Actor Yash: ಹುಟ್ಟುಹಬ್ಬ ಸಂಭ್ರಮಾಚರಣೆ ಬಗ್ಗೆ ಅಭಿಮಾನಿಗಳಿಗೆ ನಟ ರಾಕಿಂಗ್ ಸ್ಟಾರ್ ಯಶ್ ವಿಶೇಷ ಸಂದೇಶ
Actor Yash: ಕನ್ನಡ ಚಿತ್ರರಂಗವನ್ನು ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಇಂದು (ಜನವರಿ 8) 40ನೇ ವರ್ಷದ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿರುವ ಅಭಿಮಾನಿಗಳಿಗೆ ಯಶ್ ಅವರು ದಯವಿಟ್ಟು ಕಾಯಿರಿ ಎನ್ನುವ ರೀತಿಯಲ್ಲಿ ವಿಶೇಷ ಸಂದೇಶವನ್ನು ರವಾನೆ ಮಾಡಿದ್ದಾರೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಟ ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಜನವರಿ 8ರಂದು ಅಂದರೆ ಇಂದು ಯಶ್ ಹುಟ್ಟುಹಬ್ಬ ಇದ್ದು, ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಅಭಿಮಾನಿಗಳಿಗೆ ವಿಶೇಶ ಸಂದೇಶ: ಆದರೆ, ಯಶ್ ಈ ದಿನ ಅಭಿಮಾನಿಗಳ ಜೊತೆ ಹುಟ್ಟಹಬ್ಬ ಸಂಭ್ರಮಾಚರಣೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ತಿಳಿಸಿದ್ದು, ಯಾವಾಗ ಸಂಭ್ರಮ ಮಾಡುವುದು ಎನ್ನುವ ಬಗ್ಗೆ ದಿನಾಂಕ ಸಹಿತ ವಿಶೇಷ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ನಿರೀಕ್ಷೆಯನ್ನ ನಿಜವಾಗಿಸುವ ಕೆಲಸದಲ್ಲಿದ್ದೇನೆ: ಅಭಿಮಾನಿಗಳು ಇಂದು ಯಶ್ ಅವರ ಹೊಸ ಸಿನಿಮಾಗಳ ಪೋಸ್ಟರ್, ಡೈಲಾಗ್, ರೀಲ್ಸ್ ಮತ್ತು ಡಿಪಿಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಯಶ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, "ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ.. ನೀವು ಕೊಟ್ಟ ಪ್ರೀತಿ, ತೋರಿದ ಅಭಿಮಾನದಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಿಮ್ಮ ಮುಗಿಲೆತ್ತರದ ನಿರೀಕ್ಷೆಯನ್ನ ನಿಜವಾಗಿಸುವ ಕೆಲಸದಲ್ಲಿ ನಾನಿದ್ದೇನೆ," ಎಂದು ಬರೆದುಕೊಂಡಿದ್ದಾರೆ.
ಮಾರ್ಚ್ 19ರಂದು ಸಂಭ್ರಮಿಸೋಣ: ಅಲ್ಲದೆ, "ನೀವು ಈಗಾಗಲೇ ಸಂಭ್ರಮಿಸುತ್ತಿರುವುದು ಬಿಡುವಿಲ್ಲದ ಕೆಲಸದ ನಡುವೆ ಜನ್ಮದಿನವನ್ನು ನೆನಪಿಸಿದೆ. ಸಿನಿಮಾದ ಕೆಲಸ ಕೊನೆ ಹಂತದಲ್ಲಿರುವ ಕಾರಣ ನಿಮ್ಮೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿಷ್ಕಲ್ಮಶ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿ. ಜನ್ಮದಿನದ ಸಂಭ್ರಮದಲ್ಲಿ ನನ್ನ ಮನಸ್ಸಿಗೆ ಸಂಕಟ ತರುವ ಕೆಲಸ ಅಭಿಮಾನಿಗಳಿಂದಾಗುವುದಿಲ್ಲ ಎಂಬ ನಂಬಿಕೆ ನನ್ನದು. ಮಾರ್ಚ್ 19ರಂದು ಎಲ್ಲರೂ ಸೇರಿ ಸಂಭ್ರಮಿಸೋಣ. ನಿಮ್ಮಗೆ ಒಳ್ಳೆಯದಾಗಲಿ," ಎನ್ನುವ ಸಂದೇಶವನ್ನು ಕಳುಹಿಸಿದ್ದಾರೆ.
ಈ ಮೂಲಕ ಈ ದಿನ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳು ಆಗುತ್ತಿಲ್ಲ. ಬದಲಾಗಿ 'ಟಾಕ್ಸಿಕ್' ಸಿನಿಮಾದ ದೊಡ್ಡ ಸಂಭ್ರಮವನ್ನು ಮಾರ್ಚ್ 19ರಂದು ಜೊತೆಯಾಗಿ ಆಚರಿಸೋಣ ಎಂದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಇನ್ನೂ 2024ರಂದು ಗದಗ ಜಿಲ್ಲೆಯ ಸುರನಗಿ ಗ್ರಾಮದಲ್ಲಿ ಅಭಿಮಾನಿಗಳು ಬ್ಯಾನರ್ ಕಟ್ಟುವ ಸಮಯದಲ್ಲಿ ವಿದ್ಯುತ್ ಸ್ಪರ್ಷದಿಂದ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ಘಟನೆಯ ನಂತರ ಅಭಿಮಾನಿಗಳ ಜೊತೆ ಯಶ್ ತಮ್ಮ ಹುಟ್ಟುಹಬ್ಬ ಆಚರಿಕೊಳ್ಳದಿರಲು ನಿರ್ಧಾರ ಮಾಡಿದ್ದರು. ಕಳೆದ ವರ್ಷ ಸಹ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಇನ್ನೂ ಈ ಬಾರಿ ಮಾರ್ಚ್ 19ರಂದು ಎಲ್ಲರೂ ಸೇರಿ ಸಂಭ್ರಮಿಸೋಣ ಎನ್ನುವ ಸಂದೇಶವನ್ನು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.












Click it and Unblock the Notifications