ಕಾಡುವ ನೋವು: ಆ ಒಂದು ಕಾರಣಕ್ಕೆ ಹುಟ್ಟುಹಬ್ಬ ಆಚರಣೆ ಕೈಬಿಟ್ಟ Darshan Thoogudeepa

ಬೆಂಗಳೂರು, ಫೆಬ್ರವರಿ 08: ಫೆಬ್ರವರಿ ಅಂದ್ರೆ ಪ್ರೇಮಿಗಳ ಪಾಲಿಗೆ ವಿಶೇಷ ತಿಂಗಳಾದರೇ, ಡಿ ಬಾಸ್ ದರ್ಶನ್‌ ಅವರ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಕಾರಣ ತಮ್ಮ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬ. ಪ್ರತಿ ವರ್ಷ ಫೆಬ್ರವರಿ 16ಕ್ಕೆ ದರ್ಶನ್ ಅವರ ಹುಟ್ಟುಹಬ್ಬವಿದ್ದು, ಈಗಾಗಲೇ ಫ್ಯಾನ್ಸ್ ಸಂಭ್ರಮ ಶುರು ಮಾಡಿಕೊಂಡಿದ್ದಾರೆ.

ಹುಟ್ಟುಹಬ್ಬಕ್ಕೆ ಎಂಟು ದಿನಗಳಿವೆ. ಆದರೆ, 15 ದಿನಗಳಿಗೂ ಮುನ್ನವೇ ಬರ್ತ್‌ಡೇ ಸೆಲಬ್ರೆಷನ್‌ಗೆ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಆಚರಿಸಲು ಡಿ ಬಾಸ್ ಅಭಿಮಾನಿಗಳಿಗೆ ಕಾದುಕುಳಿತಿದ್ರು. ಆದರೆ, ನಟ ದರ್ಶನ್‌ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡುವ ಮೂಲಕ ಶಾಕ್‌ ಕೊಟ್ಟಿದ್ದಾರೆ.

Actor Darshan Thoogudeepa appeals to fans about his birthday

ಜನ್ಮದಿನದ ಕುರಿತು ನಟ ದರ್ಶನ್‌ ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಭಿಮಾನಿಗಳಿಗೆ ವಿಶೇಷ ಮನವಿಯನ್ನ ಮಾಡಿದ್ದಾರೆ. ನನ್ನ ಬಗ್ಗೆ ವಿಶೇಷ ಕಾಳಜಿ ಹಾಗೂ ಅಭಿಮಾನವನ್ನ ಇಟ್ಟುಕೊಂಡಿದ್ದೀರಾ. ನೀವು ತುಂಬಾ ಆಸೆ ಪಟ್ಟಿದ್ದಿರೀ, ನನಗೂ ಸಹ ತುಂಬಾ ಆಸೆ ಇತ್ತು. ನನ್ನ ಸೆಲೆಬ್ರಿಟಿಗಳನ್ನ ಭೇಟಿ ಮಾಡಿ ಥ್ಯಾಂಕ್ಸ್‌ ಹೇಳಬೇಕು ಅಂತ ನನಗೂ ಆಸೆ ಇತ್ತು.

ಪ್ರತಿ ಸರಿಯೂ ನಾನು ನಿಮಗೆ ಥ್ಯಾಂಕ್ಸ್‌ ಹೇಳುತ್ತಿದ್ದೆ. ಆದರೆ, ಈ ಬಾರಿ ಆರೋಗ್ಯ ಸಮಸ್ಯೆ ಇದೆ. ನನಗೆ ತುಂಬಾ ಹೊತ್ತು ನಿಲ್ಲಲು ಆಗುವುದಿಲ್ಲ. ಹೀಗಾಗಿ ನಾನು ನಿಮ್ಮ ಭೇಟಿ ಮಾಡಲು ಕಷ್ಟವಾಗಲಿದೆ ಎಂದು ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಇಂತಿ ನಿಮ್ಮ ದಾಸ ದರ್ಶನ್ ಎಂದು ಹೇಳಿದ್ದಾರೆ.

