Darshan Thoogudeepa: ಡಿ-ಬಾಸ್ ಅಲ್ಲ ಬೆರಳು ಬಾಸ್! ದರ್ಶನ್ ತೂಗುದೀಪ್‌ಗೆ ಹೊಸ ಹೆಸರು ಕೊಟ್ಟ...

ದರ್ಶನ್ ತೂಗುದೀಪ್ ಈಗ ಬಳ್ಳಾರಿ ಜೈಲಿನಲ್ಲಿ ಡಿಪ್ರೆಷನ್ ಅಂದ್ರೆ ಖಿನ್ನತೆಗೆ ಜಾರಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಯಾಕಂದ್ರೆ ಜೈಲಿಂದ ಹೊರಗೆ ಇದ್ದಾಗ ದರ್ಶನ್ ತೂಗುದೀಪ ಲೀಟರ್ ಲೀಟರ್ ಎಣ್ಣೆ ಕುಡಿದು, ಹತ್ತಾರು ಸಿಗರೇಟ್ ಸೇದುತ್ತಿದ್ದರು ಎಂಬ ಆರೋಪ ಕೂಡ ಇದೆ. ಆದರೆ ಪರಪ್ಪನ ಅಗ್ರಹಾರದಿಂದ ಓಡಿಸಿದ ನಂತರ ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್‌ಗೆ ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲ. ಹೀಗಿದ್ದಾಗ ಡಿಪ್ರೆಷನ್ ಮೂಡ್‌ನಲ್ಲಿ ದರ್ಶನ್ ತೂಗುದೀಪ ತನ್ನ ಸಿಟ್ಟನ್ನು ಮಾಧ್ಯಮಗಳ ಎದುರು ತೀರಿಸಿಕೊಂಡಿದ್ದು, ಮಧ್ಯದ ಬೆರಳು ತೋರಿಸುವ ಮೂಲಕ ದರ್ಶನ್ ತೂಗುದೀಪ ಇದೀಗ...

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲವ್ ಸ್ಟೋರಿ ಇದೀಗ ಜಗತ್ತಿಗೆ ಗೊತ್ತಾಗಿದೆ. ಹೀಗೆ ಇಬ್ಬರೂ ಪ್ರೀತಿಯಲ್ಲಿ ಬಿದ್ದು ಒದ್ದಾಡುತ್ತಿರುವ ಸಮಯದಲ್ಲೇ, ರೇಣುಕಾಸ್ವಾಮಿ ಬಲಿ ಕಾ ಬಕ್ರಾ ಆಗಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಂದು ಕಡೆ ಕೊಲೆ ಆರೋಪಿಯಾಗಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೆಂಟ್ರಲ್ ಜೈಲು ಸೇರಿ ಮುದ್ದೆ ಮುರಿಯುತ್ತಿದ್ದಾರೆ. ಈ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲವ್ ಸ್ಟೋರಿ ವೈರಲ್ ಆಗ್ತಿದ್ದು, ಮೀಡಿಯಾಗಳ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ರೊಚ್ಚಿಗೆದ್ದಿದ್ದಾರೆ. ಅಲ್ಲದೆ ತಮ್ಮದೇ ಬೆರಳನ್ನು ಅಸಹ್ಯವಾಗಿ ತೋರಿಸಿ, ಇದೀಗ ಡಿ-ಬಾಸ್ ಬದಲಿಗೆ ಹೊಸ ಬಿರುದು ಹೆಸರನ್ನು ಪಡೆದಿದ್ದಾರೆ ನಟ ದರ್ಶನ್ ತೂಗುದೀಪ!

Actor Darshan Thoogudeepa Got New Name From These People

ದರ್ಶನ್ ಇದೀಗ ಡಿ-ಬಾಸ್ ಅಲ್ಲ...?

