ದರ್ಶನ್, ಸುದೀಪ್ ಫ್ಯಾನ್ಸ್ ವಾಕ್ ಸಮರದ ನಡುವೆ ಡೆವಿಲ್ ಸಿನಿಮಾದ 10,500 ಪೈರಸಿ ಲಿಂಕ್‌ಗಳ ಡಿಲೀಟ್
Actor Darshan Thoogudeepa: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆಕಂಡಿದ್ದು, ಇಂದಿಗೆ 12ನೇ ದಿನಕ್ಕೆ ಕಾಲಿಟ್ಟಿದೆ. ಈ ಸಿನಿಮಾವವನ್ನು ಗೆದ್ದೇ ಗೆಲ್ಲಿಸುತ್ತೇವೆ ಎಂದು ಅಭಿಮಾನಿಗಳು ದೃಢ ನಿರ್ಧಾರ ಮಾಡಿದ್ದರು. ಮತ್ತೊಂದೆಡೆ, ಇದೀಗ ಪೈರಸಿ ಕಾರಣದಿಂದ ಸಿನಿಮಾಗೆ ಹೊಡೆತ ಬಿದ್ದಂತಾಗಿದೆ.
ದರ್ಶನ್ ಜೈಲಿನಲ್ಲಿರುವಾಗ ತೆರೆ ಕಂಡಿರುವ 2ನೇ ಸಿನಿಮಾ ಇದಾಗಿದ್ದು, ಆರಂಭದಲ್ಲಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವ ಲೆಕ್ಕದಲ್ಲಿ ಇತ್ತು. ಅಭಿಮಾನಿಗಳು ಸಹ ಸಿನಿಮಾನ ಗೆಲ್ಲಿಸಲು ಪಣತೊಟ್ಟರು. ಆದರೆ, ಯಾರೋ ಕಿಡಿಗೇಡಿಗಳು ಮಾಡಿದ ಪೈರಸಿಯಿಂದ ಸಿನಿಮಾಗೆ ಸ್ವಲ್ಪ ಪ್ರಮಾಣದಲ್ಲಿ ಹೊಡೆತ ಬಿದ್ದಂತಾಗಿದೆ. ಇದೀಗ ಇಡೀ ಚಿತ್ರರಂಗಕ್ಕೆ ಇದೇ ಪೈರಸಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪೈರಸಿ ಲಿಂಕ್‌ಗಳ ಡಿಲೀಟ್: ಸದ್ಯ ನಟ ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ ನಡುವೆ ಮಾತಿನ ಸಮರ ಏರ್ಪಟ್ಟಿದೆ. ಈ ನಡುವೆಯೇ ಡೆವಿಲ್ ಚಿತ್ರತಂಡ ಈ ಪೈರಸಿ ಕುರಿತು ಪೋಸ್ಟ್‌ವೊಂದನ್ನ ಹಂಚಿಕೊಂಡಿದೆ. ಪೈರಸಿ ಇಂದು ವೈರಸ್‌ನಂತೆ ಹಬ್ಬುತ್ತಿದೆ. ಈವರೆಗೂ 10,500ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ತೆಗೆದುಹಾಕುವ ಕೆಲಸ ನಡೆದಿದೆ. ದಯವಿಟ್ಟು ಯಾರೂ ಪೈರಸಿ ಮಾಡಬೇಡಿ, ಸಿನಿಮಾವನ್ನ ಥಿಯೇಟರ್‌ಗೆ ಹೋಗಿ ನೋಡಿ ಎಂದು ಡೆವಿಲ್ ಚಿತ್ರತಂಡ ಮನವಿ ಮಾಡಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡಮಟ್ಟಿದೆ ಪೈರಸಿ ಆಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಕಲೆಕ್ಷನ್‌ನಲ್ಲಿ ಸುಧಾರಣೆ: ಇದೀಗ ಸದ್ಯ ಸೋಮವಾರ ಅಂದರೆ ಡಿಸೆಂಬರ್ 22ರಿಂದ ಡೆವಿಲ್ ಸಿನಿಮಾ ಕಲೆಕ್ಷನ್‌ನಲ್ಲಿ ಸುಧಾರಣೆ ಕಾಣುತ್ತಿದೆ. ಪೈರಸಿ ಮಾಡಿದರೆ, ಕನ್ನಡ ಚಿತ್ರೋದ್ಯಮಕ್ಕೆ ಹೊಡೆತ ಬೀಳಲಿದೆ. ಆದ್ದರಿಂದ ಇನ್ಮೇಲಾದರೂ ದಯವಿಟ್ಟು ಎಲ್ಲಾ ಸಿನಿಮಾಗಳನ್ನು ಎಲ್ಲರೂ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ ಎಂದು ಡೆವಿಲ್ ಚಿತ್ರತಂಡ ಮನವಿ ಮಾಡಿಕೊಂಡಿದೆ.
