Toxic Yash: ರಾಕಿ ಭಾಯ್ ಯಶ್‌ಗೆ '8' ಜತೆ ನಂಟು, ಏನಿದರ ಅಸಲಿ ಕಥೆ ತಿಳಿಯಲೇಬೇಕು!
ಬೆಂಗಳೂರು, ಆಗಸ್ಟ್ 08: ಕನ್ನಡದ ನಟ 'ಯಶ್' (Yash) ಅವರು ಪ್ಯಾನ್ ಇಂಡಿಯಾ ಸ್ಟಾರ್ ಹೊರ ಹೊಮ್ಮಿರುವ ವಿಚಾರ ಗೊತ್ತಿರುವ ಸಂಗತಿ. ಸದ್ಯ ಯಶ್ ಅವರು ಟಾಕ್ಸಿಕ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಇಂದು ಆಗಸ್ಟ್ 8ರಂದು ಗುರುವಾರ 'ಟಾಕ್ಸಿಕ್' (Toxic movie) ಸಿನಿಮಾದ ಮಹೂರ್ತ ಜರುಗಿದೆ. ಮುಂದಿನ ದಿನಗಳಲ್ಲಿ ಚಿತ್ರೀಕರಣ ಭರದಿಂದ ಸಾಗಲಿದೆ. ಈ ಮಧ್ಯೆ ಯಶ್ ಅವರು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಇದರ ಬೆನ್ನಲ್ಲೆ ಯಶ್ ಅವರ ಗುಟ್ಟೊಂದು ರಿವೀಲ್ ಆಗಿದೆ.
ಕೆಜಿಎಫ್ ಸಿನಿಮಾ ಸರಣಿ ಬಳಿಕ ಯಶ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಅವರಿಗೆಲ್ಲ ಯಶ್ ಏನು ಮಾಡುತ್ತಿದ್ದಾರೆ. ಟಾಕ್ಸಿಕ್ ಸಿನಿಮಾ ಶೂಟಿಂಗ್ ಎಲ್ಲಿಗೆ ಬಂತು? ಏನಿದೆ ಅಪ್ಡೇಟ್?. ಹೀಗೆ ಯಶ್ ಸಿನಿಮಾ ಮತ್ತು ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಸಹಜವಾಗಿಯೇ ಕುತೂಹಲ ಹೆಚ್ಚಿರುತ್ತದೆ. ಇಂಥಹ ಅಭಿಮಾನಿಗಳಿಗೆ ಗೊತ್ತಿರದ ಸಂಗತಿಯೊಂದು ರಿಲೀಲ್ ಆಗಿದೆ. ನಟ ಯಶ್ ಗೆ ಎಂಟರ (8 ನಂಬರ್) ಜತೆಗಿನ ನಂಟಿದೆ, ಅದು ಹೇಗೆ ಎಂದು ಮುಂದೆ ತಿಳಿಯಿರಿ.

ಯಶ್‌ಗೆ '8' ಜತೆ ನಂಟು, ಏನಿದು?
ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಸಿನಿಮಾಗಳ ಬಳಿಕ 'ಟಾಕ್ಸಿಕ್' ಸಿನಿಮಾ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದವರಿಗೆ ಇದೇ ಆಗಸ್ಟ್ 08 ರಂದು ಸಿನಿಮಾ ಶೂಟಿಂಗ್ ಆರಂಭಿಸುವ ಮೂಲಕ ಉತ್ತರ ಕೊಡಲಾಗಿದೆ.
ಇನ್ನೂ ಯಶ್ ಅವರು ಕಳೆದ ವರ್ಷ ಡಿಸೆಂಬರ್ 08 ರಂದೇ ತಮ್ಮ ಮುಂದಿನ ಸಿನಿಮಾ ಯಾವುದು ಎಂದು Toxic ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದರು.

ಇನ್ನೂ ಯಶ್ ಅವರ ಜನ್ಮ ದಿನಾಂಕವು ಸಹ 1985 ಜನವರಿ 08. ಇದೆಲ್ಲ ನೋಡಿದರೆ ಯಶ್ ಅವರಿಗೆ ಲಕ್ಕಿ ನಂಬರ್ 08 ಎಂಬುದರಲ್ಲಿ ಅನುಮಾನ ಇಲ್ಲ. ಇದೆಲ್ಲ ಗಮನಿಸಿದ ರಾಕಿ ಭಾಯ್ ಫ್ಯಾನ್ ಮುಂದಿನ ದಿನಗಳಲ್ಲಿ Yash 08 ಎಂದು ಬೈಕ್ ಮೇಲೆ, ಟ್ಯಾಟೋ ಹಾಕಿಸಿಕೊಂಡರು ಅಚ್ಚರಿಪಡಬೇಕಿಲ್ಲ. ಏಕೆಂದರೆ ರಾಕಿಂಗ್ ಸ್ಟಾರ್ ಯಶ್ ಅವರ ಹವಾ ಆಮಟ್ಟಿಗಿದೆ.
ಹೆಚ್ಚು ನಿರೀಕ್ಷೆ ಹುಟ್ಟಿಸಿದ ಯಶ್ 'ಟಾಕ್ಸಿಕ್'
ಯಶ್ ಅವರ ಸಿನಿಮಾಗಳು ಡಿಸೆಂಬರ್‌ನಲ್ಲಿ ಬಿಡುಗಡೆ ಆಗಿರುವ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ, ಮಾಸ್ಟರ್‌ಪೀಸ್, ಕೆಜಿಎಫ ಸರಣಿ 1' ಸಿನಿಮಾಗಳು ಡಿಸೆಂಬರ್ ನಲ್ಲಿ ಬಿಡುಗಡೆಯಾಗಿ, ಸಕ್ಸಸ್ ಕಂಡಿದ್ದವು. ಡಿಸೆಂಬರ್ ಯಶ್‌ಗೆ ಫೇವರೇಟ್ ಎಂದು ಗೊತ್ತಿದ್ದ ಲಕ್ಕಿಯ ಅಭಿಮಾನಿಗಳಿಗೆ ಇದೀಗ ಯಶ್ ಲಕ್ಕಿ ನಂಬರ್ 08 ಎಂಬುದು ಗೊತ್ತಾಗಿದೆ. ಮೇಲಿನ ಇದೆಲ್ಲ ಕಾರಣಗಳಿಂದಾಗಿ ಯಶ್ ಮುಂದಿನ 'ಟಾಕ್ಸಿಕ್' ಸಿನಿಮಾ ಹೆಚ್ಚು ನಿರೀಕ್ಷೆ ಸೃಷ್ಟಿಸುತ್ತಿದೆ.












Click it and Unblock the Notifications