ದರ್ಶನ್ ಮಾಡಬೇಕಿದ್ದ ಪಾತ್ರದಲ್ಲಿ ಸುದೀಪ್? ಕರಾವಳಿ ಸಿನಿಮಾ ನಿರ್ದೇಶಕರು ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್‌ ಜೈಲುಪಾಲಾಗಿದ್ದಾರೆ. ಇನ್ನೂ ಪ್ರಕರಣದ ಸಂಬಂಧ ದರ್ಶನ್‌ ಪರ-ವಿರೋಧದ ಚರ್ಚಗಳಾಗುತ್ತಿವೆ. ಮತ್ತೊಂದೆಡೆ ಪೊಲೀಸರು ಹೆಚ್ಚೆಚ್ಚು ಸಾಕ್ಷ್ಯಗಳನ್ನು ಸಗ್ರಹ ಮಾಡುವ ಮೂಲಕ ತನಿಖೆ ಚುರುಕುಗೊಳಿಸಿದ್ದಾರೆ. ಇದರ ನಡುವೆಯೇ ಕನ್ನಡದಲ್ಲಿ ಕರಾವಳಿ ಚಿತ್ರದ ಸುದ್ದಿಯೊಂದು ಹರಿದಾಡುತ್ತಿದೆ.

ಕನ್ನಡದಲ್ಲಿ ಕರಾವಳಿ ಸಿನಿಮಾ ಬರುತ್ತಿದ್ದು, ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹತ್ತಾರು ವಿಶೇಷ ಕಲಾವಿದರು ಈ ಚಿತ್ರದಲ್ಲಿದ್ದಾರೆ. ನಿರ್ದೇಶಕ ಗುರುದತ್ ಗಾಣಿಗ ಚಿತ್ರಕ್ಕೆ ವಿಶೇಷ ಕ್ಯಾರೆಕ್ಟರ್‌ಗಳನ್ನೇ ಡಿಸೈನ್ ಮಾಡಿದ್ದಾರೆ. ಅದಕ್ಕೆ ಸೂಕ್ತ ಕಲಾವಿದರನ್ನ ಆಯ್ಕೆ ಮಾಡಿಕೊಂಡಿದ್ದು, ಸಿನಿಮಾದಲ್ಲಿ ಒಂದು ವಿಶೇಷ ಕ್ಯಾರೆಕ್ಟರ್‌ವೊಂದನ್ನು ಡಿಸೈನ್ ಮಾಡಿದ್ದಾರೆ. ಇದಕ್ಕೆ ಕನ್ನಡದ ಸೂಪರ್ ಸ್ಟಾರ್‌ ಒಬ್ಬರನ್ನು ಹಾಕಿಕೊಳ್ಳಬೇಕು ಅಂತಲೂ ಪ್ಲಾನ್ ಮಾಡಿದ್ದರಂತೆ. ಆದರೆ ಈ ಬಗ್ಗೆ ಒಂದು ವಿಚಾರ ರಿಲೀವ್‌ ಆಗಿದ್ದು, ಇದಕ್ಕೆ ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ.

Actor Darshan What did director say about special character of Karavali Movie

"ಕನ್ನಡದಲ್ಲಿ ಕರಾವಳಿ ಸಿನಿಮಾದಲ್ಲಿ ವಿಶೇಷ ಕಲಾವಿದರ ಆಯ್ಕೆಯ ಬಗ್ಗೆ ಇನ್ನೂ ಗುಟ್ಟಾಗಿ ಚರ್ಚೆ ನಡೆಯುತ್ತಿತ್ತು. ಅದ್ಹೇಗೋ ಏನೋ.. ಯಾರೋ ಈ ಚಿತ್ರದಿದಂದ ಕಿಡಿಗೇಡಿಗಳು ನಟ ದರ್ಶನ್‌ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಸುದ್ದಿ ಹರಡಿದ್ದಾರೆ. ಇದು ಸತ್ಯಕ್ಕೆ ದೂವಾರದ ಮಾತು. ಈ ವಿಶೇಷ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಬೇಕೆಂಬುದು ಇನ್ನೂ ಚರ್ಚೆಯ ಹಂತದಲ್ಲಿದೆ," ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

ಈ ಚಿತ್ರದಲ್ಲಿ ಮಹಾವೀರ ಅನ್ನುವ ಒಂದು ವಿಶೇಷ ಪಾತ್ರವಿದ್ದು, ಇದರ ಗತ್ತೇ ಬೇರೆ ಇದೆ. ಇಡೀ ಚಿತ್ರಕ್ಕೆ ಇದರ ಶಕ್ತಿನೇ ತುಂಬಾ ಪ್ರಮುಖ ಪಾತ್ರವಹಿಸಲಿದೆ. ಆದ್ದರಿಂದ ಈ ಒಂದು ಪಾತ್ರ ಕನ್ನಡದ ಸೂಪರ್ ಸ್ಟಾರ್‌ಗಳಲ್ಲಿ ಯಾರಾದರೂ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವ ಚರ್ಚೆ ಚಿತ್ರತಂಡದಲ್ಲಿಯೇ ನಡೆದಿದೆ.

