ಚಿಕ್ಕಣ್ಣ ಡಿ-ಬಾಸ್ ದರ್ಶನ್ ಅವರಿಗಾಗಿ ‘ಎದೆತುಂಬಿ’ ಹಾಡಿದರು!
ಚಿಕ್ಕಣ್ಣ ಮತ್ತು ದರ್ಶನ್ ಅವರ ನಡುವೆ ಅದೆಷ್ಟು ಆತ್ಮೀಯ & ಗಟ್ಟಿಯಾದ ಸ್ನೇಹ ಬಂಧ ಇದೆ ಅನ್ನೋದು ಇಡೀ ಕನ್ನಡ ನಾಡಿಗೆ ಗೊತ್ತು. ಅದರಲ್ಲೂ ನಟ ಚಿಕ್ಕಣ್ಣ ಪದೇ, ಪದೇ ನಟ ದರ್ಶನ್ ಅವರ ಗುಣವನ್ನು ಹಾಡಿ ಹೊಗಳುತ್ತಾರೆ. ಆದರೆ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಟ ದರ್ಶನ್ ಅವರಿಗಾಗಿ ಒಂದು ಹಾಡನ್ನೂ ಹಾಡಿದ್ದಾರೆ. ಅರೆ ಯಾವ ಹಾಡು ಅಂದ್ರಾ? ಚಿಕ್ಕಣ್ಣ ಅವರು ಇದೀಗ ನಟ ದರ್ಶನ್‌ರ ಬಗ್ಗೆ ತೋರಿಸಿದ ಪ್ರೀತಿ ಎಂತಹದ್ದು ಅಂತಾ ತಿಳಿಯಲು ಮುಂದೆ ಓದಿ.
ಸಿನಿಮಾ ರಂಗದಲ್ಲಿ ನಟ ದರ್ಶನ್ 25 ವರ್ಷ ಪೂರೈಸಿದ್ದಾರೆ. ಈ ಸಂಭ್ರಮ ಶ್ರೀರಂಗಪಟ್ಟದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಬೃಹತ್ ಸಮಾರಂಭದಲ್ಲಿ, ಸಂಸದೆ ಸುಮಲತಾ ಅಂಬರೀಶ್ ಸೇರಿ ಸಾಕಷ್ಟು ಗಣ್ಯರು ಭಾಗವಹಿಸಿದ್ದರು. ದರ್ಶನ್ ಆಪ್ತರಾದ ಧನ್ವೀರ್ ಗೌಡ, ಚಿಕ್ಕಣ್ಣ ಸೇರಿ ಝೈದ್‌ಖಾನ್, ವಿನೋದ್ ಪ್ರಭಾಕರ್, ವಿನೋದ್ ರಾಜ್ ಹೀಗೆ ದೊಡ್ಡ ದೊಡ್ಡ ಸ್ಟಾರ್ಸ್ ಭಾಗವಹಿಸಿದ್ದರು. ಈ ವೇಳೆ ನಟ ಚಿಕ್ಕಣ್ಣ ಕೂಡ ಭಾಗವಹಿಸಿ, ಚಾಲೆಂಜಿಂಗ್ ಸ್ಟಾರ್ ಬಗ್ಗೆ ಮಾತನಾಡಿ ಹಾಡು ಹಾಡಿದ್ದಾರೆ. ಹಾಗಾದರೆ ಚಿಕ್ಕಣ್ಣ ಹೇಳಿದ್ದೇನು? ಬನ್ನಿ ತಿಳಿಯೋಣ.

