ದುನಿಯಾ ವಿಜಯ್ ಜೊತೆಗಿನ ಮನಸ್ತಾಪದ ಬಗ್ಗೆ ಲೂಸ್ ಮಾದ ಯೋಗಿ ಹೇಳಿದ್ದೇನು?
ನಟರಾದ ದುನಿಯಾ ವಿಜಯ್ ಹಾಗೂ ಲೂಸ್ ಮಾದ ಯೋಗೇಶ್ ಅವರು ಒಂದೇ ಸಿನಿಮಾ ಮೂಲಕ ಖ್ಯಾತಿ ಪಡೆದವರು. ದುನಿಯಾ ಸಿನಿಮಾದಿಂದ ನಟರಾಗಿ ಹೊರಹೊಮ್ಮಿದ ವಿಜಯ್ ಅವರು ಇಂದಿಗೂ ದುನಿಯಾ ವಿಜಯ್ ಎಂತಲೇ ಮನೆಮಾತಾಗಿದ್ದಾರೆ. ಇನ್ನು ಇದೇ ಸಿನಿಮಾದಲ್ಲಿ ಲೂಸ್ ಮಾದ ಎನ್ನುವ ವಿಲನ್ ಪಾತ್ರ ಮಾಡಿದ್ದ ಯೋಗೇಶ್ ಅವರು ಲೂಸ್ ಮಾದ ಯೋಗಿ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಆದರೆ ಇಬ್ಬರ ನಡುವೆ ಕಿರಿಕ್ ಆಗಿತ್ತು ಎನ್ನುವ ಮಾತು ಕೂಡ ಇತ್ತು. ಈ ಬಗ್ಗೆ ಖುದ್ದು ಯೋಗೇಶ್ ಅವರೇ ಮಾತನಾಡಿದ್ದಾರೆ.
ಇಬ್ಬರೂ ಕೂಡ ವಿಲನ್ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ಕೊನೆಗೆ ತಮ್ಮ ಪ್ರತಿಭೆ ದೊಡ್ಡ ನಟರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ವಿಜಯ್ ಹಾಗೂ ಯೋಗೇಶ್ ಸಂಬಂಧಿಕರು ಕೂಡ. ವಿಜಯ್ ಅವರ ಸಹೋದರಿಯ ಪುತ್ರನೇ ಯೋಗೇಶ್ ಎಂಬುದು ತಿಳಿದ ವಿಚಾರ. ಇಬ್ಬರೂ ಚಿತ್ರರಂಗದಲ್ಲಿ ನಟರಾಗಿ ಮಿಂಚುತ್ತಿದ್ದಾರೆ. ಆದರೆ, ಕೆಲ ವರ್ಷಗಳಿಂದ ಇವರಿಬ್ಬರೂ ಪರಸ್ಪರ ಅಂತರ ಕಾಯ್ದುಕೊಂಡಿದ್ದರು.

