Darshan: ದರ್ಶನ್‌ಗೆ ಮತ್ತೊಂದು ಗಂಡಾಂತರ, ಪೊಲೀಸರಿಂದ ಹೊಸ ನೋಟಿಸ್ ಯಾಕೆ...

ನಟ ಹಾಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯಕ್ಕೆ ರಿಲ್ಯಾಕ್ಸ್‌ ಆಗಿರುವ ದರ್ಶನ್ ತೂಗುದೀಪ್ ಅವರಿಗೆ ಇದೀಗ ಮತ್ತೊಂದು ಗಂಡಾಂತರ ಎದುರಾಗಿದೆ. ಹೌದು ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಜಾಮೀನು ಸಿಕ್ಕರೂ ಒಂದಿಲ್ಲೊಂದು ವಿಷಯದಲ್ಲಿ ಸಂಕಷ್ಟ ಮುಂದುವರಿದೆ. ದರ್ಶನ್‌ಗೆ ಇದೀಗ ಹೊಸದಾಗಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಈ ನೋಟಿಸ್‌ಗೆ ವಿವರಣೆ ನೀಡುವಂತೆ ನಿರ್ದೇಶನ ಕೊಟ್ಟಿದ್ದಾರೆ.

ದರ್ಶನ್ ಜೈಲಿನಿಂದ ಬಿಡುಗಡೆಯಾದ ಮೇಲೆ ಇದೀಗ ಸಿನಿಮಾಗಳಲ್ಲಿ ನಟಿಸುವುದಕ್ಕೆ ರೆಡಿ ಆಗ್ತಿದ್ದಾರೆ. ಇನ್ನು ಅರ್ಧ ಆಗಿರುವ ಸಿನಿಮಾಗಳ ಶೂಟಿಂಗ್‌ ನಡೆಯಬೇಕಿದೆ. ಈ ರೀತಿ ಇರುವಾಗಲೇ ಪ್ರಮುಖ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಇದು ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದ್ದಲ್ಲ.

Actor Darshan Thoogudeepa Receives New Notice From Karnataka Police

ನಟ ದರ್ಶನ್‌ ಈಗಷ್ಟೇ ರಿಲ್ಯಾಕ್ಸ್‌ ಆಗ್ತಿದ್ದಾರೆ. ಆದರೆ ಈ ನಡುವೆ ಬೇರೆ ಬೇರೆ ಕಾರಣಕ್ಕೆ ದರ್ಶನ್‌ಗೆ ಪೊಲೀಸರಿಂದ ನೋಟಿಸ್‌ ಬರೋದು ತಪ್ಪುತ್ತಿಲ್ಲ. 2025ನೇ ವರ್ಷ ಡಿಬಾಸ್‌ಗೆ ಒಳ್ಳೆಯದಾಗಿರಲಿ, ಅವರು ಮತ್ತೆ ಸಿನಿಮಾ ಮಾಡಲಿ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು ದರ್ಶನ್​ ಅವರ ಹತ್ತಿರ ಗನ್ ಲೈಸೆನ್ಸ್​ ಇದೆ. ಅದನ್ನು ವಾಪಸ್‌ ತೆಗೆದುಕೊಳ್ಳುವುದಕ್ಕೆ ಪೊಲೀಸರು ಮುಂದಾಗಿದ್ದಾರೆ. ಗನ್‌ ಲೈಸೆನ್ಸ್‌ ವಿಚಾರವಾಗಿ ದರ್ಶನ್​ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್‌ಗೆ ದರ್ಶನ್ ಉತ್ತರ ಕೊಡಬೇಕಿದೆ.

