Actor Shivarajkumar: ದೆಹಲಿ ಪಾರ್ಲಿಮೆಂಟ್‌ಗೆ ನಟ ಶಿವರಾಜ್‌ಕುಮಾರ್!
Actor Shivarajkumar: ನಟ ಶಿವರಾಜ್‌ಕುಮಾರ್ ಕ್ಯಾನ್ಸರ್ ಮುಕ್ತರಾಗಿ ಆಮೆರಿಕಾದಿಂದ ತಾಯ್ನಾಡು ಭಾರತಕ್ಕೆ ಮರಳಿದ್ದಾರೆ. ಇದೀಗ ಅವರು ದೆಹಲಿ ಪಾರ್ಲಿಮೆಂಟ್ ಮೆಟ್ಟಿಲು ಏರಲಿದ್ದಾರೆ. ಹಾಗಾದ್ರೆ ಇದರ ಹಿಂದಿನ ಅಸಲು ಸತ್ಯವೇನು ಹಾಗೂ ಅವರು ಅಲ್ಲಿಗೆ ಹೋಗಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹೌದು.. ನಟ ಶಿವಮಾರ್ ಕುಮಾರ್ ದೆಹಲಿ ಪಾರ್ಲಿಮೆಂಟ್‌ಗೆ ಎಂಟ್ರಿ ಕೊಡಲಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಅಲ್ಲ. ಬದಲಾಗಿ ಸಿನಿಮಾವೊಂದರ ಶೂಟಿಂಗ್ ದೆಹಲಿ ಸಂಸತ್‌ನಲ್ಲಿ ನಡೆಯಲಿದೆ. ಆದ್ದರಿಂದ ಅವರು ಪಾರ್ಲಿಮೆಂಟ್‌ಗೆ ತೆರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶಿವರಾಜ್‌ಕುಮಾರ್ ಅವರು ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದು, ಇದೀಗ ರಾಮ್‌ಚರಣ್ ಜೊತೆಗಿನ RC16 ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ದೆಹಲಿ ಸಂಸತ್‌ನಲ್ಲಿ ಈ ಸಿನಿಮಾನದ ಶೂಟಿಂಗ್ ನಡೆಯಲಿದ್ದು, ಶೂಟಿಂಗ್‌ಗಾಗಿ ದೆಹಲಿಗೆ ತೆರಳಲಿದ್ದಾರೆ. ಅಲ್ಲದೆ, ಜಮಾ ಮಸೀದಿಯಲ್ಲಿಯೂ ಶೂಟಿಂಗ್ ನಡೆಯಲಿದೆ. ಪವನ್ ಕಲ್ಯಾಣ್ ಅವರ ಮಧ್ಯಸ್ಥಿಕೆ ವಹಿಸಿದ ಕಾರಣ ಸಂಸತ್‌ನಲ್ಲಿ ಸಿನಿಮಾನ ಶೂಟಿಂಗ್‌ಗೆ ಅನುಮತಿ ಪಡೆಯುವ ಪ್ರಯತ್ನ ನಡೆಯುತ್ತಿದೆ.
ನಟ ಶಿವರಾಜ್‌ಕುಮಾರ್ ಅವರು ಇತ್ತೀಚೆಗಷ್ಟೇ ಕ್ಯಾನ್ಸರ್ ಮುಕ್ತರಾಗಿ ಅಮೆರಿಕಾದಿಂದ ತಾಯ್ನಾಡು ಭಾರತಕ್ಕೆ ಮರಳಿದ್ದಾರೆ. ಚಿಕಿತ್ಸೆಗಾಗಿ ಒಂದು ತಿಂಗಳುಗಳ ಕಾಲ ಅವರು ಅಮೆರಿಕದಲ್ಲಿದ್ದರು. ಬಳಿಕ ಭಾರತಕ್ಕೆ ಮರಳಿದ್ದು, ಶೀಘ್ರದಲ್ಲೇ ಸಿನಿಮಾ ಕೆಲಸಗಳಲ್ ಕಾರ್ಯನಿರತರಾಗಲಿದ್ದಾರೆ. ಈ ನಡುವೆಯೇ ಅವರು ದೆಹಲಿ ಪಾರ್ಲಿಮೆಂಟ್ ಏರುವ ಸುದ್ದಿಯೊಂದು ಹೊರಬಿದ್ದಿದೆ. ಹಾಗಂತ ಅವರು ಅವರು ಚುನಾವಣೆಗೆ ಸ್ಪರ್ಧಿಸಿ ಸಂಸದರಾಗುತ್ತಿಲ್ಲ. ಅವರು ದೆಹಲಿ ಪಾರ್ಲಿಮೆಂಟ್ ಏರುತ್ತಿರುವುದು ಸಿನಿಮಾ ಶೂಟಿಂಗ್‌ಗಾಗಿ ಅಷ್ಟೇ.
