"ಇದ್ರೆ ನೆಮ್ದಿಯಾಗ್ ಇರ್ಬೇಕ್" ಅನ್ನೋ ಡೈಲಾಗ್ ಆಯ್ತು ಡೆವಿಲ್ ಸಿನಿಮಾದ ಸಾಂಗ್!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಡೆವಿಲ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇಲ್ಲಿವರೆಗೆ ಈ ಸಿನಿಮಾದ ಪೋಸ್ಟರ್‌ಗಳು ಮಾತ್ರವೇ ಹೊರಬಂದಿತ್ತು. ಇದೀಗ ಡೆವಿಲ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗುವ ದಿನಾಂಕ ಘೋಷಣೆಯಾಗಿದೆ. ಜೊತೆಗೆ ಮೊದಲ ಹಾಡಿನ ಟೈಟಲ್ ಏನು ಎಂದೂ ಚಿತ್ರತಂಡ ರಿವೀಲ್ ಮಾಡಿದೆ. "ಇದ್ರೆ ನೆಮ್ದಿಯಾಗಿ ಇರ್ಬೇಕು" ಎಂದು ಈ ಹಿಂದೆ ದರ್ಶನ್ ಅವರ ಆಡಿಯೋ ಎಂಬುದಾಗಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಈ ಡೈಲಾಗ್‌ಗೆ ರೀಲ್ಸ್ ಕೂಡ ಮಾಡಿ ಟ್ರೆಂಡಿಂಗ್‌ನಲ್ಲಿತ್ತು. ಈಗ ಇದೇ ಡೈಲಾಗ್ ದರ್ಶನ್ ಸಿನಿಮಾದ ಹಾಡಾಗಿದೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದಾಗ ಈ ಆಡಿಯೋ ವೈರಲ್ ಆಗಿತ್ತು. ಹಲವು ವರ್ಷಗಳ ಹಿಂದೆ ದರ್ಶನ್ ಕೋಪದಿಂದ ಮಾತನಾಡಿದ್ದ ಆಡಿಯೋ ಇದು ಎಂದು ಹೇಳಲಾಗಿತ್ತು. ದರ್ಶನ್ ಫ್ಯಾನ್ಸ್ ಕೂಡ ಈ ಡೈಲಾಗ್ ಹೇಳುತ್ತಾ ಅಭಿಮಾನ ಮೆರೆಯುತ್ತಿದ್ದರು. ಈಗ ಡೈಲಾಗ್‌ಗೆ ಹೆಚ್ಚು ಕ್ರೇಜ್ ಇದ್ದ ಕಾರಣದಿಂದ ಇದೇ ಸಾಲಿನಲ್ಲಿ ಡೆವಿಲ್ ಚಿತ್ರತಂಡವು ಹಾಡನ್ನು ಹೊರತಂದಿದೆ. ಇದು ಡಿಬಾಸ್ ಫ್ಯಾನ್ಸ್‌ನ ಖುಷಿಯನ್ನು ದುಪ್ಪಟ್ಟು ಮಾಡಿದೆ.

ದರ್ಶನ್ ಜೈಲು ಸೇರಿದ್ದರಿಂದ ಡೆವಿಲ್ ಸಿನಿಮಾ ಶೂಟಿಂಗ್ ವಿಳಂಬವಾಗಿ ನಿಗದಿತ ಸಮಯಕ್ಕೆ ರಿಲೀಸ್ ಆಗಲಿಲ್ಲ. ಬಳಿಕ ದರ್ಶನ್ ಅವರು ಜಾಮೀನು ಪಡೆದು ಹೊರಬಂದಿದ್ದರಿಂದ ಕೆಲತಿಂಗಳ ನಂತರ ಶೂಟಿಂಗ್ ಮುಂದುವರಿಸಿತ್ತು. ಇನ್ನೇನು ಬಹುತೇಕ ಶೂಟಿಂಗ್ ಮುಗಿದಿದ್ದು, ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡುವುದಾಗಿ ಹೇಳಿದೆ. ಇದಕ್ಕೂ ಮುನ್ನ ಡೆವಿಲ್ ಸಿನಿಮಾದ ಮೊದಲ ಹಾಡು "ಇದ್ರೆ ನೆಮ್ದಿಯಾಗಿ ಇರ್ಬೇಕು" ಇದೇ ಆಗಸ್ಟ್ 15ರಂದು ಬಿಡುಗಡೆಯಾಗುವುದಾಗಿ ಹೇಳಿದೆ.