ನನಗೆ ಯಾವ ಆರೋಗ್ಯ ಸಮಸ್ಯೆ ಇದೆ ಅಂತ ನಿಮಗೂ ಗೊತ್ತು. ಆಪರೇಷನ್‌ ನಾನು ಮಾಡಿಸಲೇ ಬೇಕು. ನಾನು ಕೆಲವು ಸಿನಿಮಾಗಳನ್ನ ಒಪ್ಪಿಕೊಂಡಿದ್ದೇನೆ. ಇಷ್ಟು ದಿನ ನನಗಾಗಿ ಕಾದಿದ್ದಾರೆ. ನಾನು ಸಹ ಈ ಸಂದರ್ಭದಲ್ಲಿ ನಿರ್ಮಾಪಕರಿಗೂ ಧನ್ಯವಾದವನ್ನ ಹೇಳುತ್ತೇನೆ. ನಾನು ಮುಂದಿನ ದಿನಗಳಲ್ಲಿ ನಿಮ್ಮನ್ನ ಭೇಟಿ ಮಾಡುತ್ತೇನೆ. ಖಂಡಿತವಾಗಿಯೂ ನಾನು ನಿಮ್ಮನ್ನ ಭೇಟಿ ಮಾಡೇ ಮಾಡುತ್ತೇನೆ. ನನ್ನ ಸೆಲೆಬ್ರಿಟಿಗಳು ಯಾವುದೇ ಕಾರಣಕ್ಕೂ ಯಾವುದೇ ಕಾರಣಕ್ಕೂ ಮಾತುಗಳಿಗೆ ಕಿವಿಕೊಡ್ಬೇಡಿ ಎಂದು ನಟ ದರ್ಶನ್‌ ಕಿವಿಮಾತು ಹೇಳಿದ್ದಾರೆ.

ನನಗೆ ಬೆನ್ನು ನೋವು ಇದೆ. ತುಂಬಾ ಹೊತ್ತು ನಿಲ್ಲೋಕೆ ಆಗಲ್ಲ. ಈ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದೊಂದು ವರ್ಷ ಕ್ಷಮಿಸಿಬಿಡಿ. ನಿಮಗೆ ಧನ್ಯವಾದ ಹೇಳಬೇಕು ಎನ್ನುವ ಆಸೆ ನನಗೂ ಇದೆ ಎಂದು ನಟ ದರ್ಶನ್‌ ಅವರು ಮನವಿ ಮಾಡಿದ್ದಾರೆ.

ಈ ಮೂರು ಜನಕ್ಕೆ ನಾನು ಧನ್ಯವಾದವನ್ನ ಹೇಳಬೇಕು. ನಮ್ಮ ಹೀರೋ ಧನ್ವಿರ್‌ಗೆ ಧನ್ಯವಾದ ಹೇಳುತ್ತೇನೆ. ನನ್ನ ಎಲ್ಲಾ ಕಷ್ಟಕ್ಕೂ ಧನ್ವಿರ್‌ ಜೊತೆಯಾಗಿದ್ದಾರೆ. ಬುಲ್‌ ಬುಲ್‌ ರಚಿತ ರಾಮ್‌, ನನ್ನ ಪ್ರಾಣ ಸ್ನೇಹಿತೆ ರಕ್ಷಿತ್‌ಗೆ ಧನ್ಯವಾದ ಹೇಳಿದ್ದೇನೆ. ನನ್ನ ಎಲ್ಲಾ ಸೆಲೆಬ್ರಿಟಿಗಳಿಗೂ ಧನ್ಯವಾದ ಹೇಳುತ್ತೇನೆ. ಕೇವಲ ಧನ್ಯವಾದ ಅಂದ್ರೆ ತುಂಬಾ ಚಿಕ್ಕ ಪದವಾಗುತ್ತದೆ ಎಂದು ನಟ ದರ್ಶನ್‌ ಹೇಳಿದ್ದಾರೆ.

ಇದಲ್ಲದೇ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ವಾಪಸ್ಸು ನೀಡಿರುವುದಕ್ಕೆ ಸಂಬಂಧಪಟ್ಟ ಕ್ಲಾರಿಟಿ ನೀಡಿದ ನಟ ದರ್ಶನ್‌ ಅವರು, ನಿರ್ಮಾಪಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಹಣವನ್ನು ವಾಪಸ್ಸುಕೊಟ್ಟಿರುವೆ. ಇದಲ್ಲದೇ ಪ್ರೇಮ್‌ ಅವರೊಂದಿಗೆ ಸಿನಿಮಾ ಮಾಡುವುದಾಗಿ ನಟ ದರ್ಶನ್‌ ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+