Darshan Thoogudeep: ನಟ ದರ್ಶನ್‌ಗೆ 84 ಲಕ್ಷ ರೂಪಾಯಿ ಕಂಟಕ: ಯಾರೆಲ್ಲ ವಿಚಾರಣೆ ನಡೆಯಲಿದೆ?, ಇಲ್ಲಿದೆ ಮಾಹಿತಿ
Darshan Thoogudeep: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಒಂದಾದ ಮೇಲೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಜಾಮೀನು ಸಿಗದಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಇದೀಗ ಐಟಿ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ. ಇಂದು ಮತ್ತು ನಾಳೆ ದರ್ಶನ್ 84 ಲಕ್ಷ ರೂಪಾಯಿ ಹಣದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಈಗಾಗಲೇ "ಡಿ" ಗ್ಯಾಂಗ್‌ನ ಮೂವರಿಗೆ ಜಾಮೀನು ಮಂಜೂರಾಗಿದೆ. ಇನ್ನು ಈ ಪ್ರಕರಣದ ಎ1 ಪವಿತ್ರಾಗೌಡ & ಎ2 ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 27ಕ್ಕೆ ನಡೆಯಲಿದೆ. ಇದರ ಬೆನ್ನಲ್ಲೇ ನಟ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗಿದೆ.

ಇನ್ನು ಕೊಲೆ ಬಳಿಕ ಹಣದ ಆಮಿಷವೊಡ್ಡಿ ಕೆಲವರನ್ನು ಸೆರೆಂಡರ್ ಮಾಡಿಸಿದ್ರೆ, ಇನ್ನೂ ಕೆಲವರನ್ನು, ಸಾಕ್ಷ್ಯ ನಾಶಕ್ಕೆ ಬಳಕೆ ಮಾಡಿಕೊಂಡಿದ್ದ. ಈ ಎಲ್ಲಾದಕ್ಕೂ ದರ್ಶನ್ ಹಣದ ಡೀಲ್‌ನಲ್ಲೇ ಮುಗಿಸಿದ್ದ ಎನ್ನುವ ಆರೋಪ ಕೇಳಿಬಂದಿತ್ತು. ಬಳಿಕ ಪೊಲೀಸರು ಬರೋಬ್ಬರಿ 84,00,000 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು. ಇದೀಗ ಈ ಹಣದ ಮೂಲ ಪತ್ತೆ ಹಚ್ಚಲು ಐಟಿ ಅಧಿಕಾರಿಗಳು ನಟ ದರ್ಶನ್ ಹಾಗೂ ಸಹಚರರ ಬೆನ್ನು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆಗಾಗಿ 57 ಸಿಸಿಹೆಚ್ ಕೋರ್ಟ್‌ನುಂದ ಅನುಮತಿ ಪಡೆದಿದ್ದಾರೆ. ಬಳ್ಳಾರಿ ಜೈಲಿನಲೇ ಇಂದು & ನಾಳ 2 ದಿನ ವಿಚಾರಣೆ ನಡೆಸಲಿದ್ದಾರೆ. ಇದೇ ವೇಳೆ ಹಣ ಕೊಟ್ಟಿರುವ ಮೋಹನ್ ರಾಜ್, ಹಾಗೂ ಡೆವಿಲ್ ನಿರ್ದೇಶಕ ಸೇರಿದಂತೆ ಕೆಲ ನಿರ್ಮಾಪಕರ ವಿಚಾರಣೆ ನಡೆಸುವ ಸಾದ್ಯತೆಯಿದೆ. ಅಲ್ಲದೆ, ಆರ್‌ಆರ್ ನಗರದ ದರ್ಶನ್ ಮನೆ ಹಾಗೂ ಸಹಚರರ ಮನೆಗೂ ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪೊಲೀಸರ ತನಿಖೆ ವೇಳೆ ಆರೋಪಿಗಳಿಗೆ ದರ್ಶನ್ ನೀಡಿದ್ದ 30,00,000 ರೂಪಾಯಿ ಹಣ ಹಾಗೂ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ಮಾಹಿತಿ ಕೇಳಲಿದ್ದಾರೆ. ಬಳಿಕ ಯಾವ ಮೂಲದಿಂದ ಹಣ ಪಡೆದಿದ್ದೀರಾ ಅದು ಯಾರಿಗೆ ಸೇರಿದ ಹಣ? ಅಷ್ಟು ಹಣವನ್ನ ನೀವೂ ಬೇರೆಯವರಿಂದ ಪಡೆಯಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ದಾಖಲಾತಿ ನೀಡದೆ ಹಣದ ಮೂಲ ತಿಳಿಸದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಇನ್ನು ಪ್ರಜರಣದ ಬಂಧಿಯಾಗಿರುವ ನಟ ದರ್ಶನ್ ಬೇಲ್ ಸಿಗದೆ ಕಂಗಲಾಗಿದ್ದಾರೆ. ಮತ್ತೊದೆಡೆ ಇದೀಗ ಜೈಲಲ್ಲೇ ವಿಚಾರಭೆ ನಡೆಸಲು ಐಟಿ ಅಧಿಕಾರಿಗಳು ತಯಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ನಟ ದರ್ಶನ್ ಅವರನ್ನು ಐಟಿ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಲಿದ್ದಾರೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಎ15, 16, ಎ17 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಇನ್ನು ಪವಿತ್ರಾ ಗೌಡಳ ಜಾಮೀನು ಅರ್ಜಿ ವಿಚಾರಣೆ ನಿನ್ನೆ (ಸೆಪ್ಟೆಂಬರ್ 25) ನಡೆದಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆ ಮಾಡಲಾಗಿದೆ. ಅಂದೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.












Click it and Unblock the Notifications