Get Updates
Get notified of breaking news, exclusive insights, and must-see stories!

Vijayalakshmi Darshan: ಪತಿ ದರ್ಶನ್‌ ಐಷಾರಾಮಿ ಕಾರುಗಳಿಗೆ ಆಯುಧಪೂಜೆ ನೆರವೇರಿಸಿದ ವಿಜಯಲಕ್ಷ್ಮಿ

ನಟ ದರ್ಶನ್‌ ತೂಗುದೀಪ ಅವರು ಸಂಕ್ರಾಂತಿ ಹಾಗೂ ದಸರಾ ಹಬ್ಬಗಳನ್ನು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸುತ್ತಾರೆ. ಸಂಕ್ರಾಂತಿಯನ್ನ ತಮ್ಮ ಮೈಸೂರು ಫಾರ್ಮ್‌ಹೌಸ್‌ನಲ್ಲಿ ಆಚರಿಸಿದರೆ, ದಸರಾ ಹಬ್ಬದ ಅಂಗವಾಗಿ ದರ್ಶನ್‌ ಅವರ ಕಾರು ಹಾಗೂ ಇನ್ನಿತರೆ ವಾಹನಗಳನ್ನು ಕಣ್ತುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದರು. ಅಷ್ಟರ ಮಟ್ಟಿಗೆ ದುಬಾರಿ ಕಾರು ಕ್ರೇಜ್‌ ಹೊಂದಿದ್ದಾರೆ ದರ್ಶನ್‌. ಆದರೆ ಈ ಬಾರಿ ಜೈಲಿನಲ್ಲಿರುವ ಕಾರಣ ದಸರಾ ಮಂಕಾಗಿರುತ್ತೆ ಎಂದು ಭಾವಿಸಿದ್ದರು. ಆದರೆ ವಿಜಯಲಕ್ಷ್ಮಿ ಅವರು ದರ್ಶನ್‌ ಅವರ ಅನುಪಸ್ಥಿತಿಯಲ್ಲೂ ದಸರಾ ಸಂಭ್ರಮಾಚರಣೆಯ ಪರಂಪರೆ ಮುನ್ನಡೆಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಮನೆಯಲ್ಲಿ ಇಂದು ದಸರಾ ಹಬ್ಬದ ಸಂಭ್ರಮ ಮನೆಮಾಡಿತ್ತು. ಇದೇ ಮೊದಲ ಬಾರಿಗೆ ದರ್ಶನ್‌ ಇಲ್ಲದೇ ಪತ್ನಿ ವಿಜಯಲಕ್ಷ್ಮಿ ದಸರಾ ಹಬ್ಬವನ್ನು ತಮ್ಮ ಮಗನೊಂದಿಗೆ ಆಚರಿಸಿದ್ದಾರೆ. ಈ ಫೋಟೋಗಳು ವೈರಲ್‌ ಆಗಿವೆ.

ಹೌದು, ರೇಣುಕಾಸ್ವಾಮಿಯನ್ನ ಗೆಳತಿ ಪವಿತ್ರಾ ಗೌಡ ಅವರು ಹಾಗೂ ಸ್ನೇಹಿತರ ಜತೆಗೂಡಿ ಕೊಲೆ ಮಾಡಿದ್ದಾರೆ ಎಂಬ ಆರೋಪಡಿ ನಟ ದರ್ಶನ್‌ ಜೈಲು ಸೇರಿದ್ದಾರೆ. ಸಾಮಾನ್ಯ ಕೈದಿಯಂತೆ ಜೀವನ ನಡೆಸುತ್ತಿರುವ ದರ್ಶನ್‌, ಈ ಬಾರಿ ಎಲ್ಲ ಹಬ್ಬದ ದಿನಗಳನ್ನು ಜೈಲಿನಲ್ಲಿ ಕಳೆಯುತ್ತಿದ್ದಾರೆ. ಜಾಮೀನನ ಮೇಲೆ ಕೆಲ ತಿಂಗಳು ಹೊರಗಿದ್ದ ಅವರಿಗೆ ಸುಪ್ರೀಂಕೋರ್ಟ್‌ ಶಾಕ್‌ ನೀಡಿತ್ತು. ಜಾಮೀನು ರದ್ದು ಮಾಡಿ ದರ್ಶನ್‌ ಅವರನ್ನು ಮತ್ತೆ ಜೈಲಿಗೆ ಕಳಿಸಲಾಗಿದೆ. ಇತ್ತ ದರ್ಶನ್‌ ಇಲ್ಲದೆ ಪತ್ನಿ ವಿಜಯಲಕ್ಷ್ಮಿ ಅವರು ದಸರಾ ಆಚರಿಸಿದ್ದಾರೆ.

