ದರ್ಶನ್‌ಗಾಗಿ ಪೂಜೆ ಅಂದಿದ್ರೆ ನಾನು ಕೂಡ ಬರುತ್ತಿರಲಿಲ್ಲ- ನಟ ಜಗ್ಗೇಶ್‌

ಬೆಂಗಳೂರು, ಆಗಸ್ಟ್ 14: ಕನ್ನಡ ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘ ಇಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನಗಳನ್ನು ನಡೆಸಿದೆ. ಈ ಮೊದಲು ಈ ಪೂಜೆಯನ್ನು ದರ್ಶನ್‌ ಒಳಿತಿಗಾಗಿ ಮಾಡುತ್ತಿರುವ ಪೂಜೆ ಎನ್ನುವ ಊಹಾಪೋಹ ಹಬ್ಬಿತ್ತು. ಈ ಬಗ್ಗೆ ಹಿರಿಯ ನಟ ಜಗ್ಗೇಶ್‌ ಪ್ರತಿಕ್ರಿಯಿಸಿದ್ದು, ಒಂದು ವೇಳೆ ದರ್ಶನ್​ ಸಲುವಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಪೂಜೆಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಎಲ್ಲಾ ಕಲಾವಿದರು ಸೇರಿ ಒಂದು ಕಲಾವಿದರ ಸಂಘ ಮಾಡಿದೆವು. ಡಾ.ರಾಜ್‌ಕುಮಾರ್‌ ಅವರು ಈ ಹಿಂದೆ ಮೂರು, ತಿಂಗಳು ಆರು ತಿಂಗಳಿಗೊಮ್ಮೆ ಎಲ್ಲಾ ಕಲಾವಿದರನ್ನು ಸೇರಿಸಿ ಸಭೆ ಮಾಡುತ್ತಿದ್ದರು. ಯಾವುದಾದರೂ ಕಷ್ಟ ಸುಖ ಇದ್ದರೆ ಸ್ಪಂದಿಸುವ ಕೆಲಸವಾಗುತ್ತಿತ್ತು. ಹಿರಿಯರೆಲ್ಲಾ ಸೇರಿ ಈ ಕಟ್ಟಡವನ್ನು ಗಟ್ಟಿ ಮಾಡಿಸುವ ಕೆಲಸ ಮಾಡಿದರು.

Actor Jaggesh Reaction On Karnataka Film Artists Association Pooje

ಅದಾದ ಮೇಲೆ ಯಾಕೋ ಇದು ಚಾಲನೆ ಆಗಲಿಲ್ಲ. ಅಲ್ಲಿಗೆ ನಿಂತು ಬಿಟ್ಟಿತು. ಬಹುಶಃ ರಾಕ್‌ಲೈನ್‌ ಅವರಿಗೆ ಇದು ಮನಸ್ಸಿಗೆ ಬಂದಿದೆ. ನಾವು ಅವರು ದೂರವಾಣಿಯಲ್ಲಿ ಮಾತನಾಡುವಾಗ ಹೇಳಿದ್ದೀಷ್ಟೆ. ಕಷ್ಟದಿಂದ ಬಂದ ನಮಗೆ ಶಾರದೇ ಎಲ್ಲಾ ರೀತಿಯ ಆಶೀರ್ವಾದ ಮಾಡಿದ್ದಾಳೆ. ನಾವು ಯಾಕೆ ಮುಂದಿನ ಪೀಳಿಗೆಗೆ ಒಳ್ಳೆದಾಗಲಿ ಎಂದು ಹರಸಿ ಬಿಟ್ಟುಕೊಟ್ಟು ಬಿಡಬಾರದು ಅನ್ನುವುದನ್ನು ನಾನು ಹೇಳಿದೆ. ಅವರು ಕೂಡ ಅದನ್ನೇ ಹೇಳಿದರು ಎಂದರು.