ಮೊದಲಿಗೆ ಈ ಸಿನಿಮಾ ಅಧಿಕೃತವಾಗಿ ಹಿಂದಿನ ವರ್ಷವೇ ರಿಲೀಸ್ ಮಾಡುವುದಾಗಿ ಘೋಷಿಸಲಾಯಿತು. 2024ರಲ್ಲಿ ದರ್ಶನ್ ಅವರ ಬಂಧನದಿಂದ ಶೂಟಿಂಗ್ ತಾತ್ಕಾಲಿಕವಾಗಿ ನಿಂತಿತ್ತು. ನಂತರ ಶೂಟಿಂಗ್ ಮುಗಿಯಿತು ಮತ್ತು ಯುರೋಪ್, ಥೈಲ್ಯಾಂಡ್‌ನಲ್ಲಿಯೂ ಕೆಲವು ಭಾಗಗಳನ್ನ ಚಿತ್ರೀಕರಿಸಲಾಗಿದೆ. ದರ್ಶನ್ ಹಾಗೂ ರಚನಾ ರೈ ಈ ಸಿನಿಮಾದಲ್ಲಿ ನಟಿಸಿದ್ದು, ತಾರಕ್ ನಿರ್ದೇಶಕ ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದ್ದು, ಇದೀಗ ಮೊದಲ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15ರಂದು 10.05ಕ್ಕೆ ಇದ್ರೆ ನೆಮ್ದಿಯಾಗಿ ಇರ್ಬೇಕು ಸಾಂಗ್ ರಿಲೀಸ್ ಆಗಲಿದೆ. ಇದು ಕೂಡ ಟ್ರೆಂಡ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಇತ್ತೀಚೆಗೆ ಜೈಮಾತಾ ಕಂಬೈನ್ಸ್ 'ದಿ ಡೆವಿಲ್' ಚಿತ್ರದ ಮೋಷನ್ ಪೋಸ್ಟರ್ ಅನ್ನು ಜುಲೈ 19 ಶನಿವಾರದಂದು ಸಂಜೆ 8 ಗಂಟೆಗೆ ಸೋಷಿಯಲ್ ಮೀಡಿಯಾ ಪೇಜ್ ಹಾಗೂ ಅತ್ತಿಬೆಲೆಯಲ್ಲಿ ಸೆಲೆಬ್ರಿಟಿಸ್‌ಗಳ ಸಮ್ಮುಖದಲ್ಲೂ ಬಿಡುಗಡೆ ಮಾಡಿತ್ತು. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಸಿಹಿಸುದ್ದಿ ನೀಡಿತ್ತು. ಇದೀಗ ಡೆವಿಲ್ ಸಿನಿಮಾದ ಮೊದಲ ಹಾಡು ಸೌಂಡ್ ಮಾಡಲು ರೆಡಿಯಾಗಿದೆ. ಕಾಟೇರ ಬಳಿಕ ದರ್ಶನ್ ಅವರ ಸಿನಿಮಾ ಬಂದು ಹಲವು ವರ್ಷಗಳಾಗಿದ್ದು, ಡೆವಿಲ್ ಸಿನಿಮಾದ ಮೇಲೆ ಕುತೂಹಲ ಹೆಚ್ಚಾಗಿದೆ.












Click it and Unblock the Notifications