KGF star Yash: ಹೊಸ ಲುಕ್‌ನಲ್ಲಿ ರಾಧಿಕಾ ಪಂಡಿತ್ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡ ನಟ ಯಶ್
ಮುಂಬೈ, ಜುಲೈ. 12: ದೇಶದ ಅತೀ ಶ್ರೀಮಂತ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಮದುವೆ ಕಾರ್ಯಕ್ರಮಕ್ಕೆ ತಾರಾ ಮೆರುಗು ಹೆಚ್ಚಲಿದೆ. ಮೂರು ದಿನಗಳ ಈ ಮದುವೆಯಲ್ಲಿ ಪಾಲ್ಗೊಳ್ಳಲು ಕನ್ನಡದ ನಟ ಯಶ್ ತಮ್ಮ ಪತ್ನಿ, ನಟಿ ರಾಧಿಕಾ ಪಂಡಿತ್ ಜೊತೆ ಮುಂಬೈಗೆ ತೆರಳಿದ್ದಾರೆ.
ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಯಶ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಫೋಟೋ ಮತ್ತು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸ್ಟಾರ್ ದಂಪತಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಪಾಲ್ಗೊಳ್ಳಲು ಮುಂಬೈ ಮಹಾನಗರಕ್ಕೆ ತೆರಳಿದ್ದಾರೆ.

ಅಂಬಾನಿ ಮದುವೆಯಲ್ಲಿ ಯಶ್ ದಂಪತಿ
ಈಗಾಗಲೇ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ಅವರ ಗೆಳತಿ ರಾಧಿಕಾ ಮರ್ಚೆಂಚ್ ಮದುವೆಯಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಸೆಲಬ್ರಿಟಿಗಳು ಮುಂಬೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ. ಹಾಲಿವುಡ್ ಸೆಲಬ್ರಿಟಿಗಳು, ಡಬ್ಲೂಡಬ್ಲೂಎಫ್‌ನ ಖ್ಯಾತಿಯ ಜಾನ್ ಸೀನಾ ಕೂಡ ಕಾಣಿಸಿಕೊಂಡಿದ್ದಾರೆ. ಈಗ ಎಲ್ಲರ ಗಮನ ನಟ ಯಶ್ ಮತ್ತು ರಾಧಿಕಾ ಪಂಡಿತ್ ಮೇಲೆ ನಿಂತಿದೆ.
ಅಂಬಾನಿ ಪುತ್ರನ ಅದ್ಧೂರಿ ವಿವಾಹದಲ್ಲಿ ಇಡೀ ಬಾಲಿವುಡ್ ಹಾಜರಾಗುವುದಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ದಕ್ಷಿಣ ಭಾರತದಿಂದ ಯಾವ ಯಾವ ನಟರು ಮದುವೆಯಲ್ಲಿ ಫೋಟೋಗೆ ಫೋಸ್ ನೀಡುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತೂರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಬಳಿಕ ನಟ ಯಶ್ ಬಗ್ಗೆ ಬಾಲಿವುಡ್‌ನಲ್ಲಿ ಫಾನ್ ಫಾಲೋವಿಂಗ್ ಜಾಸ್ತಿಯಿದ್ದು, ಅವರನ್ನು ಅಂಬಾನಿ ಕುಟುಂಬದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಹೊಸ ಲುಕ್‌ನಲ್ಲಿ ರಾಕಿ ಎಂಟ್ರಿ, ಫ್ಯಾನ್ಸ್ ಥ್ರಿಲ್!
ಇನ್ನು, ಮುಂಬೈನಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ಲುಕ್ ಸಕತ್ ಹವಾ ಎಬ್ಬಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ತಮ್ಮ ನೆಚ್ಚಿನ ನಟನ ಹೊಸ ಅವತಾರ ಕಂಡು ಅವರ ಮುಂಬರುವ ಸಿನಿಮಾದ ಬಗ್ಗೆ ತಮ್ಮದೆ ಊಹಾಪೋಹಗಳನ್ನು ಹರಿಯಬಿಡುತ್ತಿದ್ದಾರೆ.
ಕೆಜಿಎಫ್ ಪಾತ್ರದ ಅವತಾರದಲ್ಲಿಯೇ ತುಂಬಾ ಕಾಲ ಕಾಣಿಸಿಕೊಂಡಿದ್ದ ನಟ ಯಶ್, ತಮ್ಮ ಲುಕ್ ಬದಲಿಸಿದ್ದಾರೆ. ಕಪ್ಪು ಉಡುಪಿನಲ್ಲಿ ಮತ್ತು ಹೊಸ ಗಡ್ಡದಲ್ಲಿ ಸೂಪರ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿ ಅವರ ಫ್ಯಾನ್ಸ್ ಇದು 'ಟಾಕ್ಸಿಕ್' ಸಿನಿಮಾದ ಲುಕ್ ಎಂದು ಅಂದಾಜಿಸುತ್ತಿದ್ದಾರೆ. ಯಶ್ ಫೋಟೋಗಳು ಸೋಶೀಯಲ್ ಮಿಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದುಮ ಟಾಕ್ಸಿಕ್ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ.
ನಟ ಯಶ್ ಅವರ ಮುಂಬರುವ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಇದರ ಜೊತೆಗೆ ಯಶ್ ನಿತೀನ್ ತಿವಾರಿ ಅವರ ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾದೊಂದಿಗೆ ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.












Click it and Unblock the Notifications