ಜೈಲ್ಲಿನಲ್ಲಿ ನಟ ದರ್ಶನ್‌ ರಾಜಾತಿಥ್ಯದ ಫೋಟೋ ಫೇಕ್‌.. ಅದು ಎಡಿಟ್‌ ಆಗಿದೆ: ನಿರ್ದೇಶಕ ನಂದ ಕಿಶೋರ್‌

Director Nanda Kishore: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಜೈಲು ಸೇರಿ 2 ತಿಂಗಳುಗಳು ಕಳೆದಿವೆ. ಇನ್ನು ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ ರಾಜಾತಿಥ್ಯದ ಫೋಟೋ ಇದೀಗ ಭಾರೀ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೆಲವರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹಾಗೆಯೇ ನಿರ್ದೇಶಕ ನಂದಕಿಶೋರ್ ಪ್ರತಿಕ್ರಿಯಿಸಿದ್ದು, ಅವರಯ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ರೆಸಾರ್ಟ್‌ ರೀಯಲ್ಲೇ ಟೇಬಲ್‌ ಮಧ್ಯ ಇಟ್ಟುಕೊಂರು ಚೇರ್‌ ಮೇಲೆ ನಟ ದರ್ಶನ್‌ ವಿಲ್ಸನ್‌ ಗಾರ್ಡ್‌ನ್‌ ನಾಗ, ಕುಳ್ಳ ಸೀನ, ಆರೋಪಿ ನಾಗರಾಜ್ ಜೊತೆ ಕುಳಿತುಕೊಂಡು ಒಂದು ಕೈಯಲ್ಲಿ ಸಿಗರೇಟ್‌, ಮಯತ್ತೊಂದು ಕೈಯಲ್ಲಿ ಮಗ್‌ ಹಿಡಿದು ದೌಲತ್ತಿನಿಂದ ಕುಳಿತುಕೊಂಡಿರುವ ಫೋಟೋ ಭಾರೀ ವೈರಲ್‌ ಆಗಿದ್ದು, ಇದೀಗ ಇದು ಸಂಚಲನ ಸೃಷ್ಟಿದೆ. ಅಷ್ಟೇ ಅಲ್ಲದೆ, ದರ್ಶನ್‌ ಸೊರಗಿ ಹೋಗಿದ್ದಾರೆ ಅಂತಾ ಹೇಳುತ್ತಿದ್ದವರ ಮಾತುಗಳೆಲ್ಲ ಸುಳ್ಳು ಆದಂತಾಗಿದೆ.

Actor Darshan Luxury life photo is Fake in jail says Director Nanda Kishore

"ಇದೀಗ ಈ ಬಗ್ಗೆ ನಿರ್ದೇಶಕ ನಂಕಿಶೋರ್‌ ಮಾತನಾಡಿದ್ದು, ಜೈಲಿನ ಆವರಣದಲ್ಲಿ ಕುರ್ಚಿ ಮೇಲೆ ಸ್ನೇಹಿತರೊಂದಿಗೆ ಆರಾಮಾಗಿ ಕುಳಿತುಕೊಂಡು ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೊ ವೈರಲ್‌ ಆಗಿರುವುದು ನಿಜ ಆಗಿರಬಹುದು ಎನ್ನುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಅದು ನಿಜ ಎಂದು ನಾನು ನಂಬುವುದಿಲ್ಲ. ಈಗ ತಂತ್ರಜ್ಞಾನ ಬಳಸಿ ಪೋಟೊವನ್ನು ಹೇಗೆ ಬೇಕಾದರೂ ಎಡಿಟ್‌ ಮಾಡಬಹುದು ಎಂದು ನಾನೊಬ್ಬ ನಿರ್ದೇಶಕನಾಗಿ ಹೇಳಬಲ್ಲೆ," ಎಂದು ಹೇಳಿದ್ದಾರೆ.

ಇನ್ನು ನಟ ದರ್ಶನ್‌ ರಾಜಾತಿಥ್ಯದ ಫೋಟೋ, ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್‌ ಮಾಡಿರುವ ವೀಡಿಯೊ ವೈರಲ್‌ ಆದ ನಂತರ ಎಚ್ಚೆತ್ತುಕೊಂಡ ಸರ್ಕಾರ, ಜೈಲರ್‌ ಶರಣಬಸಪ್ಪ ಅಮೀನ್‌ ಗಢ, ಪ್ರಭು ಎಸ್‌, ಅಸಿಸ್ಟೆಂಟ್‌ ಜೈಲರ್‌ ತಿಪ್ಪೆಸ್ವಾಮಿ, ಶ್ರೀಕಾಂತ್‌, ಹೆಡ್‌ ವಾರ್ಡರ್‌ ವೆಂಕಪ್ಪ ಕುರ್ತಿ, ಸಂಪತ್‌ ಕುಮಾರ್‌, ವಾರ್ಡರ್‌ ಬಸಪ್ಪ ತೇಲಿರಿ ಎಂಬ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇಷ್ಟು ದಿನ ಜೈಲಿನಲ್ಲಿ ನಟ ದರ್ಶನ್‌ ಭೇಟಿ ಮಾಡಿಬಂದವರೆಲ್ಲ ದರ್ಶನ್‌ ಸೊರಗಿ ಹೋಗಿದ್ದಾರೆ. ಅವರು ತುಂಬಾ ಪಶ್ಚಾತಾಪ ಪಡುತ್ತಿದ್ದಾರೆ. ಊಟಾನೆ ಮಾಡುತ್ತಿಲ್ಲ ಅಂತಲೂ ಹೇಳಿದವರೂ ಇದ್ದಾರೆ. ಆದರೆ ಇದೀಗ ಈ ರಾಜಾತಿಥ್ಯದ ಫೋಟೋವನ್ನು ಗಮನಿಸುತ್ತಿದ್ದರೆ, ನಟ ದರ್ಶನ್‌ ಯಾವುದೇ ಪಶ್ಚಾತಾಪವಿಲ್ಲದೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾನ್‌ ಆಗಿದ್ದಾರೆ ಎಂದು ಹೇಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+