ನಟನೆ ಬಿಟ್ಟು ಕ್ಯಾಬ್ ಡ್ರೈವರ್ ಆಗ್ತೀನಿ: ಖ್ಯಾತ ನಟನ ಈ ನಿರ್ಧಾರಕ್ಕೆ ಕಾರಣವೇನು?
ಎಷ್ಟೋ ಮಂದಿಗೆ ನಟ ಆಗಬೇಕು ಅನ್ನೋ ಆಸೆ ಇದ್ರೆ, ನಟರೊಬ್ಬರಿಗೆ ಕ್ಯಾಬ್ ಡ್ರೈವರ್ ಆಗಬೇಕು ಎನ್ನುವ ಮಹಾದಾಸೆ ಇರುವುದು ಅಚ್ಚರಿ ಮೂಡಿಸಿದೆ. ಅದು ಬೇರೆ ಯಾರೂ ಅಲ್ಲ ಮಲಯಾಳಂ ಚಿತ್ರರಂಗದ ಟಾಪ್ ನಟ ಫಹಾದ್ ಫಾಸಿಲ್ (Fahadh Faasil). ಇತ್ತೀಚೆಗೆ ಹಿಟ್ ಕಂಡ "ಪುಷ್ಪ" ಸಿನಿಮಾ ಮೂಲಕ 'ಶೇಖಾವತ್ ಸರ್' ಎಂದೇ ಕರೆಸಿಕೊಂಡಿರುವ ಫಹಾದ್ ಅವರು ನಟನೆ ಬಿಟ್ಟು ಕ್ಯಾಬ್ ಡ್ರೈವರ್ ಆಗ್ತೀನಿ ಎಂದು ಹೇಳಿರುವುದು ಸಿನಿಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ. ಬಹುಭಾಷೆಗಳಲ್ಲಿ ಇವರಿಗೆ ಬೇಡಿಕೆ ಇದ್ದು, ನಟನಾಗಿ, ಖಳನಟನಾಗಿ, ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಸಂಭಾವನೆ ವಿಚಾರದಲ್ಲೂ ಇವರು ಕಡಿಮೆಯೇನಿಲ್ಲ. ಹೀಗಿರುವಾದ ದಿಢೀರ್ ನಟನೆಗೆ ಗುಡ್‌ಬೈ ಹೇಳುವ ಸುಳಿವು ನೀಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ಫಹಾದ್ ಫಾಸಿಲ್ ತಮ್ಮ ಆಸೆ ಬಿಚ್ಚಿಟ್ಟಿದ್ದಾರೆ. ನಾನು ಸಿನಿಮಾ ಬಿಟ್ಟ ನಂತರ ಬಾರ್ಸಿಲೋನಾದಲ್ಲಿ ಉಬರ್ ಡ್ರೈವರ್ ಆಗಿ ಜನರ ಸುತ್ತಲೂ ಓಡಾಡುವುದನ್ನು ಬಿಟ್ಟು ಬೇರೇನೂ ತನಗೆ ಇಷ್ಟವಿಲ್ಲ ಎಂದಿದ್ದಾರೆ. ನಾವು ಕೆಲವು ತಿಂಗಳುಗಳ ಹಿಂದೆ ಬಾರ್ಸಿಲೋನಾದಲ್ಲಿದ್ದೆ. ಒಬ್ಬರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು, ಕನಿಷ್ಠ ಪಕ್ಷ, ಬೇರೆಯವರ ಸ್ಥಳ ವೀಕ್ಷಿಸುವುದು, ಅದು ಒಂದು ಸುಂದರವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಅವಕಾಶ ಸಿಕ್ಕಾಗಲೆಲ್ಲಾ ನಾನು ಅದನ್ನು ಮಾಡುತ್ತೇನೆ ಎಂದಿದ್ದಾರೆ.

