Upendra: ಉಪೇಂದ್ರ ಸಿಎಂ ಆದರೆ ಮೊದಲು ಮಾಡೋ ಕೆಲಸ ಏನು ಗೊತ್ತಾ?
ನಟ, ನಿರ್ದೇಶಕರಾಗಿರುವ ಉಪೇಂದ್ರ ಅವರು 'ಪ್ರಾಜಾಕೀಯ' ಹೆಸರಿನ ಪಕ್ಷ ಆರಂಭಿಸಿದ್ದಾರೆ. ರಾಜ್ಯದಲ್ಲಿ ನಡೆದ ಹಲವು ಚುನಾವಣೆಯಲ್ಲಿ ಪ್ರಾಜಾಕೀಯ ಪಕ್ಷದಿಂದ ಹಲವರು ಸ್ಪರ್ಧೆ ಮಾಡಿದ್ದಾರೆ. ಮುಂದೊಂದು ದಿನ ನಟ ಉಪೇಂದ್ರ ಅವರು ಸ್ಪರ್ಧೆ ಮಾಡ್ಬಹುದು ಎಂದು ಅನೇಕರು ಅಂದುಕೊಂಡಿದ್ದಾರೆ.
ನಟ, ನಿರ್ದೇಶಕರಾಗಿರು ಉಪೇಂದ್ರ ಅವರ ಆಲೋಚನೆಗಳು ಸ್ಪಲ್ಪ ವಿಭಿನ್ನವೇ ಒಂದೊಮ್ಮೆ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ಏನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲಾರಲ್ಲೂ ಮೂಡುತ್ತದೆ. ಈ ಪ್ರಶ್ನೆ ನಟ ಹಾಗೂ ನಿರ್ದೇಶಕರಾದ ಉಪೇಂದ್ರ ಅವರೇ ಉತ್ತರಿಸಿದ್ದಾರೆ.

ಉಪೇಂದ್ರ ನಟನೆಯ ಹೊಸ ಚಿತ್ರ 'ಯುಐ' ಬಿಡುಗಡೆಯಾಗಿದೆ. ಈ ಚಿತ್ರವನ್ನು ಜನರು ನೋಡಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ.ಆದರೆ ಉಪೇಂದ್ರ ಅವರ ಹಳೆಯ ವಿಡಿಯೋ ಒಂದು ಇದೀಗ ಸಕತ್ ವೈರಲ್ ಆಗುತ್ತಿದೆ.
ವೈರಲ್ ಆದ ಈ ಹಳೆಯ ವಿಡಿಯೋಗಳಲ್ಲಿ ಉಪೇಂದ್ರ ಅವರು ತಮ್ಮ ಆಲೋಚನೆಗಳ ಬಗ್ಗೆ ಹೇಳಿಕೊಂಡಿದ್ದರು. ಅವರ ರಾಜಕೀಯ ಆಕಾಂಕ್ಷೆಗಳು ಮತ್ತು ಮುಖ್ಯಮಂತ್ರಿಯಾದರೆ ಮಾಡುವ ಕೆಲಸಗಳ ಬಗ್ಗೆ ಮಾತನಾಡಿದ್ದರು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜೊತೆ ಕಾರ್ಯಕ್ರಮ ಒಂದರಲ್ಲಿ ಮುಖ್ಯಮಂತ್ರಿಯಾದರೆ ಮಾಡುವ ಮೊದಲ ಕೆಲಸದ ಬಗ್ಗೆ ನಟ ಉಪೇಂದ್ರ ಅವರು ಮಾತನಾಡಿದ್ದಾರೆ.
'ನೀವು ಸಿಎಂ ಆದರೆ, ಮಾಡುವ ಮೊದಲ ಕೆಲಸ ಏನು' ಎಂದು ನಟ ಶಿವರಾಜ್ಕುಮಾರ್ ಕೇಳಿದ್ದಾರೆ. ಈ ಪ್ರಶ್ನೆಗೆ ಉಪೇಂದ್ರ ಅವರು, 'ನಾನು ಮೊದಲು ವಿಧಾನಸೌಧದ ಬಾಗಿಲು ಹಾಕಿಸುತ್ತೇನೆ. ನಂದು ಪ್ರಜಾಕೀಯ. ವಿಧಾನಸೌಧ ನೋಡಿದರೆ ರಾಜಕೀಯ ಎನಿಸುತ್ತದೆ. ರಾಜರು ತರ ಅರಮನೆ ಕಟ್ಟಿಕೊಂಡಿದ್ದಾರೆ' ಎಂದು ಹೇಳಿದ್ದಾರೆ. ನನ್ನ ಪ್ರಕಾರ ಎಲ್ಲಾ ಶಾಸಕರು ಕ್ಷೇತ್ರಕ್ಕೆ ಬಂದು ಕೆಲಸ ಮಾಡಬೇಕು. ವಿಧಾನಸೌಧವನ್ನು ಮ್ಯೂಸಿಯಂ ಮಾಡಬೇಕು. ವೀಕೆಂಡ್ನಲ್ಲಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕು. ಪ್ರವಾಸಿ ತಾಣ ಮಾಡಬೇಕು ಎಂದು ಉಪೇಂದ್ರ ಅವರು ಹೇಳಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಅವರು ಮಾತನಾಡಿ, ನೀವು ಸಿನಿಮಾ ರೀತಿ ಆಲೋಚನೆ ಮಾಡಿದ್ದೀರಿ ಅದು ನನಗೆ ಇಷ್ಟ ಆಯಿತು' ಎಂದು ಹೇಳಿದ್ದಾರೆ.
ಯುಐ' ಸಿನಿಮಾ ಬಿಡುಗಡೆ
ಉಪೇಂದ್ರ ನಟನೆಯ 'ಯುಐ' ಸಿನಿಮಾ ಇಂದು (ಶುಕ್ರವಾರ) ಬಿಡುಗಡೆಯಾಗಿದು, ಯುಐ ಸಿನಿಮಾಗೆ ಹಲವು ನಾಯಕ ನಟ ಸಾಥ್ ನೀಡಿದ್ದು, ಈ ಸಿನಿಮಾ ಬಿಡುಗಡೆಗೆ ಮುಂಚೆ ನಟರಾದ ಆಮಿರ್ ಖಾನ್ ಮತ್ತು ತೆಲುಗು ನಟ ನಾಗಾರ್ಜುನ ಅವರುಗಳು ಸಿನಿಮಾದ ಪ್ರಚಾರ ಮಾಡಿದ್ದಾರೆ. ಇದೀಗ ನಟರಾದ ರಜನೀಕಾಂತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರುಗಳು ಉಪೇಂದ್ರ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಇನ್ನೂ ಯುಐ ಸಿನಿಮಾದ ಕುರಿತ ನಟ ಉಪೇಂದ್ರ ಅವರು ಟ್ವೀಟ್ ಮಾಡಿದ್ದು, ಅಭಿಮಾನಿಗಳ ಮುಂದೆ ಪ್ರಶ್ನೆಯೊಂದನ್ನ ಇಟ್ಟಿದ್ದಾರೆ. ಕಾತುರದಿಂದ ಕಾಯುತ್ತಿದ್ದೇನೆ...... U I ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು ..... ಎಂದು ಉಪೇಂದ್ರ ಅವರು ಬರೆದುಕೊಂಡಿದ್ದಾರೆ.












Click it and Unblock the Notifications