Puneeth Rajkumar: ಆ ಸಿನಿಮಾ ಮಾಡಿದ್ದಕ್ಕೆ ಪುನೀತ್‌ಗೆ ಬಂದಿದ್ದವು ಬೆದರಿಕೆ ಕರೆಗಳು
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡಿಗರಿಂದ ದೈಹಿಕವಾಗಿ ದೂರವಾಗಿ 3 ವರ್ಷ ಕಳೆದುಹೋಗಿದೆ. ಅವರು ದೈಹಿಕವಾಗಿ ದೂರವಾಗಿದ್ದರು ಅವರು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿರುತ್ತಾರೆ. ಚಿತ್ರರಂಗದಲ್ಲಿ ಪುನೀತ್ ವಿವಾದಗಳಿಂದ ಸದಾ ದೂರವಿದ್ದವರು. ಅವರಾಯಿತು ಅವರ ಕೆಲಸವಾಯಿತು ಅಂದಿದ್ದವರು, ಆದರೂ ಅವರಿಗೆ ಅದೊಂದು ಸಿನಿಮಾ ಮಾಡಿದ್ದಕ್ಕೆ ಬೆದರಿಕೆ ಕರೆಗಳು ಬಂದಿದ್ದವು ಎನ್ನುವ ವಿಚಾರ ಈಗ ಹೊರಬಂದಿದೆ.
'ಪೃಥ್ವಿ' ಸಿನಿಮಾ ಪುನೀತ್ ರಾಜ್‌ಕುಮಾರ್ ಸಿನಿ ಬದುಕಿನ ಮುಖ್ಯ ಸಿನಿಮಾಗಳಲ್ಲಿ ಒಂದು, ಕಮರ್ಷಿಯಲ್ ಅಂಶಗಳನ್ನು ಪಕ್ಕಕ್ಕಿಟ್ಟು, ಗಟ್ಟಿ ಕಥೆಯ ಸಿನಿಮಾದಲ್ಲಿ ಪುನೀತ್ ಅಭಿನಯಿಸಿದ್ದರು. ಜಿಲ್ಲಾಧಿಕಾರಿ ಪಾತ್ರದಲ್ಲಿ ಮಿಂಚಿದ್ದ ಅವರು ಅನೇಕರಿಗೆ ಐಎಎಸ್ ಮಾಡಲು ಸ್ಪೂರ್ತಿಯಾಗಿದ್ದರು.

ಪೃಥ್ವಿ ಸಿನಿಮಾ ಮಾಡಿದ್ದಕ್ಕೆ ಬೆದರಿಕೆ
ಬಳ್ಳಾರಿ ಅಕ್ರಮ ಗಣಿಗಾರಿಕೆ ಬಗ್ಗೆ ನಿರ್ದೇಶಕ ಜೇಕಬ್ ವರ್ಗೀಸ್ ಸಿನಿಮಾ ಮಾಡಲು ಮುಂದಾಗಿದ್ದು, ಸಿನಿಮಾ ಕಥೆ ಕೇಳಿದ್ದ ಅಪ್ಪು ಕೂಡ ಓಕೆ ಅಂದಿದ್ದರು. ಆದರೆ ಸಿನಿಮಾ ಮಾಡಲು ಎಷ್ಟೆಲ್ಲಾ ಕಷ್ಟವಾಯಿತು, ಏನೆಲ್ಲಾ ತೊಂದರೆ ಕೊಟ್ಟಿದ್ದರು ಎನ್ನುವುದನ್ನು ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕೆ.ಎಸ್. ನಂದೀಶ್ ಬಿಚ್ಚಿಟ್ಟಿದ್ದಾರೆ.
ಬಳ್ಳಾರಿ ಗಣಿಗಾರಿಕೆ ಬಗ್ಗೆ ನೈಜ ಕಥೆ ಆಧಾರಿತ ಸಿನಿಮಾ ಮಾಡಲು ಹೋದಾಗ ಚಿತ್ರತಂಡಕ್ಕೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರೇ ಚಿತ್ರತಂಡದ ಬೆನ್ನಿಗೆ ನಿಂತಿದ್ದರು, ಬೇರೆ ಯಾವ ಹೀರೋ ಆಗಿದ್ದರು ಸಿನಿಮಾವನ್ನು ಅಂದುಕೊಂಡಂತೆ ತೆರೆಗೆ ತರಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೆ.ಎಸ್. ನಂದೀಶ್ ಹೇಳಿದ್ದಾರೆ.
ನಂದೀಶ್ 'ರುದ್ರ ಗರುಡ ಪುರಾಣ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಈ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಗೆ ಮುನ್ನ ಕನ್ನಡ ಪಿಕ್ಚರ್ ಎನ್ನುವ ಯೂಟೂಬ್ ಚಾನೆಲ್‌ಗೆ ನೀಡಿದ ಸಂದರ್ಶನಲ್ಲಿ ಪೃಥ್ವಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪೃಥ್ವಿ ಸಿನಿಮಾದ ಕಥೆ ಬರೆಯಲು ಆರಂಭಿಸಿದಾಗಿನಿಂದಲೂ ನಾನು ನಿರ್ದೇಶಕ ಜೇಕಬ್ ವರ್ಗೀಸ್ ಅವರ ಜೊತೆಯಲ್ಲಿದ್ದೆ, ಆ ಸಿನಿಮಾವನ್ನು ಪುನೀತ್ ಬಿಟ್ಟು ಯಾರಿಗೂ ಮಾಡಲು ಆಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಮೈನಿಂಗ್ ಮಾಫಿಯಾ ಬಲಿಷ್ಠವಾಗಿದ್ದ ಕಾಲ ಅದು. ನಾವು ಬಳ್ಳಾರಿಗೆ ಲೊಕೇಷನ್ ಫೋಟೊ ತೆಗೆದರೂ ಕೆಲವರು ಬಂದು ನಮ್ಮ ಫೋಟೊ ತೆಗೆದುಕೊಳ್ಳುತ್ತಿದ್ದರು. ನಾವು ಕೇಳಿದರೆ ನೀವು ಫೋಟೊ ತೆಗೆದುಕೊಂಡ್ರಿ ಅದಕ್ಕೆ ನಾವು ಫೋಟೊ ತೆಗೆದ್ವಿ ಎನ್ನುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.












Click it and Unblock the Notifications