Actor Darshan Thoogudeepa Receives New Notice From Karnataka Police

ಕಾರಣ ಕೇಳಿ ನೋಟಿಸ್: ದರ್ಶನ್ ಸೆಲೆಬ್ರೆಟಿ ಅವರಿಗೆ ಈ ಹಿಂದೆನೇ ಗನ್ ಲೈಸೆನ್ಸ್‌ ಕೊಡಲಾಗಿತ್ತು. ಆದರೆ ಅವರ ಮೇಲೆ ಕೊಲೆ ಪ್ರಕರಣ ದಾಖಲಾಗಿ. ಜೈಲು ಸಹ ಸೇರಿದ ಮೇಲೆ ಈ ವಿಷಯದ ಬಗ್ಗೆ ಪೊಲೀಸರು ಅಲರ್ಟ್‌ ಆಗಿದ್ದಾರೆ. ಅವರು ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅಲ್ಲದೆ ಇದೀಗ ಮುಂದಿನ ದಿನಗಳಲ್ಲಿ ಅವರು ಸಣ್ಣ ಸಣ್ಣ ಪ್ರಯಾಣ ಅಥವಾ ಪ್ರವಾಸವನ್ನೂ ಮಾಡುವ ಸಾಧ್ಯತೆ ಇದೆ.

ಸೆಲೆಬ್ರಿಟಿಗಳಿಗೆ ಭದ್ರತೆಯ ದೃಷ್ಟಿಯಿಂದ ಗನ್ ಲೈಸೆನ್ಸ್‌ ಕೊಡೋದು ಇದೆ. ಅದೇ ತರ ದರ್ಶನ್‌ಗೂ ಕೊಡಲಾಗಿತ್ತು. ಇದೀಗ ಈ ಸಂಬಂಧ ಪೊಲೀಸರು ದರ್ಶನ್‌ಗೆ ನೋಟಿಸ್‌ ಕೊಟ್ಟಿದ್ದಾರೆ. ನಿಮ್ಮ ಹತ್ತಿರ ಇರುವ ಗನ್‌ ಲೈಸೆನ್ಸ್‌ನ ಯಾಕೆ ಕ್ಯಾನ್ಸಲ್‌ ಮಾಡಬಾರದು ಅಂತ ಪ್ರಶ್ನೆ ಮಾಡಿದ್ದಾರೆ. ಅಂದರೆ ಪ್ರಶ್ನೆ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ.

ಈ ನೋಟಿಸ್‌ಗೆ ದರ್ಶನ್‌ ಅವರು 7 ದಿನಗಳ ಒಳಗಾಗಿ ಉತ್ತರ ಕೊಡಬೇಕಿದೆ. ಅವರು ಕೊಲೆ ಆರೋಪದಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ ಸಾಕ್ಷ್ಯ ನಾಶ ಅಥವಾ ಗನ್ ದುರ್ಬಳಕೆ ಮಾಡಿಕೊಳ್ಳಬಹುದು ಎನ್ನುವ ಅನುಮಾದನ ಮೇಲೆ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ನಟ ದರ್ಶನ್‌ಗೆ ಜನವರಿ 10ರಂದು ಈ ನೋಟಿಸ್‌ ಕೊಡಲಾಗಿದೆ. ಈ ನೋಟಿಸ್‌ ಬಂದ 7 ದಿನಗಳ ಒಳಗಾಗಿ ದರ್ಶನ್‌ ಅವರು ನೋಟಿಸ್‌ಗೆ ಉತ್ತರ ಕೊಡಬೇಕಿದೆ.

ದರ್ಶನ್‌ಗೆ ತಪ್ಪದ ಸಂಕಷ್ಟ: ದರ್ಶನ್‌ಗೆ ಒಂದಿಲ್ಲೊಂದು ಸಂಕಷ್ಟಗಳು ಮುಂದುವರಿದಿವೆ. ಸಂಕ್ರಾಂತಿ ಸಂಭ್ರಮದಲ್ಲಿ ಇರುವ ದರ್ಶನ್‌ ಇದೀಗ ನೋಟಿಸ್‌ಗೆ ಉತ್ತರ ಕೊಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+