ಡಾಲಿ ಈ ನಟಿಯನ್ನೇ ಮದುವೆಯಾಗ್ತಾರೆ ಎನ್ನುವ ನೀರಿಕ್ಷೆ ಇತ್ತು: ನಟ ಧನಂಜಯ್‌ ಉತ್ತರವೇನು?

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರ ಭಾಷೆಯಲ್ಲೂ ಬಹುಬೇಡಿಕೆಯ ನಟರಾಗಿರುವ ಡಾಲಿ ಧನಂಜಯ್‌ ಹಸೆಮಣೆ ಏರಲು ಸಜ್ಜಾಗಿದ್ದು, ಡಾಕ್ಟರ್ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ದಿನದಂದು ಡಾಲಿ ಧನಂಜಯ್‌ ಈ ಖುಷಿಯ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಧನಂಜಯ್‌ ನಟಿಯನ್ನೇ ಮದುವೆಯಾಗುತ್ತಾರೆ ಎನ್ನುವ ಊಹಾಪೋಹಗಳಿಗೆ ಈ ಮೂಲಕ ತೆರೆ ಎಳೆದಿದ್ದರು.

ವಿಶೇಷವಾದ ವಿಡಿಯೋ ಮೂಲಕ ಡಾಲಿ ಧನಂಜಯ್‌ ತಮ್ಮ ಭಾವಿ ಪತ್ನಿಯನ್ನು ಎಲ್ಲಿಗೂ ಪರಿಚಯಿಸಿದ್ದರು. ಡಾಕ್ಟರ್ ಧನ್ಯತಾ ಅವರನ್ನು ವರಿಸುವ ಬಗ್ಗೆ ಧನಂಜಯ್‌ ಸುಂದರವಾದ ಕವನದ ಮೂಲಕ ಹಂಚಿಕೊಂಡಿದ್ದರು. ಧನಂಜಯ್‌ ತುಂಬಾ ಇಷ್ಟದ ಊರು ಮೈಸೂರಿನಲ್ಲಿ ಇಬ್ಬರ ಮದುವೆ ಮದುವೆ ನಡೆಯಲಿದ್ದು, ಸದ್ಯ ಸಿದ್ಧತೆಗಳು ಆರಂಭವಾಗಿದೆ.

Actor Daali Dhananjay Talks About His Marriage Preparations

ಈ ಬಗ್ಗೆ ಸ್ವತಃ ಡಾಲಿ ಧನಂಜಯ್ ಮಾತನಾಡಿದ್ದಾರೆ. ಸದ್ಯ ಮದುವೆಯ ಸಿದ್ಧತೆಗಳು ನಡೆಯುತ್ತಿದೆ. ನಾವೇನು ಮಾಡುತ್ತಿಲ್ಲ. ಎಲ್ಲಾ ಮನೆಯವರು ಮಾಡುತ್ತಿದ್ದಾರೆ. ಫೆಬ್ರವರಿ 16ರಂದು ಮೈಸೂರಿನಲ್ಲಿ ಮದುವೆ ನಡೆಯಲಿದೆ. ಸ್ವಲ್ಪ ಮಟ್ಟಿನ ಟೆನ್ಷನ್‌ ಇದೆ. ಎಲ್ಲರನ್ನೂ ಕರೆಯಬೇಕು. ಎಲ್ಲರೂ ಬಂದು ಹೋಗುತ್ತಾರೆ. ಆ ಟೆನ್ಷನ್‌ ಇದೆ ನನಗೆ. ಖಂಡಿತಾ ಸಿದ್ಧತೆಗಳನ್ನು ಮಾಡಬೇಕು ಎಂದರು.

ಇನ್ನು ಸದ್ಯ ಸಿನಿಮಾ ಕೆಲಸಗಳು ನಡೆಯುತ್ತಿದ್ದು, ಬಳಿಕ ಮಧ್ಯ ಶೂಟಿಂಗ್‌ಗಳಿಂದ ಬ್ರೇಕ್‌ ತೆಗೆದುಕೊಂಡು ಮದುವೆ ಸಿದ್ಧತೆಗಳನ್ನು ಮಾಡಬೇಕು ಎಂದು ಹೇಳಿರುವ ಡಾಲಿ ಧನಂಜಯ್, ನಟರಾಗಿದ್ದ ತಾವು ಡಾಕ್ಟರ್‌ಅನ್ನು ಮದುವೆಯಾಗುತ್ತಿರುವ ಬಗ್ಗೆ ಹಾಗೂ ಡಾಲಿ ಧನಂಜಯ್ ನಟಿಯನ್ನೇ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದ ಬಗ್ಗೆ ಮಾತನಾಡಿದ್ದಾರೆ.

Actor Daali Dhananjay Talks About His Marriage Preparations

ಈ ಮದುವೆ ಹಾಗೂ ಜೀವನ ವಿಚಾರದಲ್ಲಿ ಡಾಕ್ಟರ್ ಹಾಗೂ ಆ್ಯಕ್ಟರ್‌ ಎನ್ನುವುದಕ್ಕಿಂತ ಆಲೋಚನೆಗಳು ಸರಿ ಹೊಂದಿದಾಗ ಅವರ ಜೊತೆ ಜೀವನ ಪ್ರಯಾಣ ಚೆನ್ನಾಗಿರುತ್ತದೆ. ಧನ್ಯತಾ ಮಧ್ಯಮ ವರ್ಗದ ಹುಡುಗಿ ಕಷ್ಟಪಟ್ಟು ಓದಿ ಡಾಕ್ಟರ್‌ ಆಗಿದ್ದಾರೆ. ಅವರ ಕೆಲಸದ ಬಗ್ಗೆ ಇರಲಿ, ಅವರ ಯೋಚನೆ ಇರಲಿ ಎಲ್ಲವೂ ನನಗೆ ತುಂಬಾ ಇಷ್ಟ ಆಯ್ತು ಹಾಗಾಗಿ ಜೊತೆಯಲ್ಲಿ ಜೀವನ ನಡೆಸಲು ನಿರ್ಧರಿಸಿದ್ದೇವೆ. ಮದುವೆ ಬಗ್ಗೆ ಮಾತನಾಡುವಾಗ ಇನ್ನಷ್ಟು ವಿಸ್ತ್ರತವಾಗಿ ಎಲ್ಲವನ್ನೂ ಹೇಳುವೆ ಎಂದು ನಟ ಡಾಲಿ ಧನಂಜಯ್‌ ಟಿವಿ 9ಗೆ ನೀಡಿದ ಸಂದರ್ಶನಲ್ಲಿ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+