Darshan Thoogudeepa: ಬಳ್ಳಾರಿ ಜೈಲಾಧಿಕಾರಿಗಳ ಒಂದೇ.. ಒಂದು ಆವಾಜ್‌ಗೆ ದಾಸ ಗಪ್‌ಚುಪ್‌-ನಟ ದರ್ಶನ್‌ ಬೇಡಿಕೆಯೇನು?

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಳ್ಳಾರಿ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಈಗಾಗಲೇ ದರ್ಶನ್‌ ಇಟ್ಟಿದ್ದ ಹಲವು ಬೇಡಿಕೆಗಳು ಈಡೇರಿದ್ದು, ಬಳಿಕ ಮತ್ತೊಂದು ಬೇಡಿಕೆಯನ್ನಿಟ್ಟಿದ್ದರು. ಇದಕ್ಕೆ ತಿರಸ್ಕರಿಸಿದ್ದಕ್ಕೆ ಜೈಲಾಧಿಕಾರಿಗಳ ವಿರುದ್ಧ ಎಗರಾಡಿದ್ದನಂತೆ ಸ್ವಾಮಿ. ಬಳಿಕ ಆಗಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ದರ್ಶನ್ ಒಂದು ವಾರದಿಂದಲೂ ಕುಳಿತುಕೊಳ್ಳಲು ನನಗೆ ಕುಳಿತುಕೊಳ್ಳಲು ಚೇರ್‌ ಬೇಕು ಎಂದು ಹಠ ಹಿಡಿದ್ದ ದರ್ಶನ್‌ಗೆ ಬಳ್ಳಾರಿ ಜೈಲಾಧಿಕಾರಿಗಳು ಕೊಟ್ಟ ಉತ್ತರ ಮಾತ್ರ ಖಡಕ್‌ ಆಗಿಯೇ ಇತ್ತಂತೆ. ಜೈಲಾಧಿಕಾರಿಗಳ ಒಂದೇ ಅವಾಜ್‌ಗೆ ಹಾರಾಡುತ್ತಿದ್ದ ನಟ ದರ್ಶನ್‌ ಸುಮ್ಮನೆ ಆಗಿಬಿಟ್ಟನಂತೆ. ಹಾಗಾದರೆ ಏನೆಲ್ಲಾ ಆಯ್ತು ಎಂದು ಇಲ್ಲಿ ತಿಳಿಯಿರಿ.

Actor Darshan is silent to Ballari Jail officials reaction

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಕುಳಿತು ರೆಸಾರ್ಟ್‌ ರೀತಿಯಲ್ಲೇ ರೌಂಡ್‌ ಟೇಬಲ್‌ ಪಾರ್ಟಿ ಮಾಡುವ ಮೂಲಕ ಒಂದು ಕೈಯಲ್ಲಿ ಸಿಗರೇಟ್‌ ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹರಟೆ ಹೊಡೆದಿರುವ ಫೋಟೋ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ದರ್ಶನ್‌ ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್‌ ಮಾಡಿ ರೌಡಿಶೀಟರ್‌ಗಳ ಜೊತೆ ಮಾತನಾಡಿರುವ ವಿಡಿಯೋ ವೈರಲ್‌ ಆಗಿದ್ದು, ಇದಕ್ಕೆ ಆಕ್ರೋಶಗಳು ಭುಗಿಲೆದ್ದಿದ್ದವು.

ಬಳಿಕ ಎಚ್ಚತ್ತ ಸರ್ಕಾರ ಪರಪ್ಪನ ಅಗ್ರಹಾರ ಜೈಲಿನ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಿತ್ತು. ಮತ್ತೊಂದೆಡೆ ಕೋರ್ಟ್‌ ಆದೇಶದ ಮೇರೆಗೆ ಪೊಲೀಸರು ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದರು. ಉಳಿದ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಿದರು. ಇನ್ನು ಇದೀಗ ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಪರದಾಡುತ್ತಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ಚೇರ್‌​ಗೆ ಬೇಡಿಕೆ ಇಟ್ಟಿದ್ದು, ಈ ವಿಚಾರವನ್ನು ಅವರು ಕೋರ್ಟ್​ ಎದುರು ಪ್ರಸ್ತಾಪ ಮಾಡಿದ್ದರು. ಈ ವೇಳೆ ಜಡ್ಜ್​ ಕುರ್ಚಿ ನೀಡಲು ಸೂಚನೆ ಕೊಟ್ಟಿದ್ದರು. ಆದರೂ ಚೇರ್ ಏಕೆ ಕೊಟ್ಟಿಲ್ಲ ಎಂದು ಜೈಲಧಿಕಾರಿಗಳ ವಿರುದ್ಧ ದರ್ಶನ್ ಕೋಪಗೊಂಡಿದ್ದಾರೆ. ಆಗ ದರ್ಶನ್‌ಗೆ ಜೈಲಾಧಿಕಾರಿಗಳು "ಕೋರ್ಟ್‌ನ ಅಧಿಕೃತ ಆದೇಶ ಬಂದ ಬಳಿಕವೇ ಚೇರ್ ನೀಡಲಾಗುತ್ತದೆ," ಎಂದು ಜೈಲಧಿಕಾರಿಗಳು ತಿರುಗೇಟು ನೀಡಿದ್ದಾರೆ.

ಬಳಿಕ ಜೈಲಾಧಿಕಾರಿಗಳ ಆವಾಜ್‌ಗೆ ದರ್ಶನ್​ ಸಪ್ಪೆ ಮುಖ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ವಿಚಾರಣಾಧೀನ ಕೈದಿಗಳಿಗೆ ಕೆಲ ಅವಶ್ಯಕ ವಸ್ತುಗಳನ್ನು ಕೊಡಬಹುದಾದ ನಿಯಮಗಳಿವೆ. ಆದರೆ ಎಲ್ಲದಕ್ಕೂ ಕೋರ್ಟ್​ ಆದೇಶ ಬೇಕೆಂದು ಬಳ್ಳಾರಿ ಸೆಂಟ್ರಲ್ ಜೈಲಾಧಿಕಾರಿಗಳ ಹೇಳುತ್ತಿದ್ದಾರೆ. ಇನ್ನು ಬಳ್ಳಾರಿ ಸೆಂಟ್ರಲ್ ಜೈಲಿನ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಕೊಲೆ ಆರೋಪಿ ದರ್ಶನ್ ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+