ಅಭಿಮಾನಿಗಳಿಗೆ ಅವಮಾನ ಮಾಡಿದ್ರಾ ತ್ರಿವಿಕ್ರಮ್? ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ನಟ ತ್ರಿವಿಕಮ್ ಕಿರುತೆರೆಯಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಿದ್ದಾರೆ. ಮುದ್ದು ಸೊಸೆ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿರುವ ತ್ರಿವಿಕಮ್ ವಿರುದ್ಧ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಬಿಗ್ ಬಾಸ್‌ನಲ್ಲಿ ತ್ರಿವಿಕಮ್ ಗೆಲುವಿಗೆ ವೋಟ್ ಹಾಕಿದವರಿಗೆ ನಟನ ಮಾತುಗಳಿಂದ ಬೇಸರವಾಗಿದೆ. ಅಷ್ಟಕ್ಕೂ ಏನಿದು ತ್ರಿವಿಕಮ್ ಹೇಳಿಕೆ ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ.
ತ್ರಿವಿಕಮ್ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ತಮಗೆ ವೋಟ್ ಹಾಕಿಸಿದವರ ಬಗ್ಗೆ ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು 'ಬಿಗ್ ಬಾಸ್ ಮೊದಲ ಸೀಸನ್‌ನಿಂದ ಹನ್ನೊಂದರವರೆಗೆ ನೋಡುವುದಾದರೆ, ನಾನು ಯಾರನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದೆ ಅವರೆಲ್ಲಾ ಎಲ್ಲಿದಾರೋ ಅಲ್ಲೇ ಇದ್ದಾರೆ. ಜನಗಳು ಹೊಗಳುವುದು ಬದಲಾಗಿಲ್ಲ, ಹೊಗಳುವ ರೀತಿ ಬದಲಾಗಿಲ್ಲ, ಹೊಗಳಿಸಿಕೊಳ್ಳುವ ವ್ಯಕ್ತಿ ಮಾತ್ರ ಸೀಸನ್‌ನಿಂದ ಸೀಸನ್‌ಗೆ ಬದಲಾಗಿದ್ದಾರೆ ಅಷ್ಟೇ. ಹೀಗಾಗಿ ನಾನು ಬಿಗ್ ಬಾಸ್ ಮನೆಯಿಂದ ಹೊರಬಂದಾಗ ಯಾರಿಗೂ ಸಿಗದೇ ಸುಮ್ಮನಾಗಿದ್ದೆ' ಎಂದರು.

'ಯಾಕೆಂದರೆ ಸಿಕ್ಕಿದವರೆಲ್ಲಾ ನನಗೆ ವೋಟು ಹಾಕಿಸಿದ್ದೀನಿ ಅನ್ನುತ್ತಿದ್ದರು. ಹೌದು ಗುರು ನೀನು ವೋಟು ಹಾಕಿಸಿದ್ದೀಯಾ ಖುಷಿ. ನೀನು ಯಾಕೆ ವೋಟ್ ಹಾಕಿಸಿದೆ ಹೇಳು? ನಿನಗೆ ಬೇಕಾಗಿರುವುದು ಖುಷಿಯ ಕ್ಷಣಗಳು ಮಾತ್ರ. ಸ್ಟೇಟಸ್‌ಗೆ ಹಾಕಿದರೆ ನಿನಗೆ ಹೆಸರು ಬರುತ್ತದೆ ಅಂತಾ ಗೊತ್ತಾದರೆ ನೀನು ಹಾಕುತ್ತೀಯಾ. ಸಪೋರ್ಟ್ ಮಾಡುತ್ತೀಯಾ. ಆದರೆ ಅದುಕೋಸ್ಕರ ಕೆಲಸ ಮಾಡಿದ್ದು ನಾನು' ಎಂದು ಹೇಳಿದರು.
'ನೂರು ಇಪ್ಪತ್ತು ದಿನ ಮೊಬೈಲ್ ಇಲ್ಲದೇ, ಸ್ನೇಹಿತರಿಲ್ಲದೇ, ಹೆತ್ತವರಿಲ್ಲದೇ, ಏನೂ ಇಲ್ಲದೇ, ಪ್ರತಿ ದಿನ ನಿನ್ನನ್ನು ಬಡಿದು ಬಾಯಿಗೆ ಹಾಕಿಕೊಳ್ಳಬೇಕು ಎನ್ನುವವರ ಜೊತೆ ಇದ್ದವನು ನಾನು. ಹಾಗಿದ್ದಾಗ ಕೆಲಸ ನಾನು ಮಾಡಿದೆನಾ? ನೀನು ಮಾಡಿದ್ದಾ?, ಎರಡೆರಡು ಫೋನ್, ಟೆನ್ಷನ್ ಆದರೆ ಧಮ್, ಇನ್ನೂ ಟೆನ್ಷನ್ ಆದರೆ ಫ್ರೆಂಡ್ಸ್, ಇನ್ನೂ ಟೆನ್ಷನ್ ಆದರೆ ಟ್ರಿಪ್ ಅಂತಾ ಇದ್ದಿದ್ದು ಹೊರಗಡೆ ಇದ್ದವರು. ನಾವಲ್ಲಿ ಏನೇ ಟೆನ್ಷನ್ ಆದರೂ ನಾವೇ ಕೂತು ಯೋಚನೆ ಮಾಡಿ ಬಗೆಹರಿಸಿಕೊಳ್ಳಬೇಕಿತ್ತು' ಎಂದರು.