ಆದರೆ, ಈ ಒಂದು ಮಾಹಿತಿ ಲೀಕ್‌ ಆಗಿಬಿಟ್ಟಿದೆ. ಅಲ್ಲದೆ, ಆ ಒಂದು ಮಾಹಿತಿ ಏನೇನೋ ಆಗಿದೆ. ಅದರ ಫಲ ದರ್ಶನ್ ಈ ಕರಾವಳಿ ಚಿತ್ರದಿಂದ ಇದೀಗ ಔಟ್ ಎನ್ನುವ ಸುದ್ದಿ ಹರಿದಾದುತ್ತಿದೆ. ಈ ಹಿನ್ನೆಲೆ ಚಿತ್ರತಂಡ ಚರ್ಚಿಸಿದ ವಿಚಾರದಲ್ಲಿ ದರ್ಶನ್ ಹೆಸರು ಕೂಡ ಇದೆ ಎನ್ನ;ಾಗಿದೆ.
ಸಿನಿಮಾದ ಮಹಾವೀರ ಪಾತ್ರವನ್ನು ಕನ್ನಡದ ಮೂವರು ಸ್ಟಾರ್‌ಗಳಲ್ಲಿ ಅಂದರೆ ದರ್ಶನ್, ಸುದೀಪ್ ಇಲ್ಲವೇ ಶಿವರಾಜ್‌ಕುಮಾರ್ ಮಾಡಿದರೆ ಚೆನ್ನಾಗಿರುತ್ತದೆ ಅಂತಲೇ ಸಿನಿಮಾ ತಂಡ ಚರ್ಚೆ ಮಾಡಿದೆ.

ಆದರೆ ಈ ಪಾತ್ರಕ್ಕೆ ಇನ್ನೂ ಯಾವ ಹೆಸರು ಕೂಡ ಅಂತಿಮ ಆಗಿಲ್ಲ. ಆದರೆ, ದರ್ಶನ್ ಜೈಲು ಸೇರುವುದೇ ತಡ, ದರ್ಶನ್ ಕರಾವಳಿ ಸಿನಿಮಾದಿಂದ ಔಟ್ ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದ್ದು, ಇದಕ್ಕೆ ಸ್ಪಷ್ಟನೆ ಕೊಟ್ಟು ಗೊಂದಲಗಳಿಗೆ ತೆರೆ ಎಳಿಯುವ ಕೆಲಸವನ್ನು ಚಿತ್ರತಂಡ ಮಾಡಿದೆ. ಯಾರು ಔಟ್‌.. ಯಾರು ಇನ್ನು ಎನ್ನುವ ಚರ್ಚೆಯೇ ಆಗಿಲ್ಲ. ಆ ಪಾತ್ರ ಯಾರೂ ಮಾಡಬೇಕೆನ್ನುವುದು ಇದೀಗ ಚರ್ಚೆಯ ಹಂತದಲ್ಲಿ ಎಂದು ತಿಳಿಸಿದೆ.

ಇನ್ನು ವೈರಲ್‌ ಆಗುತ್ತಿರುವ ಈ ವಿಚಾರ ಚಿತ್ರತಂಡಕ್ಕೆ ಬೇಸರ ತಂಡೊಡ್ಡಿದೆ. ಇದನ್ನೂ ಹೀಗೆ ಸುಮ್ಮನೆ ಬಿಟ್ಟರೆ ಇನ್ನೂ ಏನೇನೋ ಆಗುತ್ತದೆ ಎಂದು ಅಂದಾಜಿಸಲಾಗಿದ್ದು, ಸಿನಿಮಾ ತಂಡವೇ ಮುಂಜಾಗ್ರತಾ ಕ್ರಮವಾಗಿ ಈ ವಿಚಾರಕ್ಕೆ ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿದೆ.

ಸುದೀಪ್-ಶಿವಣ್ಣ ಮತ್ತು ದರ್ಶನ್ ಅವರಲ್ಲಿ ಒಬ್ಬರು ನಮ್ಮ ಚಿತ್ರದ ಮಹಾವೀರ ಪಾತ್ರವನ್ನು ಮಾಡಿದರೆ ಚೆನ್ನಾಗಿರುತ್ತದೆ. ಆದ್ದರಿಂದ ನಮ್ಮ ತಂಡದಲ್ಲಿಯೇ ಚರ್ಚೆಯಾಗಿದೆ. ಆದರೆ, ಇನ್ನೂ ಹಂತಿಮವಾಗಿಲ್ಲ. ಸುಮ್ಮನೆ ಏನೋ ಒಂದು ಹರಿದಾಡುತ್ತಿದೆ. ಇದರಿಂದ ನಮಗೆ ಬೇಸರವಾಗಿದೆ. ಇದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದು ಡೈರೆಕ್ಟರ್ ಗುರುದತ್ ಗಾಣಿಗ ಲಿಖಿತ ರೂಪದಲ್ಲಿಯೇ ಹೇಳಿಕೊಂಡಿದ್ದಾರೆ. ಇನ್ನು ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನು ನಾವೇ ಕೊಡುತ್ತೇವೆ ಅಂತಲೂ ಹೇಳಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+