ಈಗ ಅದಕ್ಕೆ ಚಾಲನೆ ಸಿಕ್ಕಿದೆ. ಬೇರೆ ಕಡೆ ಎಲ್ಲಾ ಕಲಾವಿದರ ಸಂಘ ಬಲಿಷ್ಠವಾಗಿದೆ. ನಮ್ಮಲ್ಲಿ ಆಗಬೇಕು. ಮೊದಲು ಯಾರ್ಯಾರು ಈ ಕಲಾವಿದರ ಸಂಘದ ಸದಸ್ಯರಾಗಿದ್ದರೋ ಅವರೆಲ್ಲಾ ತೀರಿ ಹೋಗಿದ್ದಾರೆ. ಇನ್ನೊಂದು ಐವತ್ತು ಜನ ಉಳಿದಿದ್ದಾರೆ. ಅವರಿಂದ ಆಗುವುದಿಲ್ಲ. ಹೀಗಾಗಿ ಯಾರ್ಯಾರು ಈ ಕಲೆಗೆ ಸೇವೆಯನ್ನು ಮುಡಿಪಾಗಿಟ್ಟಿದ್ದಾರೆ ಅವರೆಲ್ಲಾ ಸದಸ್ಯರಾಗಬೇಕು ಎಂದು ಆಗ್ರಹಿಸಿದರು.

Actor Jaggesh Reaction On Karnataka Film Artists Association Pooje

ನಿಂತು ಹೋದ ಕೆಲಸ ಮತ್ತೆ ಚಾಲನೆ ಆಗಬೇಕು ಅಂದರೆ ನಮ್ಮ ಸನಾತನ ಧರ್ಮದಲ್ಲಿ ನಂಬಿಕೆ ಇರುವವರಿಗೆ ಒಂದು ಪೂಜೆ ಮುಖೇನ ಆಗಬೇಕು ಎನ್ನುವುದು ಪದ್ಧತಿ. ಇದು ಹಿಂದಿನಿಂದ ನಡೆದುಕೊಂಡು ಬಂದಿರುವಂತದ್ದು. ಅದನ್ನು ಇವತ್ತು ರಾಕ್‌ಲೈನ್‌ ಅವರ ಮುಂದಾಳತ್ವದಲ್ಲಿ ಎಲ್ಲರೂ ಮುಂದೆ ನಿಂತು ವಿಶೇಷವಾಗಿ ಪೂಜೆ ಮಾಡಿದ್ದಾರೆ. ವೈಯಕ್ತಿಕವಾಗಿ ನನಗೆ ತುಂಬಾ ಸಂತೋಷವಾಗಿದೆ ಎಂದರು.

ಇನ್ನು ದರ್ಶನ್‌ ಅವರಿಗಾಗಿ ಮಾಡಿರುವ ಪೂಜೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಜಗ್ಗೇಶ್‌, ನನಗೂ ಮೊದಲು ಅದೇ ರೀತಿ ಮಾಹಿತಿ ಬಂತು. ಅದೇ ರೀತಿ ಆಗಿದ್ದರೆ ನಾನು ಬರುತ್ತಿರಲಿಲ್ಲ. ಆಯಾಮ ಬೇರೆ ರೀತಿ ಹೋಗುತ್ತಿತ್ತು. ಅದರೆ ಅದಲ್ಲ. ಇದು ಕಲಾವಿದರ ಒಳಿತಿಗಾಗಿ ನಡೆದಿರುವ ಪೂಜೆ. ಮೊದಲು ಅನುಮಾನವಾಗಿ ನಾನು ಹಾಗೇ ಇರಬಹುದು ಅಂದುಕೊಂಡಿದ್ದೆ. ಆಮೇಲೆ ನಾನು ವಿಚಾರಿಸಿದಾಗ ಹಾಗೇನಿಲ್ಲ ಎಲ್ಲರ ಒಳಿತಿಗಾಗಿ ಮಾಡಿರುವ ಪೂಜೆ ಎಂದು ತಿಳಿದು ಬಂದಿತು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+