ನಟ ವಿಜಯ್ ದೇವರಕೊಂಡ-ಮಾಜಿ ಪ್ರೇಯಸಿ ವರ್ಜಿನ್ ಫೋಟೋ ವೈರಲ್: ಬ್ರೇಕಪ್ ಆಗಿದ್ದೇಕೆ?
ಬೆಂಗಳೂರು, ಜುಲೈ 22: ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣಾ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಇವರಿಬ್ಬರು ಮದುವೆ ಆಗುತ್ತಾರೆ ಎಂಬೆಲ್ಲ ಸುದ್ದಿ ಆಗಾಗ್ಗೆ ಹರಿದಾಡುತ್ತಲೇ ಇರುತ್ತದೆ. ಈ ಮಧ್ಯೆ ನಟ ವಿಜಯ್ ದೇವರಕೊಂಡ ಅವರ ತಮ್ಮ ಮಾಜಿ ಪ್ರೇಯಸಿ ಜತೆಗಿನ ಒಂದಷ್ಟು ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹೌದು, ನಟಿ ರಶ್ಮಿಕಾ ಮಂದಣ್ಣಾಗೂ ಮೊದಲು ನಟ ವಿಜಯ್ ದೇವರಕೊಂಡ ಅವರು ಯುರೋಪಿಯನ್ ಯುವತಿ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಮಧ್ಯೆ ಲವ್ ಇತ್ತು. ಆಗ ಜೊತೆಗಿದ್ದ ಕೆಲವು ಫೋಟೋಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವರ್ಜಿನ್ ಜತೆ ವಿಜಯ್ ಡೇಟಿಂಗ್
ನಟಿ ರಶ್ಮಿಕಾ ಮಂದಣ್ಣಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳ ಮಧ್ಯೆ ವಿಜಯ್ ದೇವರಕೊಂಡ ಚಿತ್ರರಂಗದ ಆರಂಭಿಕ ದಿನಗಳಲ್ಲಿ ಈ ಬೆಲ್ಜಿಯಂ ಪ್ರಜೆಯಾಗಿರುವ 'ವರ್ಜಿನ್' ಯುವತಿಯನ್ನು ಪ್ರೀತಿಸುತ್ತಿದ್ದರು. ನಂತರ ಅವರೊಂದಿಗಿನ ಪ್ರೀತಿಮುರಿದು ಬಿತ್ತು. ಇಬ್ಬರು ಬೇರ್ಪಟ್ಟರು. ಅಂದು ಅವರಿಬ್ಬರು ಡೇಟಿಂಗ್ ವೇಳೆ ತೆಗೆದುಕೊಂಡಿರುವ ಫೋಟೋಗಳು ಇಂದು ಸಾಮಾಜಿಕ ಜಾಲತಾಣವಾದ ರೆಡಿಟ್ ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ.
ಫೋಟೋಗಳಲ್ಲಿ ನಟ ವಿಜಯ್ ಮತ್ತು ವರ್ಜಿನ್ ಕ್ಯಾಮೆರಾ ಪೋಸ್ ನೀಡಿದ್ದಾರೆ. ವರ್ಜಿನ್ ಕೆನ್ನೆಗೆ ನಟ ವಿಜಯ್ ಮುತ್ತಿಕ್ಕುವ ಫೋಟೋ ಸಹ ಇಲ್ಲಿದೆ. ಇದನ್ನು ನೋಡಿದ ಕೆಲವು ನೆಟ್ಟಿಗರು ಇಬ್ಬರು ಪ್ರೀತಿ ಮುರಿದು ಬಿದ್ದಿದ್ದೇಕೆ? ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ. ಇವರು ಮತ್ತೊಬ್ಬ ಸಲ್ಮಾನ್ ಖಾನ್ ಅಂತಲೂ ಕೆಲವುರು ಕಾಮೆಂಟ್ ಮಾಡಿದ್ದಾರೆ.
2018ರಲ್ಲಿ ಬ್ರೇಕಪ್: ತಾನು ಒಂಟಿ ಎಂದಿದ್ದ ನಟ
ವಿಜಯ್ ಮತ್ತು ವರ್ಜಿನ್ ಲವ್ 2018ರ ಚಿತ್ರವೊಂದರ ಬಿಡುಗಡೆ ಮೊದಲು ಬ್ರೇಕಪ್ ಆಗಿದೆ ಎಂದು ವರದಿ ಆಗಿದೆ. ಅಂದಿನ ಆ ಚಿತ್ರದ ಚಿತ್ರದ ಪ್ರಚಾರ ವೇಳೆ ವಿಜಯ್ ತಾವು ಒಂಟಿ ಎಂದು ಹೇಳಿಕೊಂಡಿದ್ದರು. ಇದು ಸಹ ವರದಿ ಆಗಿತ್ತು.

ಇದೆಲ್ಲ ಆಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ವಿಜಯ್ ಹಾಗೂ ನಟಿ ರಶ್ಮಿಕಾ ಮಧ್ಯೆ ಲವ್ವಿ ಡವ್ವಿ ನಡೆಯುತ್ತಿದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸು ಗುಸು ಟಾಲಿವುಡ್ ನಲ್ಲಿ ಹರಿದಾಡಿತ್ತು. ಆದರೆ ಇದನ್ನು ಇಬ್ಬರು ತಳ್ಳಿಹಾಕಿದ್ದು, ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ ಎಂದು ಹೇಳಿಕೊಂಡಿದ್ದರು. ಆದರೆ ಇವರಿಬ್ಬರು ಫೋಟೋಗಳು, ಒಂದೇ ಸ್ಥಳದ ಫೋಟೋ, ಡ್ರೆಸ್‌ಗಳ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
ರಶ್ಮಿಕಾ-ವಿಜಯ್ ನಿಶ್ಚಿತಾರ್ಥ ವದಂತಿ
ಇನ್ನೂ ಕೆಲವೇ ತಿಂಗಳ ಹಿಂದಷ್ಟೇ ವಿಜಯ್ ಮತ್ತು ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಳ್ಳುವುದು ಪಕ್ಕಾ ಆಗಿದೆ ಎಂಬ ವದಂತಿ ಹರಿದಾಡಿತ್ತು. ಈ ವೇಳೆ ಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದರು. 'ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದಿಲ್ಲ ಅಥವಾ ಮದುವೆಯಾಗುವುದಿಲ್ಲ'. ಪ್ರತಿ ವರ್ಷವು ನಾನು ನನ್ನ ಮದುವೆ ವದಂತಿಗಳ ಬಗ್ಗೆ ಕೇಳುತ್ತಿರುತ್ತೇನೆ ಎಂದು ವದಂತಿಗಳಿಗೆ ತೆರೆ ಎಳೆದಿದ್ದರು.
ನಟಿ ರಶ್ಮಿಕಾ, ವಿಜಯ್ ತಮ್ಮದೇ ಆದ ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಈ ಮಧ್ಯೆ ವಿಜಯ್ ಮಾಜಿ ಪ್ರೇಯಸಿ ಜೊತೆಗಿನ ಕೆಲವು ಫೋಟೋಗಳು ವೈರಲ್ ಆಗಿವೆ. ಈ ಬಗ್ಗೆ ಅವರು ಪ್ರತಿಕ್ರಿಯಿಸುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications