ಸುದೀಪ್‌ ಜೊತೆ ವೈರತ್ವ, ಮನಸ್ತಾಪ: ಕೊನೆಗೂ ಮೌನ ಮುರಿದ ಶಿವಣ್ಣ

ಸ್ಯಾಂಡಲ್‌ವುಡ್‌ ನಟರಾದ ಕಿಚ್ಚ ಸುದೀಪ್‌ ಹಾಗೂ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಒಬ್ಬರೂ ಪರಸ್ಪರ ಒಡನಾಟ ಹೊಂದಿದ್ದಾರೆ. ತೆರೆಯಲ್ಲಿ ಒಟ್ಟಿಗೆ ನಟಿಸಿರುವ ಜೊತೆಗೆ ತೆರೆಯ ಹಿಂದೆಯೂ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಆದರೆ, ಕೆಲವು ದಿನಗಳ ಹಿಂದೆ ಸುದೀಪ್‌ ಹಾಗೂ ಶಿವಣ್ಣ ನಡುವೆ ಮನಸ್ತಾಪ, ವೈರತ್ವ ಇತ್ತು ಎನ್ನುವ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಈ ವಿಚಾರವಾಗಿಯೂ ಅವರ ಅಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಕಿತ್ತಾಡಿಕೊಂಡಿದ್ದರು. ಆದರೆ, ಯಾವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಇತ್ತು ಎಂದು ರಿವೀಲ್‌ ಆಗಿರಲಿಲ್ಲ. ಈ ಬಗ್ಗೆ ನಟ ಶಿವರಾಜ್‌ಕುಮಾರ್‌ ಮೌನ ಮುರಿದಿದ್ದಾರೆ. ಕಿಚ್ಚ ಸುದೀಪ್‌ ಜೊತೆಗಿನ ಮನಸ್ತಾಪದ ಬಗ್ಗೆ ಅವರು ಶಾಕಿಂಗ್‌ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಕನ್ನಡದ ಟಿವಿ9 ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿರುವ ಶಿವಣ್ಣ, ಸುದೀಪ್‌ ಅವರು ನನಗೆ ಒಂದು ಸಿನಿಮಾ ಡೈರೆಕ್ಟ್‌ ಮಾಡಬೇಕು ಎಂದು ತುಂಬಾ ದಿನಗಳಿಂದ ಹೇಳ್ತಿದ್ರು. ಆದ್ರೆ ಕೊನೆಗೂ ಅದು ಟೇಕಾಫ್‌ ಆಗಲೇ ಇಲ್ಲ. ಆ ಬಳಿಕ ನಾನು ಸುದೀಪ್‌ ಸೇರಿ ವಿಲನ್‌ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ. ಮೊದಲಿಗೆ ನಾವಿಬ್ಬರೂ ಒಂದು ಸಿನಿಮಾ ಮಾಡಬೇಕು ಅನ್ನೋದು ಇತ್ತು ಎಂದು ಶಿವರಾಜ್‌ಕುಮಾರ್‌ ಹೇಳಿದ್ದಾರೆ. ನಾವಿಬ್ಬರೂ ಭೇಟಿಯಾದಾಗ ತುಂಬಾ ಚೆನ್ನಾಗಿಯೇ ಮಾತನಾಡುತ್ತೇವೆ. ನಮ್ಮಿಬ್ಬರ ನಡುವೆ ಆ ಒಡನಾಟ ಈಗಲೂ ಇದೆ ಎಂದಿದ್ದಾರೆ.