ಬುಚಿ ಬಾಬು ನಿರ್ದೇಶನದ RC16 ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಹಾಗೂ ರಾಮ್‌ಚರಣ್ ನಟಿಸುತ್ತಿದ್ದು, ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದ ಕೆಲ ಭಾಗದ ಶೂಟಿಂಗ್ ಈಗಾಗಲೇ ಮುಗಿದಿದೆ. ಉಳಿದ ಭಾಗದ ಶೂಟಿಂಗ್ ನಡೆಯಬೇಕಿದೆ. ಆದ್ದರಿಂದ ನಟ ಶಿವರಾಜ್‌ಕುಮಾರ್ ಅವರು ಈ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ರಾಮ್ ಚರಣ್ ಕುಟುಂಬದ ಪವನ್ ಕಲ್ಯಾಣ್ ಅವರು ಎನ್‌ಡಿಎ ಜೊತೆ ಕೈ ಜೋಡಿಸಿದ್ದರಿಂದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ಈ ಬಗ್ಗೆ ಮನವಿ ಮಾಡಿದರೆ ಕೆಲಸ ಸುಲಭ ಆಗಲಿದೆ. ಬಳಿಕ ಅಂದುಕೊಂಡಂತೆಯೇ ಸಂಸತ್‌ಬಕ್ಲು ಶೂಟ್ ಮಾಡಬಹುದು. ಒಂದು ವೇಳೆ ಇದಕ್ಕೆ ಒಪ್ಪಿಗೆ ಸಿಗದಿದ್ದರೆ. ಇದೇ ಮಾದರಿಯ ಸೆಟ್ ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಬೇಕಾಗಬಹುದು.
ರಂಜಾನ್ ಮುಗಿದ ಬಳಿಕ ದೆಹಲಿಯ ಜಾಮಾ ಮಸೀದಿಯಲ್ಲೂ ಶೂಟ್ ಮಾಡಲು ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ದರಿಂದ ಹಲವು ದಿನ ಚಿತ್ರ ತಂಡ ದೆಹಲಿಯಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ಮುಂದುವರೆದಿದೆ. ಈ ಚಿತ್ರದ ಮೂಲಕ ರಾಮ್ ಚರಣ್ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಕರುನಾಡ ಚಕ್ರವರ್ತಿ ನಟ ಶಿವಣ್ಣ ಮತ್ತೆ ಶೂಟಿಂಗ್‌ನಲ್ಲಿ ಭಾಗವಹಿಸುವುದೇ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.
ಕ್ಯಾನ್ಸರ್ ಸಮಸ್ಯೆಯಿಂದ ಮುಕ್ತಾಗಿ ನಟ ಶಿವಣ್ಣ ಅವರು ಇತ್ತೀಚೆಗಷ್ಟೇ ಅಮೆರಿಕಾದಿಂದ ತಾಯ್ನಾಡು ಭಾರತಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕವೇ ಅವರು ಮತ್ತೆ ಸಿನಿಮಾನ ಶೂಟಿಂಗ್ಗಳಲ್ಲಿ ಕಾಣಿಸಕೊಳ್ಳಲಿದ್ದೇನೆ. ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಅವರಿಗೆ ಸೆಂಚ್ಯೂರಿ ಸ್ಟಾರ್ ಶಿವಣ್ಣ ಅಂತಲೇ ಹೆಸರಿದೆ. ಅವರನ್ನು ನೋಡುತ್ತಿದ್ದರೆ ಇನ್ನೂ ಅಷ್ಟೊಂದು ವಯಸ್ಸೇ ಆಗಿಲ್ಲ ಅನಿಸುತ್ತದೆ. ಯಾಕಂದ್ರೆ ಅವರು ಯಾವಾಗ್ಲೂ ಒಂದಲ್ಲ ಒಂದು ಸಿನಿಮಾ ಕೆಸಲಗಳಲ್ಲಿ ಕಾರ್ಯನಿರತರಾಗಿ ಉತ್ಸುಕತೆಯ ಮಾತುಗಳನ್ನು ಹೇಳುವ ಮೂಲಕ ಮಾದರಿಯಾಗಿದ್ದಾರೆ.












Click it and Unblock the Notifications