Actor Darshan Thoogudeepa: ಕೊಲೆ ನಡೆದ ಸ್ಥಳದಲ್ಲಿ ನಟ ದರ್ಶನ್.!; ಪೊಲೀಸರಿಂದ ಫೋಟೋಗಳ ರಿಕವರಿ
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಬೆನ್ನು ನೋವು ಹಿನ್ನೆಲೆ ಹೈಕೋರ್ಟ್ ಇತ್ತೀಚೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ನಟ ದರ್ಶನ್‌ಗೆ ಪೊಲೀಸರು ಮತ್ತೊಂದು ಬಿಗ್ ಶಾಕ್ ನೀಡಲು ಮುಂದಾಗಿದ್ದಾರೆ. ಮಾಹಿತಿ ಇಲ್ಲಿದೆ ತಿಳಿಯಿಸಿ.
ಬೆನ್ನು ನೋವು ಹಿನ್ನೆಲೆ ನಟ ದರ್ಶನ್‌ಗೆ ಈಗಾಗಲೇ ಹೈಕೋರ್ಟ್ 6 ವಾರಗಳ ಕಾಲ ಚಿಕಿತ್ಸೆಗೆಂದು ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಆದರೆ ಇದೀಗ, ಕೊಲೆ ಪ್ರಕರಣದ ಸಂಬಂಧ ಪೊಲೀಸರು ಕೋರ್ಟ್‌ಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಮತ್ತೆರಡು ಫೋಟೋ ಸಾಕ್ಷಿಗಳನ್ನು ಸೇರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೊಲೆ ನಡೆದ ಸ್ಥಳದಲ್ಲಿ ತೆಗೆದ ಫೋಟೋ ರಿಕವರಿ ಮಾಡಲಾಗಿದ್ದು, ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ನಿಂತಿರುವ ಫೋಟೋ ಸಹ ಸಿಕ್ಕಿದೆ ಎಂದು ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳಾದ ಪುನೀತ್ ಎಂಬುವರ ಮೊಬೈಲ್‌ನಿಂದ 2 ಫೋಟೋಗಳನ್ನು ರಿಕವರಿ ಮಾಡಲಾಗಿದ್ದು, ಈ ಫೋಟೋಗಳು ದರ್ಶ್‌ನಗೆ ಮತ್ತಷ್ಟು ಸಂಕಷ್ಟ ಆಗಲಿವೆ. ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಇದ್ದರು ಎಂಬುದನ್ನು ಈ 2 ಫೋಟೋಗಳು ಸಾಬೀತು ಮಾಡಲಿದೆ ಎನ್ನಲಾಗುತ್ತಿದೆ.
ಫೋಟೋಗಳು ಸಿಕ್ಕಿದೇಗೆ?: ಪಟ್ಟಣಗೆರೆ ಶೆಡ್‌ನಲ್ಲಿ ತನ್ನ ಸಹಚರರ ಜೊತೆ ನಟ ದರ್ಶನ್ ನಿಂತಿರುವ ಫೋಟೋ ಇದಾಗಿದೆ. ಈ ವೇಳೆ ನಟ ದರ್ಶನ್ ಬ್ಲೂ ಟೀ ಶರ್ಟ್ ಹಾಗೂ ಬ್ಲ್ಯಾಕ್ ಕಲರ್ ಜೀನ್ಸ್ ಪ್ಯಾಂಟ್‌ನಲ್ಲಿ ಇರುವ ಫೋಟೋ ರಿಕವರಿ ಮಾಡಲಾಗಿದೆ. ಘಟನೆ ಬಳಿಕ ಎರಡು ಫೋಟೋಗಳನ್ನು ಪುನೀತ್ ಡಿಲೀಟ್ ಮಾಡಿದ್ದ.
ಪುನೀತ್ ಮೊಬೈಲ್ ಅನ್ನು ವಶಕ್ಕೆ ಪಡೆದ ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ಇದೀಗ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಈ 2 ಫೋಟೋಗಳನ್ನು ಸೇರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ಭವಿಷ್ಯ ಇಂದು ಏನು ಎಂದು ನಿರ್ಧಾರ ಆಗಲಿದೆ. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ನ್ಯಾ.ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ಅರ್ಜಿ ವಿಚಾರಣೆ ಆಗಲಿದೆ. ಅಲ್ಲದೆ ಈ ಪ್ರಕರಣದಲ್ಲಿ ಎರಡನೇ ಚಾರ್ಜ್ ಶೀಟ್ ಸಿದ್ದವಾಗಿದ್ದು, ಹೆಚ್ಚುವರಿ ಚಾರ್ಜ್ ಶೀಟ್‌ವನ್ನು ಪೊಲೀಸರು ಸಿದ್ಧ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಾವಿರಕ್ಕೂ ಹೆಚ್ಪುಚು ಪುಟಗಳ ಚಾರ್ಜ್ ಶೀಟ್ ಸಿದ್ದವಾಗಿದೆ ಎನ್ನಲಾಗುತ್ತಿದ್ದು, ಇದನ್ನು, ಇಂದು ಸಂಜೆ ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. 20ಕ್ಕೂ ಹೆಚ್ಚು ಸಾಕ್ಷಿಗಳು, ಹಲವು ಎಫ್‌ಎಸ್‌ಎಲ್ ವರದಿಗಳಿರುವ ಚಾರ್ಜ್ ಶೀಟ್ ಇದಾಗುದೆ ಎನ್ನಲಾಗಿದೆ.
ಇನ್ನು ಇಂದು (ನವೆಂಬರ್ 21) ನಟ ದರ್ಶನ್ ಪರವಾಗಿ ಸಿ.ವಿ.ನಾಗೇಶ್ ವಾದ ಮಂಡಿಸಲಿದ್ದು, ಜಾಮೀನು ಅರ್ಜಿಗೆ ಸರ್ಕಾರ ಪರ ಹಿರಿಯ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಲಿದ್ದಾರೆ.












Click it and Unblock the Notifications