Shivarajkumar: ಶಿವಮೊಗ್ಗದಿಂದ ಕಣಕ್ಕಿಳೀತಾರಾ ಗೀತಾ ಶಿವರಾಜ್‌ಕುಮಾರ್? ಶಿವಣ್ಣ ಆಸೆ ವ್ಯಕ್ತಪಡಿಸಿದ್ದು ಹೀಗೆ!
ಬೆಂಗಳೂರು, ಮಾರ್ಚ್ 03: ನಟ ಶಿವರಾಜ್ ಕುಮಾರ್ ರಾಜಕೀಯದಿಂದ ದೂರವೇ ಉಳಿದವರು. ಕಾಂಗ್ರೆಸ್ ಪಕ್ಷದ ಪರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಹಿರಂಗವಾಗಿ ಟಿಕೆಟ್ ನೀಡುವುದಾಗಿ ಘೋಷಿಸಿದರೂ ಕೂಡ ಅದನ್ನು ನಯವಾಗಿಯೇ ನಿರಾಕರಿಸಿದವರು ಶಿವಣ್ಣ. ಆದರೆ, ಅವರ ಪತ್ನಿ ಗೀತಾ ಪಕ್ಕಾ ರಾಜಕಾರಣಿ ಕುಟುಂಬದಿಂದ ಬಂದವರು.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಈ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಮಗಳು. ರಕ್ತದಲ್ಲೇ ರಾಜಕಾರಣವಿಟ್ಟುಕೊಂಡು ಬಂದ ಅವರು ಈಗಲೂ ದೊಡ್ಮನೆಯ ಏಕೈಕ ರಾಜಕಾರಣಿ. ಜೆಡಿಎಸ್ ಪಕ್ಷದಲ್ಲಿದ್ದ ಅವರು ಈಗ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇನ್ನೇನು ಲೋಕಸಭ ಚುನಾವಣೆ ಹತ್ತಿರ ಬರುತ್ತಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಂಭವವಿದೆ. ಇದಕ್ಕೆ ಶಿವಣ್ಣ ಕೂಡ ಸುಳಿವು ನೀಡಿದ್ದಾರೆ.

ಪತ್ನಿ ಬಗ್ಗೆ ನಟ ಶಿವಣ್ಣ ಆಸೆಯೇನು?
ನಟ ಶಿವರಾಜ್‌ಕುಮಾರ್ ತಾವು ರಾಜಕಾರಣಕ್ಕೆ ಬರದಿದ್ದರೂ ಕೂಡ ತಮ್ಮ ಪತ್ನಿಯನ್ನು ರಾಜಕೀಯವಾಗಿ ಬೆಳೆಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್ನಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಅವರ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ಕೂಡ ಮಾಡಿದ್ದರು. ಆದರೆ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದರು. ಈಗ ಕಾಂಗ್ರೆಸ್ ಪಕ್ಷ ಸೇರಿರುವ ಅವರು ಮತ್ತೆ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ.
ಇದೇ ಸಮಯದಲ್ಲಿ ಶಿವಮೊಗ್ಗದಲ್ಲಿ ಮಾತನಾಡಿರುವ ಶಿವಣ್ಣ, ತನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಆದರೆ, ಗೀತಾ ರಾಜಕೀಯದ ಕುಟುಂಬದಿಂದಲೇ ಬಂದವರು. ಅವರಿಗೆ ರಕ್ತದಲ್ಲಿಯೇ ಇದೆ. ಅವರು ರಾಜಕೀಯವಾಗಿ ಬೆಳೆಯಬೇಕು. ಪತ್ನಿ ಸಂಸದೆ ಆಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಿಂದ ಸ್ಪರ್ಧಿಸ್ತಾರಾ ಗೀತಾ ಶಿವರಾಜ್‌ಕುಮಾರ್?
ಗೀತಾ ಶಿವರಾಜ್‌ಕುಮಾರ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ಪಕ್ಕ ಆಗಿದೆ. ಶಿವರಾಜ್‌ಕುಮಾರ್ ರಾಜಕೀಯಕ್ಕೆ ಬರದ ಕಾರಣ, ದೊಡ್ಮನೆ ಕುಟುಂಬದಿಂದ ಒಬ್ಬರನ್ನು ಚುನಾವಣೆಗ ಇಳಿಸಲು ಚಿಂತಿಸುತ್ತಿದ್ದು, ಎಸ್ ಬಂಗಾರಪ್ಪ ಅವರ ಹಿಡಿತವಿದ್ದ ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್ ಅವರನ್ನು ಕಣಕ್ಕೆ ಇಳಿಸಲಾಗುವುದು ಎಂದು ವರದಿಗಳಿವೆ.

ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗೆದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಉಹಾಪೋಹಗಳ ನಡುವೆಯೇ, 'ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದು ಶಿವಣ್ಣ ತಿಳಿಸಿದ್ದಾರೆ. ಹೀಗಾಗಿ ಶಿವಮೊಗ್ಗದಿಂದ ದೊಡ್ಮನೆ ಸಿಸೆ ಕನ್ಖಕ್ಕೆ ಇಳಿಯುವುದು ಪಕ್ಕಾ ಎನ್ನಲಾಗುತ್ತಿದೆ.
ಇನ್ನು, ಗೀತಾ ಶಿವರಾಜ್ ಕುಮಾರ್ ಕೂಡ ತಮಗೆ ತಮ್ಮ ಪಕ್ಷ, ಪತಿ ಶಿವರಾಜ್‌ಕುಮಾರ್ ಹಾಗೂ ಸಹೋದರ ಮಧು ಬಂಗಾರಪ್ಪ ಹೇಳಿದರೇ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತ ನಂತರ ಶಿವಮೊಗ್ಗ ಜಿಲ್ಲೆಗೆ ಅನೇಕ ಬಾರಿ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications