Darshan Thoogudeepa: ಫಾರ್ಮ್‌ಹೌಸ್‌ನಲ್ಲಿ ಫ್ಯಾಮಿಲಿ ಜೊತೆ ದರ್ಶನ್ ಜಾಲಿ, ಇಲ್ಲೇ ನ್ಯೂ ಇಯರ್ ಪಾರ್ಟಿ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿರುವ ಕಾರಣ ನಟ ದರ್ಶನ್ ತೂಗುದೀಪ ಅವರು ತಮ್ಮ ತವರು ಮೈಸೂರಿನತ್ತ ಕುಟುಂಬ ಸಮೇತರಾಗಿ ತೆರಳಿದ್ದಾರೆ. ಮೈಸೂರಿನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಪ್ರಕೃತಿಯ ಸೊಬಗನ್ನು ಸವಿಯುತ್ತಾ ದರ್ಶನ್ ಅವರು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಇದರ ಜೊತೆಗೆ ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಆಗಮನವಾಗುತ್ತಿದ್ದು, ಫಾರ್ಮ್‌ಹೌಸ್‌ನಲ್ಲೇ ದರ್ಶನ್ ನ್ಯೂ ಇಯರ್ ಸೆಲೆಬ್ರೇಟ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ನಿವಾಸದ ಬಳಿ ಅಭಿಮಾನಿಗಳು ಹೆಚ್ಚಾಗಿ ಸೇರುವ ಕಾರಣ ಯಾವುದೇ ಜಂಜಾಟವಿಲ್ಲದೆ ಕೆಲಕಾಲ ನೆಮ್ಮದಿಯಾಗಿರಲು ಅವರು ಮೈಸೂರಿನ ಟಿ.ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ, ಪುತ್ರನ ಜೊತೆ ಮೈಸೂರಿಗೆ ತೆರಳಿದ್ದಾರೆ. ಅಲ್ಲಿ ದರ್ಶನ್ ಅವರ ತಾಯಿ ಕೂಡ ಬಂದಿದ್ದಾರೆ. ಕುಟುಂಬಸಮೇತರಾಗಿ ಸದ್ಯ ಅವರು ತೋಟದ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ.

ಈ ವಿಚಾರ ತಿಳಿದು ಕೆಲ ಅಭಿಮಾನಿಗಳು ಅಲ್ಲಿಗೂ ತೆರಳಿದ್ದಾರೆ. ಹೊರಗಿನಿಂದ ಡಿಬಾಸ್ ಡಿಬಾಸ್ ಎಂದು ಕಿರುಚಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೆಲವರು ರಹಸ್ಯವಾಗಿ ದರ್ಶನ್ ಅವರು ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆಯುತ್ತಿರುವ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಂದು ದರ್ಶನ್ ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಕಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಜನವರಿ ಮೊದಲ ವಾರದವರೆಗೆ ದರ್ಶನ್ ಅವರು ಮೈಸೂರಿನಲ್ಲೇ ಇರಲಿದ್ದಾರೆ. ಕೋರ್ಟ್‌ನಿಂದ ಅನುಮತಿ ಪಡೆದೇ ಅವರು ತಮ್ಮ ಫಾರ್ಮ್‌ಹೌಸ್‌ಗೆ ತೆರಳಿದ್ದಾರೆ. ಸದ್ಯ ಅವರು ತಮ್ಮ ಕುಟುಂಬದೊಂದಿಗೆ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಅಲ್ಲಿ ದರ್ಶನ್ ಅವರು ಮೊದಲಿನಿಂದಲೂ ಕೆಲ ಪ್ರಾಣಿಗಳನ್ನು ಸಾಕಿದ್ದು, ಅವುಗಳೊಂದಿಗೆ ಕಾಲಕಳೆಯುತ್ತಿದ್ದಾರೆ ಎನ್ನಲಾಗಿದೆ. ದರ್ಶನ್ ಅವರೊಂದಿಗೆ ನಟ ಧನ್ವೀರ್ ಕೂಡ ಫಾರ್ಮ್‌ಹೌಸ್‌ನಲ್ಲೇ ಇದ್ದಾರೆ.

ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಅವರು ಬೆನ್ನುನೋವಿನ ಸಮಸ್ಯೆಯಿಂದ ಬಳಲಿದ್ದರು. ಹಾಗಾಗಿ ಚಿಕಿತ್ಸೆಯ ಕಾರಣ ನೀಡಿ ಜಾಮೀನು ಕೋರಿದ್ದರು. ಅದರಂತೆ ಮೊದಲಿಗೆ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿಯೂ ಅವರಿಗೆ ಜಾಮೀನು ಇತ್ತೀಚೆಗಷ್ಟೇ ಮಂಜೂರು ಮಾಡಿತ್ತು.
ಜಾಮೀನು ಸಿಕ್ಕ ಬೆನ್ನಲ್ಲೇ ಬಿಜಿಎಸ್ ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದರು. ಅಲ್ಲಿಂದ ನೇರವಾಗಿ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮೀಯವರ ಹೊಸಕೆರೆಹಳ್ಳಿಯಲ್ಲಿರುವ ನಿವಾಸಕ್ಕೆ ತೆರಳಿದ್ದರು. ಜಾಮೀನು ಸಿಕ್ಕರೂ ದರ್ಶನ್ ಬೆಂಗಳೂರು ಬಿಟ್ಟು ಹೋಗಬಾರದು ಎಂದು ಕೋರ್ಟ್ ಸೂಚಿಸಿತ್ತು. ಆದರೆ, ಮೈಸೂರಿಗೆ ತೆರೆಳಲು ಅನುಮತಿ ನೀಡುವಂತೆ ದರ್ಶನ್ ಕೋರ್ಟ್‌ಗೆ ಕೇಳಿಕೊಂಡಿದ್ದರು. ಇದಕ್ಕೆ ಕೋರ್ಟ್ ಕೂಡ ಒಪ್ಪಿತ್ತು. ಅದರಂತೆ ಮುಂದಿನ ಜನವರಿ 5ರವರೆಗೆ ದರ್ಶನ್ ಅವರಿಗೆ ಮೈಸೂರಿನಲ್ಲಿರಲು ಅವಕಾಶ ಕಲ್ಪಿಸಿದೆ.
ಸದ್ಯ ಫಾರ್ಮ್‌ಹೌಸ್‌ನಲ್ಲಿರುವ ಅವರು ಹಳ್ಳಿ ಸೊಗಡಿನ ವಾತಾವರಣದಲ್ಲಿ ಕೂಲ್ ಆಗಿದ್ದಾರೆ. ಇನ್ನು ಅಲ್ಲಿಗೂ ಕೆಲವರು ಬಂದು ದರ್ಶನ್ ಅವರನ್ನು ಕಾಣಲು ಹಾತೊರೆಯುತ್ತಿದ್ದು, ಫಾರ್ಮ್‌ಹೌಸ್‌ನ ಗೇಟ್‌ಗಳನ್ನು ಭದ್ರವಾಗಿ ಮುಚ್ಚಲಾಗಿದೆ. ಅಲ್ಲಿ ಒಳಗೆ ಏನೂ ಕಾಣದಂತೆ ಕವರ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications