Darshan Thoogudeepa: 'ಹೆಂಡತಿ,ಮಗ, ತಾಯಿ, ತಮ್ಮನಿಗಾಗಿ ಮುಂದಿನ ಬದುಕನ್ನು ಮೀಸಲಿಡಿ' ದರ್ಶನ್ ಗೆ ಅಭಿಮಾನಿ ಪತ್ರ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ, ಆರು ತಿಂಗಳು ಬಳಿಕ ಜಾಮೀನಿನ ಮೇಲೆ ನಟ ದರ್ಶನ್ ಬಿಡುಗಡೆಯಾಗಿದ್ದಾರೆ. ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ A2 ಆರೋಪಿಯಾಗಿ ಜೈಲು ಸೇರಿದ್ದು ಎಲ್ಲಾರಿಗೂ ಗೊತ್ತೆ ಇದೆ. ದರ್ಶನ್ ಜೈಲು ಸೇರಿದ ಸಂದರ್ಭದಲ್ಲಿ ಅದೆಷ್ಟೋ ಅಭಿಮಾನಿಗಳು ದಾಸ ಬಿಡುಗಡೆಯಾಗಿ ಬರಲಿ ಎಂದು ದೇವರಿಗೆ ವಿಭಿನ್ನವಾಗಿ ಹರಕೆಗಳನ್ನ ಕಟ್ಟಿಕೊಂಡಿದ್ದರು.
ಇದೀಗ ಆರು ತಿಂಗಳ ಬಳಿಕ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಬಹುತೇಕ ಎಲ್ಲರಿಗೂ ಜಾಮೀನು ದೊರಕಿದೆ. ದರ್ಶನ್ ಜೈಲು ಸೇರಿದಾಗ ಅದೆಷ್ಟೋ ಅಭಿಮಾನಿಗಳು ತಲೆಮೇಲೆ ಹೊತ್ತು ಮೆರೆಸಿದ್ದಾರೆ. ದಾಸನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ್ರು ಸಹ, ಲಕ್ಷಾಂತರ ಅಭಿಮಾನಿಗಳು ದಾಸನ ಬೆಂಬಲಕ್ಕೆ ನಿಂತಿದ್ದು, ಎಲ್ಲಾರಿಗೂ ಗೊತ್ತಿರುವ ವಿಚಾರವೇ. ಆದರೆ ಫ್ಯಾನ್ಸ್‌ಗಳ ನಡುವೆ ಹೀಗೊಂದು ಅಭಿಮಾನದ ಪತ್ರ ಸಕತ್ ವೈರಲ್ ಆಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ ನಟ ದರ್ಶನ್ ಅವರನ್ನ ಕೆಲವರು ಸಮರ್ಥಿಸಿಕೊಂಡರು. ಇನ್ನೂ ಕೆಲವರು ಜೈಲಿನಿಂದ ಹೊರ ಬಂದ ಮೇಲು ಸಹ ಸಮರ್ಥಿಸಿಕೊಳ್ಳುತ್ತಿದ್ದಾರೆ. ಜೈಲಿಂದ ಹೊರ ಬಂದ ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಯೊಬ್ಬರು ಬಹಿರಂಗವಾದ ಪತ್ರವೊಂದನ್ನು ಬರೆದಿದ್ದಾರೆ. ಇನ್ನಾದರೂ ನನ್ನ ನಂಬಿಕೆಯನ್ನು ನೀವು ಉಳಿಸಿಕೊಳ್ತೀರಾ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ನಟ ದರ್ಶನ್ ಅವರ ಬಹುಕಾಲದ ಅಭಿಮಾನಿ ಆಗಿರುವ 'ವಿನಯ್ ಪಾಂಡವಪುರ' (Vinay Pandavapura) ಎಂಬವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಕೇವಲ ತಮ್ಮ ಅಭಿಮಾನವನ್ನು ಮಾತ್ರ ಪ್ರದರ್ಶಿಸದೇ ಬಹಳಷ್ಟು ಪ್ರಬುದ್ಧತೆಯನ್ನು ಕೂಡ ಮೆರೆದಿದ್ದಾರೆ.
