ಬೇರೆ ಭಾಷೆಗಳ ಸಿನಿಮಾ ಮಾಡ್ತಾರಾ ನಟ ದರ್ಶನ್;‌ ಕೊನೆಗೂ ಮೌನ ಮುರಿದ ದಾಸ Darshan Thoogudeepa

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಜೈಲಿನಿಂದ ಹೊರ ಬಂದ ಬಳಿಕ ನಟ ದರ್ಶನ್ ಮೊದಲ ಬಾರಿಗೆ ಕ್ಯಾಮಾರಾ ಮುಂದೆ ಬಂದಿದ್ದು, ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಅಲ್ಲದೇ ಹಲವು ಗೊಂದಲಗಳಿಗೆ ನಟ ದರ್ಶನ್‌ ಅವರು ತೆರೆ ಎಳೆದಿದ್ದಾರೆ.

ದರ್ಶನ್ ಬೇರೆ ಭಾಷೆಗೆ ಹೋಗ್ತಾರಾ ಎಂಬ ಊಹಾಪೋಹ ಇದೆ. ಈ ಕುರಿತು ವಿಡಿಯೋದಲ್ಲಿ ಮಾತನಾಡಿದ ನಟ ದರ್ಶನ್‌ ಅವರು, ನಾನು ಸಾಯೋವರೆಗೂ ಇಲ್ಲೇ ಇರ್ತೀನಿ. ಇಲ್ಲಿ ಬಿಟ್ಟು ಇನ್ನೆಲ್ಲೂ ಹೋಗೋಕೆ ಆಗಲ್ಲ. ಕಾವೇರಿ ಹುಟ್ಟಿರುವ ಕೊಡಗಿನಲ್ಲೇ ನಾನೂ ಹುಟ್ಟಿರೋದು. ನಾನು ಏನೇ ಸಿನಿಮಾ ಮಾಡಿದರೂ ಇಲ್ಲೇ ಮಾಡೋದು. ಕನ್ನಡ ಸಿನಿಮಾವನ್ನೇ ನಾನು ಮಾಡೋದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

Actor Darshan said he will not do films in other languages

ಇನ್ನೂ ಅಭಿಮಾನಿಗಳ ಕುರಿತು ಮಾತನಾಡಿರುವ ನಟ ದರ್ಶನ್‌ ಅವರು, ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನ ಮೇಲೆ ಇರೋದಕ್ಕೆ ನಾನು ಯಾವತ್ತೂ ಚಿರಋಣಿ. ನಮ್ಮ ಜೊತೆ ಯಾವಾಗಲೂ ಇದ್ದು ಮಾರಲ್ ಸಪೋರ್ಟ್‌ ಆಗಿದ್ದ ನಮ್ಮ ಹೀರೋ ಧನ್ವೀರ್‌ಗೆ ಥ್ಯಾಂಕ್ಸ್. 'ಬುಲ್‌ಬುಲ್‌' ರಚಿತಾ ರಾಮ್‌ಗೆ ಥ್ಯಾಂಕ್ಸ್. ನನ್ನ ಪ್ರಾಣ ಸ್ನೇಹಿತೆಯಾದ ರಕ್ಷಿತಾಗೂ ಥ್ಯಾಂಕ್ಸ್. ನನ್ನೆಲ್ಲಾ ಸೆಲೆಬ್ರಿಟಿಗಳಿಗೂ ಅನಂತ ಅನಂತ ಧನ್ಯವಾದಗಳು ಎಂದು ನಟ ದರ್ಶನ್‌ ಅವರು ತಿಳಿಸಿದ್ದಾರೆ.

ನಾನು ಮತ್ತು ಪ್ರೇಮ್‌ ಖಂಡಿತ ಒಟ್ಟಿಗೆ ಸಿನಿಮಾ ಮಾಡೇ ಮಾಡ್ತೀವಿ. ಯಾಕಂದ್ರೆ, ಅದು ನನ್ನ ಸ್ನೇಹಿತೆ ರಕ್ಷಿತಾ ಆಸೆ. ಖಂಡಿತ ನಾವು ಸಿನಿಮಾ ಮಾಡೇ ಮಾಡ್ತೀವಿ. ಕೆವಿಎನ್‌ ಪ್ರೊಡಕ್ಷನ್‌ ಅವರು ಈಗಾಗಲೇ ಒಂದು ಸಿನಿಮಾಗೆ ಕೈ ಹಾಕಿದ್ದಾರೆ. ಅದು ಮುಗಿಯಲಿ ಅಂತಷ್ಟೇ. ಇನ್ನೇನೂ ಇಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಪಷ್ಟನೆ ನೀಡಿದ್ದಾರೆ.

ಸೂರಪ್ಪ ಬಾಬು ಅವರಿಗೆ ದುಡ್ಡು ವಾಪಸ್ ಕೊಟ್ಟೆ. ಯಾಕಂದ್ರೆ, ಅವರು ನನ್ನ ಬಳಿ ಸಿನಿಮಾ ಮಾಡೋಕೆ ಬಂದಾಗ ತುಂಬಾ ಕಮಿಟ್‌ಮೆಂಟ್ಸ್ ಇಟ್ಟುಕೊಂಡಿದ್ದರು. ಆದರೆ, ನಡೆದಿದ್ದೆಲ್ಲಾ ನಿಮಗೂ ಗೊತ್ತು. ಟೈಮ್‌ ಎಲ್ಲಾ ವೇಸ್ಟ್ ಆಗೋಯ್ತು. ಈ ಟೈಮ್‌ನಲ್ಲಿ ನಾನು ಅವರ ದುಡ್ಡನ್ನ ಇಟ್ಟುಕೊಂಡಿದ್ದರೆ, ಅವರ ಕಮಿಟ್‌ಮೆಂಟ್ಸ್ ಇನ್ನೂ ಜಾಸ್ತಿ ಆಗುತ್ತದೆ. ಅದಕ್ಕಾಗಿ ಅವರ ಕಮಿಟ್‌ಮೆಂಟ್ಸ್ ಮುಗಿಸಿಕೊಳ್ಳಲಿ ಅಂತ ದುಡ್ಡು ವಾಪಸ್ ಕೊಟ್ಟೆ. ಮುಂದೆ ಒಳ್ಳೆಯ ಸಬ್ಜೆಕ್ಟ್ ಸಿಕ್ಕರೆ, ಖಂಡಿತ ಒಟ್ಟಿಗೆ ಸಿನಿಮಾ ಮಾಡ್ತೀವಿ ಅಂತ ನಟ ದರ್ಶನ್‌ ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನೂ ನಟ ದರ್ಶನ್ ರಚಿತಾ ಅವರಿಗೆ ಧನ್ಯವಾದ ತಿಳಿಸಿರುವ ರಚಿತಾ ರಾಮ್ ಅವರು, ದರ್ಶನ್‌ ಅವರ ಆ ವಿಡಿಯೋವನ್ನ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿರೋ ಅವರು 'ದರ್ಶನ್ ಬಾಸ್' ಎಂದು ಕೈ ಮುಗಿಯುತ್ತಿರುವ ಎಮೋಜಿಯನ್ನು ಹಾಕಿದ್ದಾರೆ. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ದರ್ಶನ್‌ ಅವರು ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ. ಅವರು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ನಂಬಲು ಸ್ವಲ್ಪ ಕಷ್ಟ ಆಗುತ್ತಿದೆ. ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ ಎಂದು ರಚಿತಾ ಪೋಸ್ಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+