ನಾನು ಬೆಂಗಳೂರಲ್ಲಿ ಇದ್ದಿದ್ರೆ ಅದನ್ನ ಮಾಡ್ತಿದ್ದೆ: ಅಮೇರಿಕಾದಲ್ಲಿ ಶಿವಣ್ಣ ಮಿಸ್ ಮಾಡಿಕೊಂಡಿದ್ದೇನು?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಕ್ಯಾನ್ಸರ್ ಸರ್ಜರಿಗಾಗಿ ಅಮೇರಿಕಾಗೆ ತೆರಳಿದ್ದಾರೆ. ಇತ್ತೀಚೆಗೆ ಶಿವಣ್ಣ ಅವರಿಗೆ ಸರ್ಜರಿ ಪೂರ್ಣಗೊಂಡಿದ್ದು ಸದ್ಯ ಅವರು ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅವರು ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಇನ್ನು ಕನ್ನಡ ಚಿತ್ರರಂಗಕ್ಕೆ ದೊಡ್ಡಣ್ಣನ ಸ್ಥಾನದಲ್ಲಿರುವ ಶಿವಣ್ಣ ಅಮೇರಿಕಾದಲ್ಲಿದ್ದರೂ ಸ್ಯಾಂಡಲ್‌ವುಡ್ ಬಗ್ಗೆ ಕಾಳಜಿ ತೋರಿದ್ದಾರೆ.
ಸದ್ಯ ಎಲ್ಲರೂ ಶಿವಣ್ಣ ಅವರು ಬೇಗ ಗುಣಮುಖರಾಗಲಿ. ಅವರ ಆರೋಗ್ಯ ಸುಧಾರಿಸಿ, ಆಯಸ್ಸು ವೃದ್ಧಿಯಾಗಲಿ ಎಂದೆಲ್ಲ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಶಿವಣ್ಣ ಅಮೇರಿಕಾದಲ್ಲಿದ್ದರೂ ಸ್ಯಾಂಡಲ್‌ವುಡ್ ಚಿಂತೆಯಲ್ಲೇ ಮುಳುಗಿದ್ದಾರೆ. ಇನ್ನು ಇತ್ತೀಚೆಗೆ ರಿಲೀಸ್ ಆದ ಕನ್ನಡ ಸಿನಿಮಾಗಳ ಬಗ್ಗೆ ಶಿವಣ್ಣ ಹಾಡಿ ಹೊಗಳಿದ್ದಾರೆ. ಅಮೇರಿಕಾದಿಂದಲೇ ಈ ಸಿನಿಮಾಗಳಿಗೆ ಅವರು ಆಲ್ ದಿ ಬೆಸ್ಟ್ ಕೂಡ ಹೇಳಿದ್ದಾರೆ.

ನಟ ಶರಣ್ ಅಭಿನಯದ ಛೂ ಮಂತರ್ ಸಿನಿಮಾದ ಬಗ್ಗೆಯೂ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶರಣ್ ಅವರ ಕಾಮಿಡಿ ಟೈಮಿಂಗ್ ನನ್ನ ಫೇವರಿಟ್. ಇಡೀ ಕುಟುಂಬ ಕೂತು ನೋಡಿ ಮೆಚ್ಚುವ ಸಿನಿಮಾಗಳಲ್ಲಿ ಯಾವಾಗ್ಲೂ ಶರಣ್ ಮುಂದಿರ್ತಾರೆ. 'ಛೂ ಮಂತರ್' ಕೂಡ ಅದೇ ಸಾಲಿಗೆ ಸೇರಿಕೊಳ್ಳುವ ಚಿತ್ರ. ಇಡೀ ಚಿತ್ರತಂಡಕ್ಕೆ ಒಳ್ಳೆದಾಗಲಿ. ಆಲ್ ದಿ ಬೆಸ್ಟ್ ತರುಣ್ ಎಂದು ವಿಶ್ ಮಾಡಿದ್ದಾರೆ.
"ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು" ಸಿನಿಮಾಗೂ ಕೂಡ ನಟ ಶಿವರಾಜ್ ಕುಮಾರ್ ಶುಭಹಾರೈಸಿದ್ದಾರೆ. ಒಳ್ಳೇ ಸಿನಿಮಾ ಬಂದಾಗ ಹಬ್ಬ ಬಂದಂತೆ. ಅಂಥಹ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಂದಿದೆ. ತುಂಬಾ ಒಳ್ಳೇ ಮಾತು ಕೇಳಿಬರುತ್ತಿದೆ. ನಾನು ಬೆಂಗಳೂರಲ್ಲಿ ಇದ್ದಿದ್ರೆ ಖಂಡಿತ ಈ ಸಿನಿಮಾ ನೋಡ್ತಿದ್ದೆ. ನೀವೆಲ್ಲರೂ ಮಿಸ್ ಮಾಡ್ದೇ ನೋಡಿ. "ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು" ಚಿತ್ರತಂಡಕ್ಕೆ ಅಭಿನಂದನೆಗಳು, ಒಳ್ಳೇದಾಗ್ಲಿ ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಸದ್ಯ ಅಮೇರಿಕಾದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಸರ್ಜರಿ ಯಶಸ್ವಿಯಾದ ಹಿನ್ನೆಲೆ ಅವರಿಗೆ ಒಂದು ತಿಂಗಳಮಟ್ಟಿಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಸರ್ಜರಿ ಬಳಿಕ ಶಿವಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇತ್ತೀಚೆಗೆ ಅವರು ಅಮೇರಿಕಾದ ಬೀಚ್‌ಗೆ ತೆರಳಿ ಜಾಲಿಯಾಗಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು.
ಶಿವಣ್ಣ ಪತ್ನಿ ಗೀತಾ, ಪುತ್ರಿ ಹಾಗೂ ಆಪ್ತರು ಬೀಚ್‌ಗೆ ತೆರಳಿ ಚಿಲ್ ಮಾಡಿದ್ದರು. ಇದೇ ವೇಳೆ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದ್ದು ಇದರಲ್ಲಿ ಗೀತಕ್ಕ ಶಿವಣ್ಣ ಕ್ಯೂಟ್ ಫೋಟೋಗಳನ್ನು ತಮ್ಮ ಫೋನ್‌ನಲ್ಲಿ ಕ್ಲಿಕ್ಕಿಸುತ್ತಿದ್ದರು. ಇದಕ್ಕೆ ಶಿವಣ್ಣ ಸ್ಟೈಲಾಗಿ ನಿಂತು ಪೋಸ್ ಕೊಟ್ಟಿದ್ದರು. ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಶಿವರಾಜ್ ಕುಮಾರ್ ಅವರಿಗೆ ಇತ್ತೀಚೆಗೆ ಸರ್ಜರಿ ನಡೆದಿತ್ತು.

ಬಳಿಕ ಅವರಿಗೆ ಎರಡು ಬಾರಿ ಮೆಡಿಕಲ್ ಚೆಕಪ್ ಕೂಡ ಇತ್ತು. ಈ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು ಶಿವಣ್ಣ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವಿಡಿಯೋ ಮೂಲಕ ಖುದ್ದಾಗಿ ಶಿವಣ್ಣ ಸ್ಪಷ್ಟಪಡಿಸಿದ್ದರು. ಸದ್ಯ ಈ ತಿಂಗಳ ಕೊನೆಯ ವಾರದವರೆಗೂ ಶಿವಣ್ಣ ಅಮೇರಿಕಾದಲ್ಲೇ ವಿಶ್ರಾಂತಿ ಪಡೆಯಲಿದ್ದು, ಜನವರಿ 26ರಂದು ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications