Actor Darshan: ನಟ ದರ್ಶನ್ ವಿರುದ್ಧ ತಿರುಗಿಬಿದ್ರಾ ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳು.? ಆಗ್ತಿರೋದಾದ್ರೂ ಏನು?
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ & ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಇನ್ನು ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಈ ನಡುವೆಯೇ ಮತ್ತೊಂದು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪತಿ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಇದ್ಯಾವುದೂ ಕೂಡ ಪೊಲೀಸರು ಕಲೆ ಹಾಕಿರುವ ಸಾಕ್ಷ್ಯಗಳ ಮುಂದೆ ನಡೆಯುವುದಿಲ್ಲ ಎನ್ನಲಾಗಿದೆ. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಈಗಾಗಲೇ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದು, ಇದು ದರ್ಶನ್‌ನನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಉಳಿದ ಆರೋಪಿಗಳು ಜೈಲು ಸೇರಿ 2 ತಿಂಗಳು ಅಂದರೆ 60 ದಿನ ಕಳೆದಿವೆ. ಇನ್ನು ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ಬಳಿಕ 10 ವರ್ಷಗಳ ಎಳ್ಳುನೀರು ಬಿಟ್ಟಾಂತಾಯ್ತ ಎನ್ನುವ ಪ್ರಶ್ನೆಗಳು ಉದ್ಭವವಾಗಿವೆ. ಏಕೆಂದರೆ ಜೈಲು ಸೇರಿದ ಬಳಿಕ ಶರೋಪಿಗಳ ಮಧ್ಯೆಯೇ ದೊಡ್ಡ ಬಿರುಕು ಉಂಟಾಗಿದೆ ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.
ಇದನ್ನು ಗಮನಿಸಿದರೆ, ಇದೀಗ ಹೊರಬರಲು ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ತಮ್ಮದೇ ಆದ ಹಾದಿ ಹಿಡಿದಿದ್ದಾರಾ ಎನ್ನುವ ಶಂಕೆಗಳು ಕೂಡ ವ್ಯಕ್ತವಾಗಿವೆ. ನೀನೆ ಎಲ್ಲಾ, ನಿನಗಾಗಿಯೇ ಎಲ್ಲಾ ಎನ್ನುತ್ತಿದ್ದವರು ಇದೀಗ ನಾನೊಂದು ತೀರಾ. ನೀನೊಂದು ತೀರಾ ಎನ್ನುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಎಲ್ಲಾ ಆರೋಪಿಗಳು ಪ್ರತ್ಯೇಕವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಯಾರೇನಾದ್ರೂ ಮಾಡಿಕೊಳ್ಳಲಿ ನಾವು ಮೊದಲು ಹೊರಗಡೆ ಬರಬೇಕು ಎನ್ನುವ ಹಾದಿಯನ್ನು ತುಳಿದಿದ್ದಾರೆ ಎನ್ನಲಾಗಿದೆ.
ಇನ್ನು ಜೈಲಿನಲ್ಲಿ ವಾರಕ್ಕೊಮ್ಮೆ ಭೇಟಿಯಾಗುವ ಅವಕಾಶ ಇದ್ದರೂ ಕೂಡ ಇದುವರೆಗೂ ಒಂದು ಬಾರಿಯೂ ಕೂಡ ದರ್ಶನ್-ಪವಿತ್ರಾ ಗೌಡ ಪರಸ್ಪರ ಭೇಟಿಯಾಗಲೂ ಪತ್ರಯತ್ನವನ್ನೂ ನಡೆಸಿಲ್ಲ. ಇವರಿಬ್ಬರ ನಡುವಿನ ಸಂಬಂಧ ಮುರಿದುಬಿದ್ದಿದೆ ಎನ್ನಲಾಗಿದೆ.
ಈಗಾಗಲೇ ನಟ ದರ್ಶನ್‌ನನ್ನು ಪತ್ನಿ ವಿಜಯಲಕ್ಷ್ಮಿ, ಸಿನಿತಾರೆಯರು ಭೇಟಿ ಮಾಡುತ್ತಲೇ ಇದ್ದಾರೆ. ಹಾಗೆಯೇ ಇಂದು (ಆಗಸ್ಟ್ 22) ನಟಿ ರಚಿತಾ ರಾಮ್ ನಟ ದರ್ಶನ್‌ನನ್ನು ಭೇಟಿಯಾಗಿ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಇನ್ನೂ ಭೇಟಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಚಿತಾ ರಾಮ್, ದರ್ಶನ್ ನನ್ನ ಪಾಲಿನ ದೇವರು, ಅವರು ನನಗೆ ಆ ಒಂದು ಅವಕಾಶ ಕೊಡದಿದ್ದರೆ, ನಾನು ಇವತ್ತು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಅವರ ಬ್ಯಾನರ್‌ನಲ್ಲೇ ಅವಕಾಶ ಕೊಟ್ಟು, ನನಗೆ ತುಂಬಾ ಸಹಾಯ ಮಾಡಿದರು. ಆದರೆ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಆಗುವುದಿಲ್ಲ, ರಾಜ ರಾಜನ ರೀತಿ ಇರಬೇಕು ಎಂದು ದರ್ಶನ್‌ನನ್ನು ಹೊಗಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.












Click it and Unblock the Notifications