actor-darshan-wife-vijayalakshmi-celebrates-dasara-without-him-photos-go-viral

ಸಂಪ್ರದಾಯ ಮುಂದುವರಿಸಿದ ಪತ್ನಿ

ಪ್ರತಿ ವರ್ಷವೂ ಅದ್ಧೂರಿಯಾಗಿ ದಸರಾ ಹಬ್ಬವನ್ನು ದರ್ಶನ್ ಆಚರಿಸುತ್ತಿದ್ದರು. ಆದರೆ ಇದೀಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ನಟನಿಗೆ ಹಬ್ಬದ ಸಂತಸವೇ ಇಲ್ಲದಂತಾಗಿದೆ. ಈ ನಡುವೆ ಪತ್ನಿ ಎಂದಿನಂತೆ ದಸರಾ ಹಬ್ಬವನ್ನ ಆಚರಿಸಿದ್ದು, ಈ ಸಂಬಂಧ ಮಗನೊಂದಿಗಿನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್‌ ಅವರ ದುಬಾರಿ ಕಾರುಗಳೊಂದಿಗೆ ಪೋಸ್‌ ಕೊಟ್ಟಿದ್ದಾರೆ. ಇದನ್ನು ನೋಡಿ ಡಿಬಾಸ್‌ ಅಭಿಮಾನಿಗಳು ಬಾಸ್‌ ಇರಬೇಕಿತ್ತು ಎಂದು ಕಾಮೆಂಟ್‌ ಮಾಡಿದ್ದಾರೆ.

ದಾಸನ ಅಭಿಮಾನಿಗಳು ಸಹ ದಸರಾ ಹಬ್ಬದಲ್ಲಿ ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಕಾರುಗಳನ್ನು ಹೊಂದಿರುವ ನಟರ ಪೈಕಿ ದರ್ಶನ್‌ ಕೂಡ ಒಬ್ಬರು. ಪ್ರತಿ ವರ್ಷ ತಮ್ಮ ಐಷಾರಾಮಿ ಕಾರುಗಳ ಜತೆ ಇತರೆ ವಾಹನಗಳಿಗೆ ಪೂಜೆ ಸಲ್ಲಿಸಿ ತಮ್ಮ ಕುಟುಂಬದೊಂದಿಗೆ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಈ ಎಲ್ಲ ಖುಷಿಗಳಿಂದ ದೂರ ಉಳಿದಿರುವ ಅವರು ಜೈಲಿನಲ್ಲಿಯೇ ಈ ಬಾರಿ ಕಳೆಯುವಂತಾಗಿದೆ. ವಿಜಯಲಕ್ಷ್ಮಿ ಈ ಬಾರಿ ದರ್ಶನ್‌ ಇಲ್ಲದೆಯೇ ಹಬ್ಬ ಆಚರಿಸಿದ್ದಾರೆ. ಹಬ್ಬದ ಖುಷಿಯ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಡೆವಿಲ್‌ ಸಿನಿಮಾದ ಹಾಡಿನ ಸಾಲುಗಳು ಇದ್ರೆ ನೆಮ್ಮದಿಯಾಗಿರಬೇಕು ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಕೆಲವೆಡೆ ಈ ಅಭಿಮಾನ ಮಿತಿಮೀರಿದ್ದು ಉಂಟು. ನಟ ದರ್ಶನ್‌ ಜೈಲಿನಲ್ಲಿ ಇರುವಾಗಲೇ ಡೆವಿಲ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ದರ್ಶನ್‌ ಜಾಮೀನಿನ ಮೇಲೆ ಹೊರಬಂದಿದ್ದರಿಂದ ಈ ದಸರಾದಲ್ಲಿ ಅವರನ್ನು ಕಾಣಬಹುದು ಎಂದು ಫ್ಯಾನ್ಸ್‌ ಖುಷಿಪಟ್ಟಿದ್ದರು. ಆದರೆ ಕೋರ್ಟ್‌ ಎಲ್ಲವನ್ನೂ ತಲೆಕೆಳಗೆ ಮಾಡಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+