Darshan Thoogudeepa: ಬಳ್ಳಾರಿ ಜೈಲಿಂದ ದರ್ಶನ್ ತೂಗುದೀಪ್ ರಿಲೀಸ್? ಸಂಭ್ರಮ ತಯಾರಿ ನಡೆಸಲು...
ದರ್ಶನ್ ತೂಗುದೀಪ್ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿದ್ದು ಕರ್ನಾಟಕದಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಮರ್ಥ್ಯ ದರ್ಶನ್ ತೂಗುದೀಪ್ ಅವರ ಸಿನಿಮಾಗಳಿಗೆ ಇತ್ತು. ಆದರೆ ಪವಿತ್ರಾ ಗೌಡ ಜೊತೆಯಲ್ಲಿ ಸೇರಿ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಭೀಕರವಾಗಿ ಕೊಲೆ ಮಾಡಿ, ಆ ಹೆಣವನ್ನ ಬೀದಿಗೆ ಎಸೆದಿರುವ ಆರೋಪ ದರ್ಶನ್ ತೂಗುದೀಪ್ & ಜೊತೆಗಾರರ ಮೇಲೆ ಕೇಳಿಬಂದಿತ್ತು. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಜೈಲು ಸೇರಿದ್ದು, ಬಳ್ಳಾರಿ ಜೈಲಿಂದ ಅವರು ರಿಲೀಸ್ ಆಗುವ ದಿನಾಂಕ ಘೋಷಣೆ...
ನಟ ದರ್ಶನ್ ತೂಗುದೀಪ್ ಹೊರಗೆ ಇದ್ದಾಗ ಹೀರೋ ಆಗಿದ್ದರು. ಆದರೆ, ಯಾವಾಗ ಕೊಲೆ ಕೇಸ್ ಅವರ ವಿರುದ್ಧ ಕೇಳಿಬಂದು, ಪರಪ್ಪನ ಅಗ್ರಹಾರ ಸೇರಿದರೋ ಆಗಲೇ ನೋಡಿ ಸಂಕಷ್ಟ ಶುರುವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನ ಒಳಗೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟ್ ಸೇದುತ್ತಾ, ಟೀ ಕುಡಿಯುತ್ತಿದ್ದ ಒಂದು ಫೋಟೋ ವೈರಲ್ ಆಗಿದ್ದೇ ತಡ ನಟ ದರ್ಶನ್ ಅವರು ಪರದಾಡಿಬಿಟ್ಟರು. ಯಾಕಂದ್ರೆ ನಟ ದರ್ಶನ್ ತೂಗುದೀಪ್ ವಿರುದ್ಧ ಹಲವು ಗಂಭೀರ ಆರೋಪ ಕೇಳಿಬಂದಿತ್ತು. ಇದೇ ಸಮಯದಲ್ಲಿ ಬಳ್ಳಾರಿ ಜೈಲಿಗೆ ನಟ ದರ್ಶನ್ ತೂಗುದೀಪ್ ಶಿಫ್ಟ್ ಆಗಿದ್ರೂ ಕಾಂಟ್ರವರ್ಸಿ ಕಡಿಮೆ ಆಗಿಲ್ಲ. ಹೀಗಿದ್ದಾಗಲೇ ದರ್ಶನ್ ಅವರು, ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುತ್ತಾರೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರಿ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

ಅಭಿಮಾನಿಗಳ 'ಡಿ-ಬಾಸ್' ರಿಲೀಸ್ ಯಾವಾಗ?