25 ಅಲ್ಲ 50 ವರ್ಷಕ್ಕೂ ಬರ್ತೀವಿ!
ಅಂದಹಾಗೆ ಚಿಕ್ಕಣ್ಣ ಇದೀಗ ದರ್ಶನ್ ಅವರ ಸಿನಿಮಾ ಜರ್ನಿ ಬಗ್ಗೆ ಮಾತನಾಡುವಾಗ, 25 ಮಾತ್ರ ಅಲ್ಲ 50 ವರ್ಷದ ಡಿ-ಬಾಸ್ ಅವರ ಸಿನಿಮಾ ಸಮಾರಂಭಕ್ಕೂ ಬರ್ತೀವಿ. ದೇವರು ನಮಗೆ ಆ ಶಕ್ತಿ ನೀಡಲಿ ಎಂದಿದ್ದಾರೆ ಚಿಕ್ಕಣ್ಣ. ಹಾಗೇ ಇದೇ ವೇಳೆ ನಟ ದರ್ಶನ್ ಅವರ, ಕಾಟೇರ ಸಕ್ಸಸ್ ಬಗ್ಗೆಯೂ ಮಾತನಾಡಿದ ಚಿಕ್ಕಣ್ಣ, ಹಾಡನ್ನೂ ಕೂಡ ಹಾಡಿದ್ದಾರೆ. ಹೀಗೆ ಚಿಕ್ಕಣ್ಣ ಅವರು ದರ್ಶನ್ ಅವರ ಕುರಿತು ಹಾಡು ಹಾಡುವಾಗ ಇಡೀ ಕಾರ್ಯಕ್ರಮ ಭಾವುಕ ಕ್ಷಣಕ್ಕೆ ಸಾಕ್ಷಿ ಆಗಿತ್ತು. ಯಾರೆ ಬಂದರೂ, ಎದುರ್ಯಾರೆ ನಿಂತರೂ, ಪ್ರೀತಿ ಹಂಚುವ ಯಜಮಾನ... ಎಂಬ ಯಜಮಾನ ಸಿನಿಮಾದ ಹಾಡನ್ನು ಹಾಡಿದ್ದಾರೆ ನಟ ಚಿಕ್ಕಣ್ಣ.
ಯಜಮಾನ ಸಿನಿಮಾ ಹಾಡಿನ ಲಿರಿಕ್ಸ್
ಯಾರೆ ಬಂದರೂ, ಎದುರ್ಯಾರೆ ನಿಂತರೂ...
ಪ್ರೀತಿ ಹಂಚುವ ಯಜಮಾನ...
ಜೀವ ಹೋದರು, ಜಗವೇನೆ ಅಂದರೂ...
ಮಾತು ತಪ್ಪದ ಯಜಮಾನ...
ಕೂಗಿ ಕೂಗಿ ಹೇಳುತೈತೆ...
ಇಂದು ಜಮಾನ...
ಸ್ವಾಭಿಮಾನ ನನ್ನ ಪ್ರಾಣ...
ಅನ್ನೋ ಪ್ರಯಾಣ...
ನಿಂತ ನೋಡು ಯಜಮಾನ...
ನಿಂತ ನೋಡು ಯಜಮಾನ...
ಯಾರೆ ಬಂದರೂ, ಎದುರ್ಯಾರೆ ನಿಂತರೂ...
ಪ್ರೀತಿ ಹಂಚುವ ಯಜಮಾನ...
ಒಬ್ಬನೇ ಒಬ್ಬ...
ನಮಗೆಲ್ಲ ಒಬ್ಬನು...
ಯಾರ್ ಹೆತ್ತ ಮಗನೋ...
ನಮಗಾಗಿ ಬಂದನು...
ಮೇಲೂ ಕೀಳು ಗೊತ್ತೆ ಇಲ್ಲ...
ಬಡವಾನು ಗೆಳೆಯಾನೇ...
ಶ್ರೀಮಂತಿಕೆ ತಲೆಗತ್ತೆ ಇಲ್ಲ...
ಹತ್ತೂರ ಒಡೆಯನೇ...

ನಿನ್ನ ಹೆಸರು, ನಿಂದೆ ಬೆವರು...
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ...
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ...
ನಿಂತ ನೋಡು ಯಜಮಾನ...
ನಿಂತ ನೋಡು ಯಜಮಾನ...
ಯಾರೆ ಬಂದರೂ, ಎದುರ್ಯಾರೆ ನಿಂತರೂ...
ಪ್ರೀತಿ ಹಂಚುವ ಯಜಮಾನ...
ಬಿರುಗಾಳಿ ಎದುರು ನಗುವಂತ ದೀಪ...
ನೋವನ್ನು ಮರೆಸೋ ಮಗುವಂತ ರೂಪ...
ಯಾವುದೇ ಕೇಡು ತಾಕದು...
ನಿನಗೆ ಕಾಯುವುದು ಅಭಿಮಾನ...
ಸೋಲುಗೂ ಸೋಲದ ಗೆದ್ದರೂ ಬೀಗದ...
ಒಬ್ಬರೇ ನಮ್ ಯಜಮಾನ...
ಪ್ರೀತಿಗೆ ಅತಿಥಿ, ಸ್ನೇಹಕ್ಕೆ ಸಾರಥಿ...
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು...
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು...
ನಿಂತ ನೋಡು ಯಜಮಾನ...
ನಿಂತ ನೋಡು ಯಜಮಾನ...
ಅಭಿಮಾನಿಗಳಿಗೂ ಹೆಮ್ಮೆಯ ವಿಷಯ
ಒಟ್ನಲ್ಲಿ ಚಿಕ್ಕಣ್ಣ & ದರ್ಶನ್ ಅವರ ನಡುವಿನ ಪ್ರೀತಿ ವಿಶ್ವಾಸ ಮತ್ತೊಮ್ಮೆ ಇಡೀ ಜಗತ್ತಿಗೇ ಗೊತ್ತಾಗಿದೆ. ಇದರ ಜೊತೆಗೆ, ನಟ ದರ್ಶನ್ ಅಭಿಮಾನಿ ಬಳಗ ಕೂಡ ಚಿಕ್ಕಣ್ಣ ಅವರ ಈ ಮಾತು ಕೇಳಿ ಭಾವುಕರಾಗಿದ್ದಾರೆ. ಚಿಕ್ಕಣ್ಣರ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಟ ದರ್ಶನ್ ಅವರ 25 ವರ್ಷಗಳ ಜರ್ನಿ ಬಗ್ಗೆ ಅಭಿಮಾನಿಗಳು ಇದೀಗ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ.












Click it and Unblock the Notifications