'ಕನ್ನಡದ ಮತ್ತೊಬ್ಬ ಪ್ರತಿಷ್ಠಿತ ನಟನಿಗೆ 4ನೇ ಸ್ಟೇಜ್ ಕ್ಯಾನ್ಸರ್‌': ಪ್ರಥಮ್‌ ಕೊಟ್ಟ ಸುಳಿವೇನು..?

ಇನ್ನೊಬ್ಬರು ಕನ್ನಡದ ಪ್ರತಿಷ್ಠಿತ ನಟರೊಬ್ಬರಿಗೆ ಕ್ಯಾನ್ಸರ್‌ ಇದೆ. ಅದು ಕೂಡ ನಾಲ್ಕನೇ ಸ್ಟೇಜ್ ಕ್ಯಾನ್ಸರ್‌ ಇದೆ. ನಾನು ಅವರ ಹೆಸರು ಹೇಳಲು ಆಗುವುದಿಲ್ಲ ಎನ್ನುವ ಮೂಲಕ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಹಾಗೂ ಸಿನಿ ಪ್ರಿಯರಿಗೆ ನೋವು ಕೊಡುವ ಮತ್ತೊಂದು ಆಘಾತಕಾರಿ ವಿಚಾರವನ್ನು ಒಳ್ಳೆ ಹುಡುಗ ಖ್ಯಾತಿಯ, ಬಿಗ್‌ ಬಾಸ್‌ ವಿನ್ನರ್‌ ನಟ ಪ್ರಥಮ್‌ ಬಹಿರಂಗ ಪಡಿಸಿದ್ದಾರೆ.

ನಟ ಪ್ರಥಮ್‌ ನೀಡಿರುವ ಈ ಹೇಳಿಕೆ ಎಲ್ಲೆಡೆ ವೈರಲ್‌ ಆಗುತ್ತಿದೆ. ಯೂಟ್ಯೂಬ್‌ ಚಾನೆಲ್‌ವೊಂದರ ಜೊತೆ ಮಾತನಾಡಿದ ನಟ ಪ್ರಥಮ್‌, ಕನ್ನಡದ ಮತ್ತೊಬ್ಬ ಪ್ರತಿಷ್ಠಿತ ನಟರೊಬ್ಬರಿಗೆ ಕ್ಯಾನ್ಸರ್‌ ಇದೆ. ಅವರು ಹೆಸರು ನಾನು ಹೇಳಲ್ಲ. ಎಲ್ಲರಿಗೂ ಬೇಕಾದ ದೊಡ್ಡ ನಟರವರು, ಎಲ್ಲಾ ಚಿತ್ರರಂಗಕ್ಕೂ ಬೇಕಾದವರು ಎಂದಿದ್ದಾರೆ.

Actor Pratham Said That Another Famous Kannada Actor Has 4th Stage Cancer

'ಈ ವಿಚಾರ ಗೊತ್ತಾದ ತಕ್ಷಣ ನಾನು ಅವರ ಬಳಿಗೆ ಓಡಿ ಹೋಗಿದ್ದೇನೆ. ಅವರನ್ನು ನೋಡಲು ಹೋಗಿದ್ದೆ. ಆದರೆ ಆಗಲೇ ಇಲ್ಲ. ಅವರಿಗೆ ಕ್ಯಾನ್ಸರ್‌ ನಾಲ್ಕನೇ ಸ್ಟೇಜ್ ಇದೆ. ಅವರೇ ಈ ವಿಚಾರ ಹೊರಗೆ ಬರಬಾರದು ಎಂದರು. ಅವರೇ ಈ ವಿಚಾರ ನಿನ್ನ ಜೊತೆ ಯಾಕೋ ಹಂಚಿಕೊಳ್ಳಬೇಕು ಅನಿಸಿತು ಎಂದು ನನಗೆ ಫೋನ್‌ ಮಾಡಿದ್ದರು. ಅದು ನನ್ನಲ್ಲೇ ಇದೆ. ನನ್ನಲ್ಲೇ ಇರಲಿ. ಅದು ಯಾರು ಎಂದು ನನ್ನಲ್ಲೇ ಇರಲಿ' ಎಂದು ನಟ ಪ್ರಥಮ್‌ ಹೇಳಿದ್ದಾರೆ. ನ್ಯೂಸ್‌ ಬೀಟ್‌ ಕನ್ನಡ ಜೊತೆ ಪ್ರಥಮ್‌ ಮಾತನಾಡಿರುವ ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಪ್ರಥಮ್‌ ಈ ಹೇಳಿಕೆಯನ್ನು ಅನೇಕರು ಖಂಡಿಸಿದ್ದು, ಪ್ರಥಮ್ ಈ ರೀತಿ ಹೆಸರು ಹೇಳದೇ ಹೇಳುತ್ತಿದ್ದಾರೆ ಅಂದರೆ ಇದು ನಿಜವಾದ ವಿಚಾರ ಅಲ್ಲ. ಇದು ಜಸ್ಟ್‌ ಪಬ್ಲಿಸಿಟಿಗೆ ನೀಡಿರುವ ಹೇಳಿಕೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಅಷ್ಟು ದೊಡ್ಡ ನಟ ಪ್ರಥಮ್‌ ಬಳಿ ಯಾಕೆ ಹೇಳುತ್ತಾರೆ. ಮೂರನೇ ಸ್ಟೇಜ್‌ ಕ್ಯಾನ್ಸರ್‌ಗೆ ಬದುಕಲ್ಲ..ಇನ್ನು ನಾಲ್ಕನೇ ಸ್ಟೇಜ್‌ ಕ್ಯಾನ್ಸರ್‌ನಲ್ಲಿ ಹೇಗೆ ಬದುಕುತ್ತಾರೆ ಎಂದೆಲ್ಲಾ ಪ್ರಶ್ನಿಸಿದ್ದಾರೆ.

Actor Pratham Said That Another Famous Kannada Actor Has 4th Stage Cancer

ಇನ್ನು ಕೆಲವರು ನಟ ಪ್ರಥಮ್‌ ಪರ ಮಾತನಾಡಿದ್ದು, ಈ ವಿಚಾರ ಸತ್ಯವೂ ಇರಬಹುದು. ಅವರು ಹೆಸರು ಹೇಳುತ್ತಿಲ್ಲ ಅಂದ ಮೇಲೆ ಅದು ಅವರ ವೈಯಕ್ತಿಕ ಎಂದೆಲ್ಲಾ ಕಮೆಂಟ್‌ ಮಾಡುತ್ತಿದ್ದಾರೆ. ಯಾವುದು ಸತ್ಯ..? ಯಾವುದು ಸುಳ್ಳು..? ಕ್ಯಾನ್ಸರ್‌ನಿಂದ ಬಳಲುತ್ತಿರುವ ಆ ನಟ ಯಾರು..? ಕನ್ನಡದ ಪ್ರತಿಷ್ಠಿತ ನಟ ಎಂದರೆ ಯಾರಿರಬಹುದು ಎನ್ನುವ ಪ್ರಶ್ನೆಗಳಿಗೆ ಒಂದೇ ನಟ ಪ್ರಥಮ್‌ ನೇರವಾಗಿ ಉತ್ತರಿಸಬೇಕು. ಇಲ್ಲವೇ ಆ ನಟನೇ ಈ ವಿಚಾರವನ್ನು ಬಹಿರಂಗ ಪಡಿಸುವವರೆಗೂ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+