂದವರು, ಕಸ್ತೂರಿ ಈತ ಎಂದು ಗುಣಗಾನ ಮಾಡಿದರು. ಹೈಟ್ ಬಗ್ಗೆ ಮಾತಾಡಿದವರು ಇವರನ್ನು ಹೈಯೆಸ್ಟ್ ರೇಟಿಂಗ್ಸ್ ಅಲ್ಲಿ ಇಟ್ಟರು'

"ನಿಮ್ಮ ಚಿಕ್ಕಪ್ಪನ ಹಾದಿ ಖಂಡಿತ ಸುಲಭವಾಗಿರಲಿಲ್ಲ. ಅಣ್ಣಾವ್ರ ಮಗ ಪುನೀತ್ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರಯಾಣಕ್ಕೆ ಸಾಕ್ಷಿಯಾಗಿ ಅದೆಷ್ಟೋ ಕೋಟಿ ಮಂದಿ ಪ್ರದರ್ಶನದಲ್ಲಿ ನಾನೂ ಒಬ್ಬ ಅವರ ಪ್ರತ್ಯಕ್ಷ ಪ್ರೇಕ್ಷಕ.

ಹಾಗೆ ನೋಡಿದರೆ ನಿಮಗೆ ರೂಪ ಬಣ್ಣ ಎಲ್ಲವೂ ಚೆನ್ನಾಗಿದೆ. ಹೀರೋ ಕಳೆ ಎನ್ನಬಹುದು. ಇನ್ನು ಈ ಇಂಡಸ್ಟ್ರಿಯಲ್ಲಿ ಉಳಿಯುವುದು- ಅಳಿಯುವುದು ನಿಮ್ಮ ಇಷ್ಟ ಕಷ್ಟಾನುಸಾರದ ಮೇಲೆ ನಿಂತಿದೆ.'

"ನಮ್ಮ ಅಪ್ಪುವಿನ ವಂಶ ಅಷ್ಟು ಸುಲಭವಾಗಿ ಆತನೊಂದಿಗೆ ಕೊನೆಯಾಗಬಾರದು. ನಮ್ಮ ಅಪ್ಪುವನ್ನೂ ಮೀರಿಸೋ ಸೂಪರ್ ಸ್ಟಾರ್ ಈ ರಾಜ್ ಫ್ಯಾಮಿಲಿಯಲ್ಲಿ ಹುಟ್ಟಿಬರಲಿ ಎಂದು ಆಶಿಸುವೆ. ಇದರಲ್ಲಿ ನನ್ನ ಸ್ವಾರ್ಥವೂ ಇದೆ. ಕಾರಣ ಇದು ನನ್ನ ನಾಯಕನ ಕುಟುಂಬ. ಬೇರೊಬ್ಬರ ಎದುರು ಸೋಲೊಪ್ಪಬಾರದು ಅನ್ನೋ ಅಭಿಮಾನವಷ್ಟೇ. ಆದರೆ ಯಾವಾಗಲೂ ಪ್ರೀತಿ ಮತ್ತು ಬೆಂಬಲ ನಿಮ್ಮೊಂದಿಗೆ ಇರಲಿದೆ. ಆದರೆ ನಮ್ಮ ಅಪ್ಪು ಬಾಸ್ ಅನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ'' ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಪೋಸ್ಟ್‌ಗಳಿಗೆ ದೊಡ್ಮನೆ ಪರ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಪೋಸ್ಟ್‌ಗೆ ಪರವಾಗಿ ಅನೇಕರು ಪ್ರತಿಕ್ರಿಯಿಸಿದ್ದಾರೆ.

ದೊಡ್ಮನೆ ಅಭಿಮಾನಿಗಳ ಆಶಯವೇನು?

ಒಟ್ಟಾರೆ ನೋಡುವುದಾದರೆ ದೊಡ್ಮನೆಯಿಂದ ಬಂದ ತಕ್ಷಣ ಅಪ್ಪುಗೆ ಸಕ್ಸಸ್ ಹೆಸರು, ಖ್ಯಾತಿ ಸಿಕ್ಕಿಲ್ಲ. ಬದಲಾಗಿ ಅವರು ಸಿನಿಮಾಗಾಗಿ ಶ್ರಮಿಸಿದರು. ಸರಳತೆಯನ್ನು ಜೀವಾಳವಾಗಿಸಿಕೊಂಡರು. ಒಂದೇ ಒಂದು ಗಾಸಿಪ್‌ಗೂ ಒಳಗಾಗದೇ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾ, ಕಷ್ಟಪಟ್ಟು ಹಿಟ್ ಸಿನಿಮಾಗಳನ್ನು ನೀಡಿ ಅಪ್ಪು ಪವರ್ ಸ್ಟಾರ್ ಆದವರು. ಆ ಶ್ರಮ, ಸರಳತೆ, ಎಲ್ಲವು ನೀವು ಅಳವಡಿಸಿಕೊಂಡು ಸೂಪರ್ ಸ್ಟಾರ್‌ಗಳಾಗಬೇಕು. ನೀವು ಹಿಟ್ ಸಿನಿಮಾಗಳನ್ನು ನೀಡಿ ಹೆಸರು, ಖ್ಯಾತಿ ಗಳಿಸಬೇಕು. ದೊಡ್ಮನೆ ಹೆಸರಿನ ಹೊರತಾಗಿ ನಿಮಗೂ ನಟನೆ, ಡಾನ್ಸ್, ಫೈಟ್, ಸಿನಿಮಾಗಳಿಂದ ಸ್ಟಾರ್ ವ್ಯಾಲ್ಯೂ ಸಿಗಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. 

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+