ಬಳ್ಳಾರಿ ಜೈಲಲ್ಲಿ ನಟ ದರ್ಶನ್ ತೂಗುದೀಪ್‌ಗೆ ಒಂಟಿಯಾಗಿ ಇದ್ದು ಹುಚ್ಚು ಹಿಡಿಯುತ್ತಿದೆ. ಇಂತಹ ಕಠಿಣ ಸಮಯದಲ್ಲೂ ಮೀಡಿಯಾಗಳು ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ 4ನೇ ಅಂಗಕ್ಕೆ ಅವಮಾನ ಮಾಡಿದ್ದಾನೆ ನಟ ದರ್ಶನ್ ತೂಗುದೀಪ ಅನ್ನೋ ಆರೋಪ ಕೇಳಿಬಂದಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಧೈರ್ಯ ಇದ್ದರೆ ಮಧ್ಯದ ಬೆರಳನ್ನು ನೇರವಾಗಿ ಮೇಲೆ ಎತ್ತಿ ತೋರಿಸಬೇಕಿತ್ತು, ಆದರೆ ನೆಲಕ್ಕೆ ಹಿಡಿದು ಈ ರೀತಿ ಬೆರಳಿನ ಮೂಲಕ ಸಿಗ್ನಲ್ ಕೊಟ್ಟು ಹೇಡಿ ಅನಿಸಿಕೊಂಡಿದ್ದಾನೆ ದರ್ಶನ್ ತೂಗುದೀಪ್ ಎಂಬ ಮಾತನ್ನ ಇದೀಗ ಕನ್ನಡ ನಾಡಿನ ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಇದರ ಜೊತೆಗೆ ದರ್ಶನ್ ತೂಗುದೀಪ ಇನ್ನು ಮುಂದೆ ಡಿ-ಬಾಸ್ ಅಲ್ಲ ಅದರ ಬದಲಾಗಿ...

'ಡಿ-ಬಾಸ್' ಅಲ್ಲ 'ಬೆರಳು' ಬಾಸ್ ಅಂತೆ!

ಯಾವಾಗ ದರ್ಶನ್ ತೂಗುದೀಪ್ ತಮ್ಮ ಮಧ್ಯದ ಬೆರಳನ್ನ ಮಾಧ್ಯಮಗಳ ಕ್ಯಾಮೆರಾ ಎದುರು ತೋರಿಸಿದರೋ, ಅದೇ ಕ್ಷಣದಿಂದ ದರ್ಶನ್ ತೂಗುದೀಪ್‌ಗೆ ಹೊಸ ಬಿರುದು ನೀಡಲಾಗಿದೆ. ಇಷ್ಟು ದಿನಗಳ ಕಾಲ ದರ್ಶನ್ ತೂಗುದೀಪ್‌ಗೆ 'ಡಿ-ಬಾಸ್' ಅಂತಾ ಅಭಿಮಾನಿಗಳು ಬಿರುದು ನೀಡಿದ್ದರು. ಆದರೆ ಇದೀಗ ಮೀಡಿಯಾಗಳಿಗೆ ಕೆಟ್ಟ ಕೆಟ್ಟದಾಗಿ ಬೆರಳು ತೋರಿಸಿರುವ ಇದೇ ನಟನಿಗೆ 'ಡಿ-ಬಾಸ್' ಅಲ್ಲ 'ಬೆರಳು' ಬಾಸ್ ಅಂತಾ ಕರೆಯುತ್ತಿದ್ದಾರೆ ಕನ್ನಡಿಗರು. ಹೀಗೆ ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಚರ್ಚೆಗೆ ವೇದಿಕೆಯ ಒದಗಿಸಿದೆ ಪ್ರಸಕ್ತ ಘಟನೆ.

ಬಳ್ಳಾರಿ ಜೈಲಿನಲ್ಲಿ ಬಾಸ್ ಒದ್ದಾಟ!

ಮನುಷ್ಯ ಮತ್ತೊಬ್ಬ ಮನುಷ್ಯನ ವಿಕೃತವಾಗಿ ಮರ್ಮಾಂಗದ ಸಿಪ್ಪೆ ಸುಲಿದು, ಕೊಲೆ ಮಾಡಿದ ಆರೋಪ ಕೇಳಿಬಂದ ನಂತರ ಪೊಲೀಸರು ದರ್ಶನ್ ತೂಗುದೀಪ್ & ಗ್ಯಾಂಗ್‌ನ ಬಂಧಿಸಿದ್ದಾರೆ. ಮೊದಲಿಗೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಣ್ಣೆ & ಸಿಗರೇಟ್ ಅಂತಾ ಮಜಾ ಮಾಡುತ್ತಿದ್ದ ಅಭಿಮಾನಿಗಳ ಡಿ-ಬಾಸ್ ಈಗ ಬಳ್ಳಾರಿ ಜೈಲು ಸೇರಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಬಳ್ಳಾರಿ ಜೈಲಿನಲ್ಲಿ ಊಟ ಸೇರದೆ, ವಾತಾವರಣ ಹಿಡಿಸದೆ ದರ್ಶನ್ ತೂಗುದೀಪ್ ಒದ್ದಾಡುತ್ತಿದ್ದಾನೆ. ಹೀಗಿದ್ದರೂ ಮಾಧ್ಯಮಗಳಿಗೆ ಕೆಟ್ಟದಾಗಿ ಬೆರಳು ತೋರಿಸಿದ ನಟ ದರ್ಶನ್ ಬೆರಳು ಸ್ಟಾರ್ ಆಗಿದ್ದಾರೆ.

ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+