Actor Darshan Bail: ನಟ ದರ್ಶನ್ ಗೆಳತಿಗೆ ಶ್ಯೂರಿಟಿ ಕೊಟ್ಟವರಾರು?
Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 07 ಮಂದಿಗೆ ಹೈಕೋರ್ಟ್ (ಡಿಸೆಂಬರ್ 14) ಜಾಮೀನು ಮಂಜೂರು ಮಾಡಿತ್ತು. ಇನ್ನು ಇಂದು ದರ್ಶನ್ (ಡಿಸೆಂಬರ್ 16) ಸೆಷನ್ಸ್ ಕೋರ್ಟ್‌ಗೆ ಆಸ್ಪತ್ರೆಯಿಂದ ನೇರವಾಗಿ ತೆರಳಿ ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಹಾಗಾದರೆ ಪ್ರಕರಣದ ಎ1 ಆರೋಪಿ ಪವಿತ್ರಾಗೆ ಶ್ಯೂರಿಟಿ ಕೊಟ್ಟವರು ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೆಂಗೇರಿಯಲ್ಲಿರು ಬಿಜಿಎಸ್ ಆಸ್ಪತ್ರೆಯಿಂದ ನಟ ದರ್ಶನ್ ನೇರವಾಗಿ 57ನೇ ಸಿಸಿಎಚ್ ಕೋರ್ಟ್‌ಗೆ ತೆರಳು ಜಾಮೀನು ಪ್ರಕ್ರಿಯೆ ಪೂರ್ಣಗೊಳಿಕೊಂಡಿದ್ದಾರೆ. ನಟ ದರ್ಶನ್ ಅವರ ಶ್ಯೂರಿಟಿ ಬಗ್ಗೆ ನ್ಯಾಯಾಧೀಶರು ವಿಚಾರಣೆ ಮಾಡಿದಾಗ, ದರ್ಶನ್‌ಗೆ ಸಹೋದರ ದಿನಕರ್ ಹಾಗೂ ನಟ ಧನ್ವೀರ್ ಶ್ಯೂರಿಟಿ ನೀಡಿದ್ದು, ಇದನ್ನೇ ಪರಿಗಣಿಸುವಂತೆ ನ್ಯಾಯಧೀಶರ ಬಳಿ ವಕೀಲರು ಮನವಿ ಮಾಡಿದರು.

ಇನ್ನು ದರ್ಶನ್ ಮುಂದೆಯೇ ಕೊಲೆ ಪ್ರಕರಣದ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಶ್ಯೂರಿಟಿ ಪ್ರಕ್ರಿಯೆ ಸಹ ನಡೆದಿದ್ದು, ಪವಿತ್ರಾ ಗೌಡಗೆ ಒಬ್ಬ ಮಹಿಳೆ ಹಾಗೂ ತಲಘಟ್ಟಪುರ ಮೂಲದ ಮನೀಶ್ ಎಂಬುವವರು ಶ್ಯೂರಿಟಿ ನೀಡಿದ್ದಾರೆ. ಚಾಮರಾಜಪೇಟೆ ಹಾಗೂ ತಲಘಟ್ಟಪುರದ ಆಸ್ತಿ ಪತ್ರ ಹಿಡಿದು ಬಂದ ಮನೀಶ್ ಎಂಬುವರು ಪವಿತ್ರಾ ಗೌಡಗೆ ಶ್ಯೂರಿಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನಟ ದರ್ಶನ್‌ಗೆ 57ನೇ ಸಿಸಿಎಚ್ ಕೋರ್ಟ್‌ನಲ್ಲಿ 1 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ಶೂರಿಟಿ ನೀಡಿದ್ದಾರೆ. ಬಾಂಡ್‌ಗೆ ನಟ ದರ್ಶನ್ ಕೂಡ ಸಹಿ ಹಾಕಿದರು. ಬಳಿಕ ನಟ ದರ್ಶನ್ ಜಾಮೀನು ಪ್ರಕ್ರಿಯೆ ಮುಗಿಸಿಕೊಂಡು ವಾಪಾಸಾಗಿದ್ದಾರೆ. ಆಸ್ಪತ್ರೆಯಲ್ಲೂ ಡಿಸ್ಟಾರ್ಜ್ ಪ್ರಕ್ರಿಯೆ ಮುಗಿಸಿದ ನಟ ದರ್ಶನ್ ಚೆಕ್ ಅಪ್‌ಗಾಗಿ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಹೋಗುವ ಸಾಧ್ಯತೆಯಿದೆ. ಇದೀಗ ಎಲ್ಲಾ ಪ್ರಕ್ರಿಯೆಯನ್ನೂ ಮುಗಿಸಿರುವ ನಟ ದರ್ಶನ್ ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅವರ ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡದಿದ್ದರೆ, ಪಾರ್ಶ್ವವಾಯು ಆಗುತ್ತದೆ ಎಂದು ವೈದ್ಯರು ವರದಿ ನೀಡಿದ್ದರು. ಈ ಹಿನ್ನೆಲೆ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಹೊರಗಡೆ ಬಂದು ಆಸ್ಪತ್ರೆ ಸೇರಿದ್ದರು. ಆದರೆ ಹೊರಗಡೆ ಬಂದು ಒಂದೂವರೆ ತಿಂಗಳು ಆದರೂ ಕೂಡ ದರ್ಶನ್‌ಗೆ ಯಾಗುವೇ ಶಸ್ತ್ರಚಿಕಿತ್ಸೆ ಆಗಿಲ್ಲ. ಬಿಪಿ ಕಾರಣಕ್ಕೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಿಕೆ ಮಾಡಿದ್ದರು.
ಡಿಸೆಂಬರ್ 11ಕ್ಕೆ ಆಪರೇಷನ್ ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಆದರೆ ಸರ್ಜರಿ ಆಗಿಲ್ಲ. ಹೀಗೆ ದರ್ಶನ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿದ್ದಾರೆ ಎನ್ನುವ ಕಾರಣಕ್ಕೆ ನಟ ದರ್ಶನ್ & ಗ್ಯಾಂಗ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದರು ಎಂದು ಪ್ರಕರಣದ ದಾಖಲಾಗಿತ್ತು.
ಬೆನ್ನು ನೋವು ಹಿನ್ನೆಲೆ ನಟ ದರ್ಶನ್ ಬಳ್ಳಾರಿ ಜೈಲಿನಿಂದ ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆ ಸೇರಿದ್ದರು. ಇನ್ನು ಮೊನ್ನೆಯಷ್ಟೇ ನಟ ದರ್ಶನ್‌ಗೆ ಜಾಮೀನು ಮಂಜೂರು ಆಗಿದ್ದು, ಇಂದು ಜಾಮೀನು ಪ್ರಕ್ರಿಯೆಯನ್ನು ಮುಗಿಸಿಕೊಂಡು ಪತ್ನಿ ಮನೆಗೆ ನೇರವಾಗಿ ನಟ ದರ್ಶನ್ ವಾಪಾಸಾಗಿದ್ದಾರೆ.












Click it and Unblock the Notifications