'ನಿನಗೆ ಮತ್ತೇ ಮತ್ತೇ ಸ್ಟೇಟಸ್‌ಗೆ ಹಾಕಿಕೊಳ್ಳುವಂತೆ ಮಾಡಿದ್ಯಾರು?. ಹೀಗಿದ್ದ ಮೇಲೆ ನೀನು ಯಾವ ವೋಟ್ ಹಾಕಿರುವುದು, ಯಾವ ವೋಟ್ ಹಾಕಿಸಿರುವುದರ ಬಗ್ಗೆ ಮಾತನಾಡುತ್ತಿದ್ದೀಯಾ? ನಾನು ಆಟ ಆಡಿದ ಪರಿ ನಿಮಗೆ ಇಷ್ಟ ಆಯ್ತು ಅಷ್ಟೇ. ಅದೇ ಮಧ್ಯದಲ್ಲಿ ಹೋದವರ ಸ್ಟೇಟಸ್ ಯಾಕೆ ಹಾಕಿಲ್ಲ, ಯಾಕಂದ್ರೆ ಅವರು ನಿಮಗೆ ಇಷ್ಟ ಆಗಿಲ್ಲ ಅಂತಾ ಅಲ್ಲ ಅವರು ಮಧ್ಯೆದಲ್ಲಿಯೇ ಸೋತರು ಅಂತಾ. ಕೊನೆಯವರೆಗೂ ಬಂದವನನ್ನು ನಾನು ಸ್ಟೇಟಸ್ ಹಾಕದೇ, ನಾನು ವೋಟ್ ಹಾಕಿಸಿದೆ ಅಂದರೆ ಹೇಗೆ' ಎಂದು ತ್ರಿವಿಕಮ್ ಸಂದರ್ಶನದಲ್ಲಿ ಕೇಳಿದ್ದಾರೆ.
ಸದ್ಯ ತ್ರಿವಿಕಮ್ ಈ ಮಾತುಗಳು ವೈರಲ್ ಆಗುತ್ತಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ತ್ರಿವಿಕಮ್ ಗೆಲ್ಲಬೇಕು ಎಂದು ವೋಟ್ ಹಾಕಿದವರಿಗೆ ಅವಮಾನ ಮಾಡಿದ್ದಾರೆ. ಪ್ರೀತಿ ವಿಶ್ವಾಸದಿಂದ ವೋಟ್ ಹಾಕಿದರೆ ಹಾಗೂ ಹಾಕಿಸಿದರೆ ನಾನು ಮಾಡಿರುವುದಕ್ಕೆ ನೀನು ವೋಟ್ ಹಾಕಿಸಿದ್ದೀಯಾ ಎನ್ನುವ ಮೂಲಕ ತ್ರಿವಿಕಮ್ ದುರಂಕಾರದ ಉತ್ತರ ಕೊಟ್ಟಿದ್ದಾರೆ ಎನ್ನುವ ಕಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ.












Click it and Unblock the Notifications