Darshan Bail: ನಟ ದರ್ಶನ್‌ಗೆ ಅಕ್ಟೋಬರ್‌ 5ಕ್ಕೆ ಜಾಮೀನು?

Darshan Bail: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಂಗ್‌ ಜೈಲು ಸೇರಿದೆ. ಇನ್ನು ಇಂದು ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ವಿಚಾರಣೆಯನ್ನು 57ನೆ ಸಿಸಿಎಚ್‌ ನ್ಯಾಯಾಲಯ ನಾಳೆ ಅಂದರೆ ಅಕ್ಟೋಬರ್‌ 5ಕ್ಕೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಹಿಂದೆ ಕೆಲವು ನಟ ದರ್ಶನ್‌ ಜಾಮೀನು ಅರ್ಜಿಯನ್ನು ವಿವಿಧ ಕಾರಣಗಳಿಂದಾಗಿ ಹಲವು ಬಾರಿ ಮುಂದೂಡಿಕೆ ಮಾಡಲಾಗಿತ್ತು. ಇನ್ನು ಇಂದು (ಅಕ್ಟೋಬರ್‌ 04) ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಮತ್ತೆ ವಿಚಾರಣೆಯನ್ನು ನಾಳೆಗೆ ಮುಂದೂಡಿ ಆದೇಶ ಹೊರಡಿಸಿದೆ.

Actor Darshan s Bail application hearing Postponed to October 5

ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಇಂದು ನಟ ದರ್ಶನ್ ಪರ ವಾದ ಮಂಡನೆ ಮಾಡಿದರು. ಕಳೆದ ಎರಡು ವಾರದಿಂದಲೂ ದರ್ಶನ್​ಗೆ ಜಾಮೀನು ಅರ್ಜಿ ಮುಂದೂಡಿಕೆಯಾಗುತ್ತಲೇ ಇದೆ. ಇನ್ನು ಇದೀಗ ಇಂದು ವಾದ ಆಲಿಸಿದ ಕೋರ್ಟ್‌ ಮತ್ತೆ ಅಕ್ಟೋಬರ್ 05 ಮಧ್ಯಾಹ್ನ 12:30ಕ್ಕೆ ಮುಂದೂಡಿಕೆ ಮಾಡಿದೆ.

ದರ್ಶನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ತನಿಖೆಯಲ್ಲಿರುವ ಲೋಪಗಳನ್ನು ಎತ್ತಿ ತೋರಿಸಿದರು. ಇದನ್ನೇಲ್ಲ ಆಲಿಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದರು.

ಈಗಾಗಲೇ ಸರ್ಕಾರದ ಪರ ವಕೀಲ ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ದರ್ಶನ್‌ ವಿರುದ್ಧ ಸಾಕ್ಷ್ಯಗಳನ್ನು ವಿವರಿಸುತ್ತಾ ವಾದವನ್ನು ಮಂಡನೆ ಮಾಡಿದ್ದರು. ಇನ್ನು ಇಂದು ದರ್ಶನ್‌ ಪರ ವಾದ ಮಂಡನೆ ಮಾಡಿದ ವಕೀಲ ಸಿ.ವಿ.ನಾಗೇಶ್ ಅವರು, ಪ್ರಕರಣದಲ್ಲಿ ಮಾಧ್ಯಮಗಳು ದರ್ಶನ್ ಅನ್ನು ಅಪರಾಧಿ ಎಂದೇ ಬಿಂಬಿಸಿವೆ. ಬಳಿಕ ಎಸ್​ಪಿಪಿ ಅವರು ಈ ತನಿಖೆಯನ್ನು ಅತ್ಯುತ್ತಮ ಎಂದು ಹೇಳಿದ್ದಾರೆ. ಆದರೆ ಇದೊಂದು ಕಳಪೆ ತನಿಖೆ ವರದಿ ಎಂದು ವಾದ ಮಾಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ವಾದದ ಟಿಪ್ಪಣಿ ಸಲ್ಲಿಕೆ ಮಾಡಿದ ನಾಗೇಶ್ ಅವರು, ನಂತರ ಎರಡು ಸುಪ್ರೀಂ ಕೋರ್ಟ್​ನ ಆದೇಶಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದರು.

ಆರಂಭದಲ್ಲಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ತೆರೆದಿಟ್ಟರು. ಅಲ್ಲದೆ, ವಕೀಲರು, ಮಾಧ್ಯಮಗಳ ವರದಿ ಆಧಾರದ ಮೇಲೆ ತೀರ್ಪು ನೀಡಬಾರದು ಎಂದು ಮನವಿ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+