Duniya Vijay: ನಟ ವಿಜಯ್‌ ಕುಮಾರ್‌ ಹೊಸ ಸಿನಿಮಾ 'VK 30' ಪೋಸ್ಟರ್ ವೈರಲ್

ಬೆಂಗಳೂರು, ಆಗಸ್ಟ್ 26: ಇತ್ತೀಚೆಗಷ್ಟೇ ನಟ ವಿಜಯ್ ಕುಮಾರ್ (ದುನಿಯಾ ವಿಜಯ್) ಅವರು ತಾವೇ ನಿರ್ದೇಶಿಸಿದ್ದ 'ಭೀಮಾ' ಸಿನಿಮಾ ಮೂರನೇ ಭರ್ಜರಿ ಯಶಸ್ವಿ ಕಂಡಿದೆ. ಇದರ ಬೆನ್ನಲ್ಲೆ ಅವರ ಅಭಿಮಾನಿಗಳಿಗೆ ದೊಡ್ಡ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆರ್‌ಆರ್ ವೆಟ್ರಿವೇಲ್ (ತಂಬಿ) ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ಘೋಷಣೆ ಆಗಿದೆ.

ದುನಿಯಾ ವಿಜಯ್ ಅವರು ತಮ್ಮ ಮುಂದಿನ 30ನೇ ಸಿನಿಮಾ ಕುರಿತ ವಿಶೇಷ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಮತ್ತೆ ಅದೆ ಗ್ಯಾಂಗ್ ಜೊತೆಗೆ ಹೊಸ ಸಿನಿಮಾ ಎಂದು ಅವರು ಬರೆದುಕೊಂಡಿದ್ದಾರೆ.

Actor Duniya Vijay VK 30th Film Announced Poster Viral

ಸಲಗ ಮತ್ತು ಭೀಮಾ ಸಿನಿಮಾವನ್ನು ನಟ ದುನಿಯಾ ವಿಜಯ್ ಅವರೇ ಸ್ವತಃ ನಿರ್ದೇಶಿಸಿ, ನಟಿಸಿದ್ದರು. ಆ ಎರಡು ಸಿನಿಮಾಗಳೂ ಹಿಟ್ ಲಿಸ್ಟ್‌ಗೆ ಸೇರಿವೆ. ಇದೇ ಚಿತ್ರಗಳ ತಂತ್ರಜ್ಞರು, ಸಹಾಯಕ ನಿರ್ದೇಶಕರ ತಂಡವು ಸೇರಿ ಮತ್ತೊಂದು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ #VK30 ಸಿನಿಮಾ ಪೋಸ್ಟರ್ ವೈರಲ್ ಆಗುತ್ತಿದೆ.

ಚಿತ್ರದ ಪೋಸ್ಟರ್‌ನಲ್ಲಿ ಕೆಂಪು ಟೋಪಿ ಹಾಕಿರುವ ದುನಿಯಾ ವಿಜಯ್ ಹೆಗಲ ಮೇಲೆ 'ಉಡಾ' ಪ್ರಾಣಿ ಇದೆ. ಇದನ್ನು ನೋಡಿದ ಅಭಿಮಾನಿಗಳು ಇದು ಸಲಗಾ 2 ಸಿನಿಮಾ ಅಂತಲೂ ಹೇಳುತ್ತಿದ್ದಾರೆ.

ಆಗಸ್ಟ್ 09ರಂದು ಭೀಮಾ ಸಿನಿಮಾ ರಿಲೀಸ್ ಆಗಿತ್ತು. ನಟನಾಗಿ, ಎರಡನೇ ಬಾರಿಗೆ ನಿರ್ದೇಶಕನಾಗಿ ನಟ ದುನಿಯಾ ವಿಜಯ್ ಅವರು ಜನರಿಗೆ ಇಷ್ಟವಾಗಿದ್ದಾರೆ. ಡ್ರಗ್ಸ್ ನಿಂದ ಸಮಾಜ, ಯುವ ಸಮೂಹದ ಮೇಲಾಗುವ ದುಷ್ಪರಿಣಾಮ ಕುರಿತು ಎಳೆ ಎಳೆಯಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಇದು ಜನರಿಗೆ ಇಷ್ಟವಾಗಿದ್ದು, ಸಿನಿಮಾವನ್ನು ಗೆಲ್ಲಿಸಿದ್ದಾರೆ. ಭೀಮಾ ಸಿನಿಮಾ ಮೂಲಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಿಗೆ ಜೀವ ಬಂದಂತಾಗಿದೆ.

ಭೀಮಾ ಸಿನಿಮಾ ಬಳಿಕ ತಂಬಿ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಲಿದೆ ಎಂದು ನಟ ದುನಿಯಾ ವಿಜಯ್ ಅವರೇ ಸ್ವತಃ ಹೇಳಿದ್ದರು. ಆ ನೂತನ ಸಿನಿಮಾದ ಪೋಸ್ಟರ್ ಸೋಮವಾರ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ಫ್ಯಾನ್ಸ್‌ಗಳಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+