Actor Shivarajkumar Has Clarified His Disagreement With Kiccha Sudeep

ಸುದೀಪ್‌ ಅವರಿಗೆ ಮೊದಲಿನಿಂದಲೂ ನಮ್ಮ ಮೇಲೆ ಒಂದು ರೀತಿಯ ಪ್ರೀತಿ ಇದೆ. ನನ್ನ ಪತ್ನಿ ಗೀತಾ ಅವರನ್ನ ಕಂಡರೆ, ಸುದೀಪ್‌ಗೆ ಬಹಳ ಅಭಿಮಾನ. ಅದೇ ರೀತಿ ನನ್ನ ಮೇಲೂ ಅದೇ ಪ್ರೀತಿ ತೋರುತ್ತಾರೆ. ಆದರೆ, ಒಂದು ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ನಡೆದೇ ನಡೆಯುತ್ತೆ. ಅದೆಲ್ಲ ಬಂದು ಹೋಗುತ್ತೆ. ಅದೇ ವಿಚಾರವನ್ನ ಇಟ್ಟುಕೊಂಡು ವೈರತ್ವ ಬೆಳೆಸುವುದೇನಿಲ್ಲ. ಸುದೀಪ್‌ ಕೂಡ ಆ ರೀತಿ ಇಲ್ಲ ಎಂದು ಶಿವಣ್ಣ ಸ್ಪಷ್ಟನೆ ನೀಡಿದ್ದಾರೆ.

ನಾನು ಕ್ಯಾನ್ಸರ್‌ ಆಪರೇಷನ್‌ಗೆ ಹೋಗುವ ಮುನ್ನ ನನ್ನ ನೋಡಲು ಬಂದಾಗಲೂ ಸುದೀಪ್‌ ತುಂಬಾ ಎಮೋಷನಲ್‌ ಆಗಿದ್ದರು. ಆ ಮೇಲೆ ನೀವು ಮತ್ತೆ ಬರ್ತೀರಿ ಶಿವಣ್ಣ ಎಂದು ನನಗೆ ಧೈರ್ಯ ತುಂಬಿ ಕಳಿಸಿದ್ರು. ನಮ್ಮ ಒಡನಾಟ ಹಾಗೆಯೇ ಇದೆ. ನಮ್ಮ ಮನೆಗೆ ಸುದೀಪ್‌ ಬಂದು ಭೇಟಿಯಾಗುತ್ತಿರುತ್ತಾರೆ. ಅವರು ಮನೆಗೆ ಬಂದಾಗಲೂ ನಮ್ಮಿಬ್ಬರ ನಡುವೆ ಬಾಂಧವ್ಯ ಚೆನ್ನಾಗಿಯೇ ಇದೆ. ನಾನು ಸುದೀಪ್‌ ಕರ್ನಾಟಕ ಚಲನಚಿತ್ರ ಕಪ್‌ (ಕೆಸಿಸಿ) ಮಾಡಿದ್ದಿ, ಅದಂತೂ ಬಹಳ ಅದ್ಭುತವಾಗಿತ್ತು. ಅದನ್ನು ಇಬ್ಬರೂ ತುಂಬಾ ಎಂಜಾಯ್‌ ಮಾಡಿದೆವು ಎಂದು ಶಿವಣ್ಣ ಸುದೀಪ್‌ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

Actor Shivarajkumar Has Clarified His Disagreement With Kiccha Sudeep

ಶಿವಣ್ಣ ಹಾಗೂ ಸುದೀಪ್‌ ಅವರು ವಿಲನ್‌ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ರು. ಬಳಿಕ ಈ ಸಿನಿಮಾದಲ್ಲಿನ ಕೆಲ ದೃಶ್ಯಗಳು, ಫೈಟಿಂಗ್‌ ವಿಚಾರವಾಗಿಯೂ ಕಿಚ್ಚ ಹಾಗೂ ಶಿವಣ್ಣನ ಅಭಿಮಾನಿಗಳ ನಡುವೆ ಬಿರುಕು ಮೂಡಿತ್ತು. ಹಲವು ವರ್ಷಗಳ ಹಿಂದೆ ಕ್ರಿಕೆಟ್‌ ಮ್ಯಾಚ್‌ ಆಡುವಾಗಲೂ ಸುದೀಪ್‌ ತಂಡ ಹಾಗೂ ಶಿವಣ್ಣನ ತಂಡದ ನಡುವೆ ಕಿರಿಕ್‌ ಆಗಿತ್ತು ಎನ್ನಲಾದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಲೇ ಇದೆ. ಏನೇ ಆದರೂ ಒಬ್ಬರೂ ನಟರು ಪರಸ್ಪರ ಒಡನಾಟದಿಂದಲೇ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+