Shivarajkumar: 'ಕಿಂಗ್ ಇಸ್ ಬ್ಯಾಕ್'; ನನಗೂ ಆ ಭಯ ಇತ್ತು: ಕರುನಾಡಿಗೆ ಮರಳಿದ ಮೇಲೆ ಶಿವಣ್ಣ ಮೊದಲ ಮಾತು

ಬೆಂಗಳೂರು, ಜನವರಿ 26: ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಕ್ಯಾನ್ಸರ್ ಚಿಕಿತ್ಸೆ ಪಡೆದು ಅಮೆರಿಕದಿಂದ ಸರ್ಜರಿ ಮಾಡಿಸಿಕೊಂಡು ಕರುನಾಡಿಗೆ ಮರಳಿದ್ದಾರೆ. ಪತ್ನಿ, ಮಗಳ ಜೊತೆ ಬೆಂಗಳೂರಿಗೆ ಬಂದಿಳಿದ ಶಿವಣ್ಣನಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಇದೀಗ ನಟ ಶಿವರಾಜ್ ಕುಮಾರ್ ಅವರು ಅಮೆರಿಕಾದಿಂದ ಕರ್ನಾಟಕಕ್ಕೆ ಬಂದ ಬಳಿಕ ಮೊದಲ ಬಾರಿಗೆ ಕರುನಾಡ ಜನತೆ ಕುರಿತು ಮಾತನಾಡಿದ್ದಾರೆ.

ನಟ ಶಿವರಾಜ್ ಕುಮಾರ್ ತಮ್ಮ ನಿವಾಸನದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಚಿಕಿತ್ಸೆಗೆ ಹೋಗಬೇಕಾದರೆ ನಾನು ಎಮೋಷನಲ್ ಆಗಿದ್ದೆ ಏನೇ ಆದರೂ ಜೀವನದಲ್ಲಿ ಫೇಸ್ ಮಾಡಬೇಕು. ನನಗೆ ನಮ್ಮ ಮನೆಯಲ್ಲಿ ಎಲ್ಲರ ಸಪೋರ್ಟ್ ಇತ್ತು. ಮೊದಲು ಭಯ ಆಯಿತು ಅಲ್ಲಿಗೆ ಹೋದ ಮೇಲೆ ಧೈರ್ಯ ಬಂತು. ಈಗ ನಾನು ತುಂಬಾ ಸ್ಟ್ರಾಂಗ್ ಆಗಿದ್ದೇನೆ. ಕಿಂಗ್ ಇಸ್ ಬ್ಯಾಕ್ ಎಂದು ನಟ ಶಿವಣ್ಣ ಹೇಳಿದ್ದಾರೆ.

Actor Shiva Rajkumar talks to media coming back to Bengaluru

ಜೀವನವೇ ಒಂದು ಪಾಠ. ತುಂಬಾ ಜನರು ನನಗೆ ಧೈರ್ಯ ತುಂಬಿದರು. ನಿಮ್ಮ ಧೈರ್ಯ ಮೆಚ್ಚಬೇಕು ಅಂತ ವೈದ್ಯರು ಹೇಳಿದ್ದರು. ಎರಡು ಮೂರು ದಿನಗಳ ಕಾಲ ಲಿಕ್ವಿಡ್ ಫುಡ್ ನಲ್ಲಿ ಇದ್ದೆ. ಜೀವನದಲ್ಲಿ ಇದೆಲ್ಲಾ ತಾನಾಗಿ ಬರುತ್ತದೆ ಆದರೆ ಎಲ್ಲವನ್ನು ಎದುರಿಸಬೇಕು ನಾನು ಎಲ್ಲವನ್ನು ಧೈರ್ಯವಾಗಿ ಎದುರಿಸಿದೆ. ಮುಂದಿನ ಪ್ರಾಜೆಕ್ಟ್ ಕುರಿತು ತಯಾರಿ ಮಾಡುತ್ತೇನೆ. 131ನೇ ಸಿನಿಮಾ ಬಗ್ಗೆ ನಾನು ಪ್ಲಾನ್ ಮಾಡುತ್ತೇನೆ. ರಾಮ್ ಚರಣ್ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.