ಕೆಲವರು ಇಬ್ಬರೂ ನಟರು ಕಿರಿಕ್ ಮಾಡಿಕೊಂಡಿದ್ದರು. ಹಾಗಾಗಿ ಇಬ್ಬರೂ ದೂರವಾಗಿದ್ದಾರೆ ಎಂದು ಹಲವು ವದಂತಿಗಳು ಕೂಡ ಹಬ್ಬಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಹಲವು ಬೆಳವಣಿಗೆಗಳು ಕೂಡ ನಡೆದಿದ್ದವು. ಮೊದಲೆಲ್ಲ ದುನಿಯಾ ವಿಜಯ್ ಹಾಗೂ ಯೋಗೇಶ್ ಅಭಿಮಾನಿಗಳು ಕೂಡ ಒಗ್ಗಟ್ಟಿನಿಂದ ಇದ್ದರು. ಆದರೆ ಇಬ್ಬರೂ ನಟ ದೂರ ದೂರವಾಗಿದ್ದರಿಂದ ಅವರು ಕೂಡ ಬಂಧ ಕೂಡ ಮುರಿದಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಆಗಾಗ ಗುಸುಗುಸು ನಡೆಯುತ್ತಿತ್ತು. ಈ ದುನಿಯಾ ಜೋಡಿಯನ್ನ ಮತ್ತೆ ತೆರೆ ಮೇಲೆ ನೋಡಬೇಕು ಎಂದು ಆಸೆ ಬಿಚ್ಚಿಟ್ಟಿದ್ದರು.
ಆದರೆ, ಇಬ್ಬರೂ ನಟರು ತಮ್ಮ ಮನಸ್ತಾಪದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಯಾವ ಕಾರಣಕ್ಕೆ ತಾವು ದೂರವಾಗಿದ್ದು ಎಂಬುದು ಕೂಡ ಬಹಿರಂಗವಾಗಿರಲಿಲ್ಲ. ಸದ್ಯ ಈ ವಿಚಾರದ ಬಗ್ಗೆ ಖುದ್ದು ಲೂಸ್ ಮಾದ ಯೋಗೇಶ್ ಅವರೇ ಮಾತನಾಡಿದ್ದಾರೆ. ತಮ್ಮ ನಡುವೆ ಮನಸ್ತಾಪ ಇತ್ತು ಎಂದು ಹೇಳಿಕೊಂಡಿದ್ದಾರೆ.
ನಮ್ಮಿಬ್ಬರ ನಡುವೆ ವೈಯಕ್ತಿಕವಾಗಿ ಯಾವುದೇ ಮನಸ್ತಾಪ ಇಲ್ಲ. ಒಂದು ಟೈಮಲ್ಲಿ ನಾವಿಬ್ಬರೂ ಮಾತನಾಡುತ್ತಿರಲಿಲ್ಲ, ಅದೆಲ್ಲ ಇತ್ತು. ಈಗ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ನಟ ಯೋಗೇಶ್ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಭೀಮ ಸಿನಿಮಾದಲ್ಲಿ ನಾನು ಕೂಡ ಅಭಿನಯಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಮುಂದೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ ಎಂದು ನಟ ಯೋಗೇಶ್ ಹೇಳಿದ್ದಾರೆ. ಇನ್ನು ಹುಟ್ಟುಹಬ್ಬ ಆಚರಿಸಿಕೊಂಡ ದುನಿಯಾ ವಿಜಯ್ ಅವರಿಗೆ ಯೋಗೇಶ್ ವಿಶ್ ಮಾಡಿದ್ದಾರೆ. ಅಲ್ಲದೆ ಅವರ ಎರಡು ಸಿನಿಮಾಗಳು ಘೋಷಣೆಯಾಗಿದ್ದು, ಶುಭವಾಗಲಿ ಎಂದು ಹಾರೈಸಿದ್ದಾರೆ.

ವಿಜಯ್ ಅವರು ದುನಿಯಾ ಸಿನಿಮಾ ಮೂಲಕ ಫೇಮಸ್ ಆದರು. ನಟ ಯೋಗೇಶ್ ಅವರು ನಂದ ಲವ್ಸ್ ನಂದಿತಾ ಸಿನಿಮಾ ಮೂಲಕ ಹೀರೋ ಆದರು. ಬಳಿಕ ಸಿದ್ಲಿಂಗು ಸಿನಿಮಾ ಮೂಲಕ ಯೋಗೇಶ್ ಮನೆಮಾತಾದರು. ಬಳಿಕ ಇಬ್ಬರೂ ಒಟ್ಟಿಗೆ ನಟಿಸಲೇ ಇಲ್ಲ. ಇದೇ ಹೊತ್ತಲ್ಲಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ವೈಮನಸ್ಸು ಕೂಡ ಮೂಡಿದ ಕಾರಣ ಮಾತು ಕೂಡ ಬಿಟ್ಟಿದ್ದರು. ಸದ್ಯ ಸಿದ್ಲಿಂಗು ಸಿನಿಮಾದ ಸೀಕ್ವೆಲ್ ಸಿದ್ಲಿಂಗು-2 ಕೂಡ ಫೆಬ್ರವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.












Click it and Unblock the Notifications