ದರ್ಶನ್ ತೂಗುದೀಪ್ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಸಿಗರೇಟ್ & ಟೀ ಅಂತಾ ಎಂಜಾಯ್ ಮಾಡುತ್ತಿದ್ದರು. ಹಾಗೇ ಪ್ರತಿದಿನ ದರ್ಶನ್ ತೂಗುದೀಪ್ & ಗ್ಯಾಂಗ್ ಬಿರಿಯಾನಿ ತಿಂದು ತೇಗುತ್ತಿತ್ತು ಅಂತಾ ದರ್ಶನ್ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಈ ಸಮಯದಲ್ಲೇ, ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಪರದಾಡುತ್ತಿದ್ದಾರೆ. ಹಾಗೇ, 15 ಕೆ.ಜಿ ತೂಕ ಕಳೆದುಕೊಂಡು ನರಳುತ್ತಿದ್ದಾರೆ ದರ್ಶನ್ ತೂಗುದೀಪ್ ಅವರು ಎಂಬ ಆರೋಪ ಕೂಡ ಇದೆ. ಪರಿಸ್ಥಿತಿ ಹೀಗಿದ್ದಾಗ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗುವ ದಿನಾಂಕದ ಬಗ್ಗೆ ಮಹತ್ವದ ಮಾಹಿತಿ ಇದೀಗ ಹೊರಬಿದ್ದಿದೆ!
ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಬಗ್ಗೆ ಖ್ಯಾತ ಜೋತಿಷಿ ಒಬ್ಬರು ಭವಿಷ್ಯ ನುಡಿದಿದ್ದಾರೆ. ಅದು ಏನೆಂದರೆ, ದರ್ಶನ್ ತೂಗುದೀಪ್ ಅವರಿಗೆ ಇರುವ ಕಂಟಕ ಇನ್ನೇನು ಕಳೆದು ಹೋಗಲಿದೆ. ಆ ನಂತರ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆಗಳೆಲ್ಲಾ ದೂರವಾಗಿ, ಇನ್ನೇನು ಕೆಲವೇ ದಿನಗಳಲ್ಲಿ ಜೈಲಿನಿಂದ ಹೊರ ಬಂದು ರಾಜ ರಾಜನಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆಯಲಿದ್ದಾರೆ, ಅಂತಾ ಹೇಳಿದ್ದಾರೆ ಖ್ಯಾತ ಜೋತಿಷಿ. ಹೀಗೆ ಖ್ಯಾತ ಜೋತಿಷಿ ಒಬ್ಬರು, ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರ ಬರುವ ಬಗ್ಗೆ ಹೇಳಿರುವ ಭವಿಷ್ಯದ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದರ್ಶನ್ ಅವರು ರಿಲೀಸ್ ಆಗುವುದು...
ದೀಪಾವಳಿ ಹಬ್ಬ ಮುಗಿದ ನಂತರ, ಅಂದರೆ ನವೆಂಬರ್ 1ರ ನಂತರ ಡಿ-ಬಾಸ್‌ಗೆ ಅದೃಷ್ಟ ಒಲಿದು ಬರಲಿದೆ ಅಂತಾ ಅಭಿಮಾನಿಗಳು ಖುಷಿ ಖುಷಿ ಆಗಿದ್ದಾರೆ. ಯಾಕಂದ್ರೆ ಇದೀಗ ಖ್ಯಾತ ಜೋತಿಷಿ ಹೇಳಿರುವ ಪ್ರಕಾರ ನಟ ದರ್ಶನ್ ಅವರು 2024ರ ನವೆಂಬರ್ 1ರ ನಂತರ ತಕ್ಷಣ ರಿಲೀಸ್ ಆಗಿ ಹೊರಗೆ ಬರಲಿದ್ದಾರೆ, ಎಂದು ಭವಿಷ್ಯ ನುಡಿದಿದ್ದಾರೆ ಖ್ಯಾತ ಜೋತಿಷಿ. ಈ ಭವಿಷ್ಯ ನಿಜವಾಗಿ ತಮ್ಮ ನೆಚ್ಚಿನ ನಟ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರಲಿ ದೇವರೇ ಅಂತಾ ಬೇಡುತ್ತಿದ್ದಾರೆ ಫ್ಯಾನ್ಸ್.
ದರ್ಶನ್ ಬೆನ್ನಿಗೆ ಹೊಸ ಕಂಟಕ?
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.












Click it and Unblock the Notifications