ಮುಂಚೆ ನಂಗೆ ಭಯವಿತ್ತು. ನಾನು Blessed ಅನಿಸ್ತಿದೆ. ಫ್ಲೈಟ್ ಟ್ರಾವೆಲ್ ನಲ್ಲೆ ಭಯ ಇತ್ತು. ಅಲ್ಲಿ ಹೋದ ಮೇಲೆ ಕಾನ್ಫಿಡೆನ್ಸ್ ಬಂತು. 6 ಗಂಟೆ ಮನೆಯವರಿಗೂ ಟೆನ್ಶನ್ ಇತ್ತು. ಆಪರೇಷನ್ ಬಳಿಕ ಟೈಮ್ ತೆಗೊಂಡು ವಾಕಿಂಗ್ ಶುರು ಮಾಡಿದೆ. ಹೆಣ್ಣುಮಕ್ಕಳಿಗೆ ತುಂಬಾ ಕಷ್ಟ ಈ ಸಮಯದಲ್ಲಿ ಎಂದು ನಟ ಶಿವರಾಜ್‌ ಕುಮಾರ್‌ ಅವರು ಹೇಳಿದರು.

ಆಸ್ಪತ್ರೆಯಲ್ಲಿ ಎಲ್ಲ ಸರ್ಜರಿ ಮುಗಿದ ಮೇಲೆ 3-4 ದಿನಗಳ ನಂತರ ವರದಿ ಬಂತು. ಅದರಲ್ಲಿ ಕ್ಯಾನ್ಸರ್​ ಫ್ರೀ ಅಂತ ವರದಿ ಬಂದಿದ್ದರಿಂದ ಹೆಚ್ಚು ಖುಷಿ ಆಗಿತ್ತು. ಆರು ಸರ್ಜರಿಗಳನ್ನು ಒಟ್ಟಿಗೆ ಮಾಡಿದ್ದಾರೆ. 190 ಸ್ಟಿಚ್ ಹಾಕಿರುವುದು ನನಗೆ ಗೊತ್ತಿಲ್ಲ. ಆಸ್ಪತ್ರೆಯಲ್ಲಿ ಅದೆಲ್ಲಾ ಕೇಳುವ ಪರಿಸ್ಥಿತಿ ಇರಲಿಲ್ಲ. ಡಾಕ್ಟರ್ ಈ ಬಗ್ಗೆ ಯಾವುದನ್ನ ನಮ್ಮ ಬಳಿ ಹೇಳಲ್ಲ. ಎರಡನೇ ದಿನದಿಂದ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ, ಅಭಿಮಾನಿಗಳಷ್ಟೇ ಅಲ್ಲ. ಇಂಡಸ್ಟ್ರೀಯವರು ಧೈರ್ಯ ತುಂಬಿದರು ಎಂದು ಶಿವಣ್ಣ ಭಾವುಕರಾಗಿದ್ದಾರೆ.

ಇನ್ನೂ ಗೀತಾ ಅವರ ಬಗ್ಗೆ ಮಾತಾಡೋಕೆ ಒಂದೆರಡು ಗಂಟೆ ಸಾಕಾಗಲ್ಲ. ಗೀತಾ ಅವರು ಹೆಂಡತಿನೂ, ತಾಯಿನೂ ಹೌದು. ತಂಗಿಯಾಗಿ, ಅಕ್ಕ ಆಗಿ ಎಲ್ಲ ತರದಲ್ಲಿ ಜೊತೆಯಾಗಿ ಇದ್ದರು. ಇದರ ಜೊತೆಗೆ ಮಗಳು ನಿವೇದಿತಾ ಕೂಡ ತಾಯಿಗಿಂತ ಹೆಚ್ಚು ನೋಡಿಕೊಂಡಳು. ಅನು ಅಂತಾ ನಿವೇದಿತಾ ಗೆಳತಿ ಒಂದು ತಿಂಗಳು ನಮ್ಮ ಜೊತೆನೇ ಇದ್ದರು ಎಂದು ಶಿವರಾಜ್‌ ಕುಮಾರ್‌ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+