ಡೆವಿಲ್ ಚಿತ್ರತಂಡದ ಮನವಿ ಏನು?: ಇದೀಗ ಸದ್ಯ ಸೋಮವಾರ ಅಂದರೆ ಡಿಸೆಂಬರ್ 22ರಿಂದ ಡೆವಿಲ್ ಸಿನಿಮಾ ಕಲೆಕ್ಷನ್‌ನಲ್ಲಿ ಸುಧಾರಣೆ ಕಾಣುತ್ತಿದೆ. ಪೈರಸಿ ಮಾಡಿದರೆ, ಕನ್ನಡ ಚಿತ್ರೋದ್ಯಮಕ್ಕೆ ಹೊಡೆತ ಬೀಳಲಿದೆ. ಆದ್ದರಿಂದ ಇನ್ಮೇಲಾದರೂ ದಯವಿಟ್ಟು ಎಲ್ಲಾ ಸಿನಿಮಾಗಳನ್ನು ಎಲ್ಲರೂ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ ಎಂದು ಡೆವಿಲ್ ಚಿತ್ರತಂಡ ಮನವಿ ಮಾಡಿಕೊಂಡಿದೆ.
ಡೆವಿಲ್ ಸಿನಿಮಾ ಬಿಡುಗಡೆಯಾದ ಮೊದಲನೇ ದಿನವೇ ದಾಖಲೆ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗಲೂ ಕೂಡ ಸೌಂಡ್ ಜೋರಾಗಿದೆ. ಆದ್ರೆ, ಪೈರಸಿ ಕಾಟದಿಂದ ಕಲೆಕ್ಷನ್‌ನಲ್ಲಿ ತುಸು ಕುಸಿತ ಕಂಡಿತ್ತು. ಆದರೆ, ಇದೀಗ 11ನೇ ದಿನದಿಂದ ಸುಧಾರಣೆ ಕಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ ಕೆಲಸ ದಿನ ಸಿನಿಮಾದ ಕಲೆಕ್ಷನ್ ಕೋಟಿ ಲೆಕ್ಕದಲ್ಲೆ ಹಣ ಬಾಚಿತ್ತು. ಆದ್ರೆ 5ನೇ ದಿನದಿಂದ ಬಾಕ್ಸಾಫೀಸ್ ಕಲೆಕ್ಷನ್ ಕುಸಿತ ಕಾಣುತ್ತ ಬಂದಿದೆ. ಇದೀಗ ಪೈರೈಸಿ ಲಿಂಕ್‌ಗಳನ್ನು ತೆಗೆದುಹಾಕಲಾಗಿದ್ದು, ಇದರಿಂದ ಕಲೆಕ್ಷನ್‌ನಲ್ಲಿ ಮತ್ತಷ್ಟು ಸುಧಾರಣೆ ಕಾಣಲಿದೆ.
ಮೂಲಗಳ ಪ್ರಕಾರ, ಡೆವಿಲ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 11ನೇ ದಿನ 1.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 10ನೇ ದಿನ 71 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರಿಂದಲೇ ತಿಳದುಕೊಳ್ಳಬಹುದು. ಕುಸಿತ ಕಂಡಿದ್ದ ಕಲೆಕ್ಷನ್ ಇದೀಗ ಮತ್ತೆ ಏರುಮುಖ ಮಾಡಿದೆ ಎಂದು. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ. ಯಾವುದೇ ಕನ್ನಡದ ಸಿನಿಮಾಗಳು ಬರಲಿ, ಥಿಯೇಟರ್‌ಗೆ ಹೋಗಿ ವೀಕ್ಷಣೆ ನೋಡಿ. ಈ ಮೂಲಕ ಕನ್ನಡ ಚಿತ್ರರಂಗವನ್ನು ಬೆಳೆಸಿ, ಹಾರೈಸಿ ಎನ್ನುವುದೇ ಚಿತ್ರತಂಡದ ಮನವಿಯಾಗಿದೆ.












Click it and Unblock the Notifications