ಅದು ನನ್ನ ಸಮಯ. ಕೇವಲ ಚಾಲನೆ ಮಾಡುವುದಲ್ಲ, ನೀವು ನಿರಂತರವಾಗಿ ನೀವು ಇಷ್ಟಪಡುವ ವಿಷಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ. ಅದು ಆಟ, ಕ್ರೀಡೆ ಅಥವಾ ಟಿವಿ ನೋಡುವುದು. ನೀವು ವಿಷಯಗಳನ್ನು ನೋಡುವ ರೀತಿಯಲ್ಲಿ ಇದು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ತಮ್ಮ ನಿವೃತ್ತಿ ಬಳಿಕ ಬಾರ್ಸಿಲೋನಾದಲ್ಲಿ ಉಬರ್ ಟ್ಯಾಕ್ಸಿ ಚಾಲಕನಾಗಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ತಮ್ಮ ಹೊಸ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಜನರನ್ನು ಅವರ ಗಮ್ಯಸ್ಥಾನಕ್ಕೆ ಸುರಕ್ಷಿತವಾಗಿ ತಲುಪಿಸುವುದು ಒಂದು ಸುಂದರ ಅನುಭವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪತ್ನಿ ಕೂಡ ಓಕೆ ಅಂದಿದ್ದಾಳೆ
ಕಾರ್ ಡ್ರೈವಿಂಗ್ ನನಗೆ ವೈಯಕ್ತಿಕ ಸಮಯವನ್ನು ಕೊಡುತ್ತದೆ. ಅದನ್ನು ನಾನು ಕ್ರಿಕೆಟ್ ನೋಡುವಂತೆ ಅಥವಾ ಆಟಗಳು ಆಡಿರುವಂತೆ ಅನುಭವಿಸುತ್ತೇನೆ. ಇದು ನನಗೆ ಬಹಳ ಖುಷಿಯನ್ನುಂಟುಮಾಡುತ್ತದೆ. ನಾನು ನನ್ನ ನಿವೃತ್ತಿ ಕನಸನ್ನು 2020ರಲ್ಲೇ ಪತ್ನಿ ನಜ್ರಿಯಾ ನಜೀಮ್‌ಗೆ ಹೇಳಿದ್ದೇನೆ. ಈ ಕನಸಿಗೆ ಅವರ ಬೆಂಬಲವೂ ಸಿಕ್ಕಿದೆ ಎಂದಿದ್ದಾರೆ. ಈಗ ನನಗೆ ಉಬರ್ ಚಾಲಕನಾಗುವುದನ್ನು ಬಿಟ್ಟು ಬೇರೆ ಏನೂ ಇಷ್ಟವಿಲ್ಲ. ಜನರನ್ನು ಕರೆದುಕೊಂಡು ಹೋಗುವುದು ನನಗೆ ತುಂಬಾ ಇಷ್ಟ. ನಿವೃತ್ತಿ ಪ್ಲ್ಯಾನ್ ಆಗಿ ಬಾರ್ಸಿಲೋನಾಗೆ ತೆರಳಿ ಸ್ಪೇನ್‌ನಾದ್ಯಂತ ಜನರನ್ನು ಕರೆದುಕೊಂಡು ಹೋಗಬೇಕೆಂದು ನಾನು ನನ್ನ ಹೆಂಡತಿ ನಜ್ರಿಯಾ ನಜೀಮ್‌ಗೆ ಹೇಳುತ್ತೇನೆ. ಅವಳಿಗೆ ಈ ಪ್ಲ್ಯಾನ್ ತುಂಬಾ ಇಷ್ಟ ಎಂದಿದ್ದಾರೆ.

ಆವೇಶಂ, ಬೋಗನ್‌ವಿಲ್ಲಿಯಾ, ವೇಟ್ಟೈಯನ್, ಪುಷ್ಪ 2 ಸೇರಿದಂತೆ, ಇನ್ನು ಬಿಡುಗಡೆಗೆ ಸಜ್ಜಾಗಿರುವ ಮಾರೀಸ್‌ನ್, ಒಡುವು ಕುತಿರ ಚದುಂ ಕುತಿರ, ಕರಾಟೆ ಚಂದ್ರನ್, ಪಟ್ರಿಯಟ್ ಮತ್ತು ತೆಲುಗು ಸಿನಿಮಾ ಡೋಂಟ್ ಟ್ರಬಲ್ ದಿ ಟ್ರಬಲ್ ಸಿನಿಮಾಗಳಲ್ಲಿ ಫಹಾದ್ ಫಾಸಿಲ್ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದರೂ, ಫಹಾದ್ ಫಾಸಿಲ್ ನಿವೃತ್ತಿಯಲ್ಲಿ ಸಾಮಾನ್ಯ ಜೀವನದ ಅನುಭವ, ಸಂಪರ್ಕಗಳ ತೃಪ್ತಿಗೆ ಮುಂದಾಗಿರುವುದು ಮೆಚ್ಚುಗೆಗೆ ಪಾತ್ರವಾಗುತ್ತಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications