Darshan Thoogudeepa: ಆರೋಪಿ ಪಟ್ಟದ ಸಂಖ್ಯೆ ಜೊತೆ ದರ್ಶನ್ & ಪವಿತ್ರಾ ಗೌಡಳ ಆ ನಂಬರ್ ಭಾರೀ ವೈರಲ್
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ & ಗ್ಯಾಂಗ್ ಜೈಲು ಸೇರಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿ ಚಾರ್ಜ್ ಶೀಟ್ ಹಾಕಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಇದೀಗ ಎರಡು ನಂಬರ್‌ಗಳು ಭಾರೀ ಟ್ರೋಲ್ ಆಗುತ್ತಿದೆ.
ಈಗಾಗಲೇ ನಟ ದರ್ಶನ್ ಹಾಗೂ ಪವಿತ್ರಾಗೌಡಗೆ ಸಂಬಂಧಿಸಿದಂತೆ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸಂಚಲನ ಸೃಷ್ಟಿಸಿದ್ದವು. ಇನ್ನೂ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಮೊಬೈಲ್ ನಂಬರ್ 6366697999 ಹಾಗೂ ಎ2 ಆರೋಪಿ ದರ್ಶನ್ ಅವರ ಮೊಬೈಲ್ 8050587999 ಎನ್ನುವ ಪೋಸ್ಟರ್‌ವೊಂದು ಭಾರೀ ಟ್ರೋಲ್ ಆಗುತ್ತಿದೆ.

ಅಷ್ಟೇ ಅಲ್ಲದೆ ಆರೋಪಿ ನಂಬರ್‌ಗಳನ್ನು ಜೊತೆಗೆ ಹೊಂದಾಣಿಕೆಯಾಗುವಂತಹ ಫೇವರಿಟ್ ಮೊಬೈಲ್ ಸಂಖ್ಯೆಗಳನ್ನು ಮಾರ್ಕ್ ಮಾಡುವ ಮೂಲಕ ಲವ್ ಅಂದ್ರೆ ಇದು ಗುರು ಎಂದು ಬರೆದಿರುವ ಪೋಸ್ಟರ್‌ವೊಂದು troll anthamma ಎನ್ನುವ ಪೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಭಾರೀ ವೈರಲ್ ಆಗುವುದಲ್ಲದೆ, ಟ್ರೋಲ್ ಕೂಡ ಆಗುತ್ತಿದೆ. ಈ ನಂಬರ್‌ಗಳ ಜೊತೆಗೆ ಹೃದಯದ ಒಳಗೆ ಹೃದಯ ಇದೆ ಎನ್ನುವ ಹಾಡನ್ನು ಹಾಕಲಾಗಿದೆ.
ಪೊಲೀಸ್ ಆಯುಕ್ತರು ಹೇಳಿದ್ದೇನು?: ರೇಣುಕಾಸ್ವಾಮಿ ಕೊಲೆ ಪ್ರಕರದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲುಪಾರಿದೆ. ಕೊಲೆ ಬಳಿಕ ದರ್ಶನ್ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ಚಿಕ್ಕಣ್ಣನನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೂ ಕಾನೂನನ್ನು ಮೀರಿ ಮತ್ತೆ ದರ್ಶನ್‌ನ್ನು ಭೇಟಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಏನು ಹೇಳಿದ್ದಾರೆಂದು ಇಲ್ಲಿ ತಿಳಿಯಿರಿ.
ಕಾನೂನಿನ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಗಾದ ಚಿಕ್ಕಣ್ಣ ನಟ ದರ್ಶನ್‌ನನ್ನು ಭೇಟಿ ಮಾಡುವಂತಿಲ್ಲ. ಆದರೂ ಇದೆಲ್ಲವನ್ನು ಮೀರಿ ಮತ್ತೆ ದರ್ಶನ್ ಭೇಟಿ ಮಾಡಿದ ಚಿಕ್ಕಣ್ಣಗೆ ಪೊಲೀಸ್ ಆಯುಕ್ತ ದಯಾನಂದ್ ಬಿ ಶಾಕಿಂಗ್ ನೀಡಿದ್ದಾರೆ.
ಇಂದು ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾಗಿರುವ ನಟ ಚಿಕ್ಕಣ್ಣ ಅವರು ದರ್ಶನ್ ಭೇಟಿಯಾಗಿ ಮಾತನಾಡಿರುವುದರ ಬಗ್ಗೆ ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದರಿಂದಾಗಿ ಇದೀಗ ಹಾಸ್ಯನಟ ಚಿಕ್ಕಣ್ಣಗೆ ಮತ್ತ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ದರ್ಶನ್ ಅವರು ಚಿಕ್ಕಣ್ಣ ಜೊತೆ ಪಾರ್ಟಿ ಮಾಡಿರುವುದು ತನಿಖೆ ವೇಳೆ ಬಯಲಾಗಿತ್ತು. ಇನ್ನು ಈ ಸಂಬಂಧ ಪೊಲೀಸರು ಚಿಕ್ಕಣ್ಣಗೆ ನೋಟಿಸ್ ನೀದ್ದರು. ಪ್ರಮುಖ ಸಾಕ್ಷಿಯಾಗಿರುವ ಹಿನ್ನೆಲೆ ಚಿಕ್ಕಣ್ಣ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲು ಮಾಡಲಾಗಿತ್ತು.
ವಿಚಾರಣೆ ಎದುರಸಿದ ಕೆಲವು ದಿನಗಳ ಬಳಿ ನಟ ಅಭಿಷೇಕ್ ಅಂಬರೀಶ್, ಧನ್ವೀರ್ ಅವರೊಂದಿಗೆ ಚಿಕ್ಕಣ್ಣ ಕೂಡ ನಟ ದರ್ಶನ್‌ನನ್ನು ಭೇಟಿ ಮಾಡಿದ್ದರು. ತನಿಖೆ ಹಂತದಲ್ಲಿರುವಾಗ ಪ್ರಕರಣದ ಸಾಕ್ಷಿಯೂ ವಿಚಾರಣಾಧೀನ ಕೈದಿಯನ್ನು ಭೇಟಿ ಮಾಡುವಂತಿಲ್ಲ. ಆದರೆ ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಚುರುಕುಗೊಂಡ ಬೆನ್ನಲ್ಲೇ ಚಿಕ್ಕಣ್ಣ ಭೇಟಿಯಾಗಿರುವುದು, ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯೆಯಿದೆ ಎನ್ನಲಾಗುತ್ತಿದೆ.












Click it and Unblock the Notifications