ತಮ್ಮ ಪತ್ರದಲ್ಲಿ 'ವಿನಯ್ ಪಾಂಡವಪುರ' ಅವರು 'ನನಗೆ ಈ ಕ್ಷಣಕ್ಕೆ ಇದು ತುಂಬಾನೇ ಖುಷಿಪಡುವ ಸುದ್ದಿ ಖಂಡಿತ ಹೌದು. ಆದರೆ, ಅದರ ಜೊತೆಜೊತೆಗೇ ಡಿ ಬಾಸ್ ಅವರಿಗೆ ದೊರೆತ ಪುನರ್ಜನ್ಮ ಇದು ಆಗಿರುವುದರಿಂದ ಇದನ್ನು ಪರಿಗಣಿಸಿ, ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಇಡುವಂಥ ಪ್ರತಿ ಹೆಜ್ಜೆ ಕೂಡ ಬಹಳ ಜಾಗರೂಕತೆಯಿಂದ, ಜಾಣ್ಮೆಯಿಂದ ಇಡಬೇಕು. ಮತ್ತೆ ಯಾವುದೇ ಕಾರಣಕ್ಕೂ ಈ ರೀತಿಯ ಯಾವುದೇ ಘಟನೆಗಳು ನಿಮ್ಮ ಬದುಕಿನಲ್ಲಿ ಮರುಕಳಿಸದಂತೆ ನೀವು ನೋಡಿಕೊಳ್ಳಬೇಕು ಎಂದು ಬರೆದಿದ್ದಾರೆ.
ಇದು ನನ್ನ ಮತ್ತು ನನ್ನಂತೆ ನಿಮಗೆ ಒಳ್ಳೆಯದನ್ನು ಮಾತ್ರ ಬಯಸುವ ನಿಜವಾದ ಅಭಿಮಾನಿಗಳ ಆಶಯ.. ನೀವು ತಪ್ಪು ಮಾಡಿದ್ದೀರೋ ಇಲ್ಲವೋ ಅದು ನ್ಯಾಯಾಲಯಕ್ಕೆ ಬಿಟ್ಟಿದ್ದು. ಆದರೆ ನೀವು ಈ ಘಟನೆಗೆ ಹೊಣೆಗಾರರಂತೂ ಹೌದು. ಕೆಟ್ಟ ಘಳಿಗೆ.. ನೀವು ಇಲ್ಲಿಯವರೆಗೆ ಅನುಭವಿಸಿದ್ದು ಸಾಕು... ನಾವೆಲ್ಲರೂ ನೋಡಿದ್ದೂ ಸಾಕು, ದುಃಖ ಪಟ್ಟಿದ್ದೂ ಸಾಕು.. 'ತಪ್ಪು ನಡೆಯೋದು ಸಹಜ ಕಣೋ, ತಿದ್ದಿ ನಡೆಯೋನು ಮನುಜ ಕಣೋ' ಇದೇ ನಿಮ್ಮ ಭವಿಷ್ಯದ ಮಂತ್ರವಾಗಿರಬೇಕು.
ತಾವಾಯ್ತು, ತಮ್ಮ ಪಾಡಾಯ್ತು, ಹೆಂಡತಿ, ಮಗ, ತಾಯಿ, ಮುಖ್ಯವಾಗಿ ಒಳ್ಳೆಯ ಸ್ನೇಹಿತರು.. ಒಳ್ಳೆಯ ಹವ್ಯಾಸ, ಒಳ್ಳೆಯ ಸಿನಿಮಾಗಳು ಅಂತ ಅಷ್ಟಕ್ಕೆ ಮಾತ್ರ ತಮ್ಮ ಮುಂದಿನ ದಿನಗಳನ್ನು ಮೀಸಲಿಟ್ಟುಬಿಡಿ.. ಸ್ವಾಭಿಮಾನ ಬಿಡ್ಬೇಡಿ ಮತ್ತು ನೀವು ಬೆಳೆದುಬಂದಿರುವ ದಾರಿನ ಮರಿಬೇಡಿ.. ಇದಕ್ಕಿಂತ ಹೆಚ್ಚು ಈ ಕ್ಷಣಕ್ಕೆ ನಾನೇನೂ ಹೇಳೋಕೆ ಬಯಸಲು ಇಷ್ಟಪಡುವುದಿಲ್ಲ. ನಾನು ಮೇಲೆ ಹೇಳಿರುವ ಹಾಗೆ ಮುಂದಿನ ದಿನಗಳಲ್ಲಿ ನೀವಿದ್ದು ನಂಬಿಕೆ ಉಳಿಸಿಕೊಳ್ಳುತ್ತೀರಾ ಎಂಬುದನ್ನೆ ನಾನು ನಂಬಿದ್ದೇನೆ. ಇಂತಿ ನಿಮ್ಮ ಸದಾಕಾಲದ ಅಭಿಮಾನಿ ಎಂದು ದರ್ಶನ್ ಅವರ ಅಭಿಮಾನಿ ತಮ್ಮ ಅಕೌಂಟ್ ಮೂಲಕ ಪೋಸ್ಟ್ ಮಾಡಿದ್ದಾರೆ.












Click it and Unblock the Notifications